ಚಿತ್ರದುರ್ಗ ನ್ಯೂಸ್.ಕಾಂ:
ಜಿಲ್ಲೆಯಲ್ಲಿ ನಾಯಿ ಕಚ್ಚುವಿಕೆ ಪ್ರಕರಣಗಳು ಮಾತ್ರವಲ್ಲ, ನಾಯಿಗಳಿಂದ ಆಗುತ್ತಿರುವ ಅಪಘಾತಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ.
ಬೆಲಗೂರಿನಲ್ಲಿ ಬೈಕಿಗೆ ಅಡ್ಡ ಬಂದ ನಾಯಿ ತಪ್ಪಿಸಲು ಹೋಗಿ ಬೈಕ್ ಸವಾರ ಬಿದ್ದು ಮೃತಪಟ್ಟ ವರದಿಯ ಬೆನ್ನಲ್ಲೇ ನಾಯಕನಹಟ್ಟಿಯಲ್ಲಿ ಮತ್ತೊಂದು ಘಟನೆ ಜರುಗಿದೆ.
ನಾಯಕನಹಟ್ಟಿ ಪಟ್ಟಣದ ಕೆಇಬಿ ಕಚೇರಿ ಮುಂದಿನ ತಳುಕು-ನಾಯಕನಹಟ್ಟಿ ರಸ್ತೆಯಲ್ಲಿ ಡಿ.11 ರಂದು ಆಟೋಗೆ ನಾಯಿ ಅಡ್ಡ ಬಂದಿದ್ದು, ಅದನ್ನು ತಪ್ಪಿಸಲು ಆಟೋ ಚಾಲಕ ಪ್ರಯತ್ನಿಸುವ ವೇಳೆ ಪಲ್ಟಿಯಾಗಿದೆ.
ಇದನ್ನೂ ಓದಿ: ಬೈಕ್ ಅಡ್ಡಗಟ್ಟಿ ಒಂದೂವರೆ ಕೋಟಿ ದರೋಡೆ
ಈ ಅಪಘಾತದಲ್ಲಿ ಚಳ್ಳಕೆರೆ ತಾಲೂಕಿನ ಗಿಡ್ಡಾಪುರ ನಿವಾಸಿ 38 ವರ್ಷದ ತಿಪ್ಪೇಸ್ವಾಮಿ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ನಾಯಕನಹಟ್ಟಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಇಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ಕರೆತಂದಿದ್ದು, ಇಲ್ಲಿ ಪರೀಕ್ಷಿಸಿದ ವೈದ್ಯರು ತಿಪ್ಪೇಸ್ವಾಮಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಇದೇ ಅಪಘಾತದಲ್ಲಿ ಆಟೋ ಚಾಲಕ ಗಿಡ್ಡಾಪುರದ ಟಿ.ತಿರುಮಲೇಶ್ ಕೂಡಾ ಗಾಯಗೊಂಡಿದ್ದಾರೆ. ಪ್ಯಾಸೆಂಜರ್ ಆಟೋ ಸಂಪೂರ್ಣ ಜಖಂ ಆಗಿದೆ.
ಈ ಬಗ್ಗೆ ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number