ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿ | ಹೊಳಲ್ಕೆರೆಯಲ್ಲಿ ತಿರಂಗಾ ಯಾತ್ರೆ | ಶಾಸಕ ಎಂ.ಚಂದ್ರಪ್ಪ ಭಾಗೀ

ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿ | ಹೊಳಲ್ಕೆರೆಯಲ್ಲಿ ತಿರಂಗಾ ಯಾತ್ರೆ | ಶಾಸಕ ಎಂ.ಚಂದ್ರಪ್ಪ ಭಾಗೀ

CHITRADURGA NEWS | 09 JUNE 2025

ಹೊಳಲ್ಕೆರೆ: ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ಕರೆಯ ಮೇರೆಗೆ ದೇಶಾದ್ಯಂತ ತಿರಂಗಾ ಯಾತ್ರೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ನಡೆಸಿದ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿತ್ತು.

Also Read: ಮುಂಗಾರು ಪೂರ್ವದಲ್ಲಿ ಕೃಷಿಕರಿಗೆ ಖುಷಿ ಕೊಟ್ಟ ಮಳೆರಾಯ ನಾಪತ್ತೆ

ತಿರಂಗಾ ಯಾತ್ರೆಯಲ್ಲಿ ಶಾಸಕ ಎಂ.ಚಂದ್ರಪ್ಪ ಭಾಗವಹಿಸಿ ಮಾತನಾಡಿ, ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿ 26 ಮಂದಿ ಅಮಾಯಕರನ್ನು ಬಲಿತೆಗೆದುಕೊಂಡಿದ್ದಕ್ಕೆ ಪ್ರತೀಕಾರವಾಗಿ ನಮ್ಮ ಯೋಧರು ಪಾಕಿಸ್ಥಾನದಲ್ಲಿದ್ದ ಉಗ್ರರ ಅಡಗು ತಾಣಗಳನ್ನು ಪತ್ತೆ ಹೆಚ್ಚಿ ನಾಶಪಡಿಸಿರುವುದನ್ನು ಇಡೀ ವಿಶ್ವವೇ ಮೆಚ್ಚಿಕೊಂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಆಪರೇಷನ್ ಸಿಂಧೂರ ಮೂಲಕ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ ನಮ್ಮ ದೇಶದ ಯೋಧರಿಗೆ ಭಾರತದ 140 ಕೋಟಿ ಜನರು ಸಲಾಂ ಹೇಳಬೇಕು.

ಯೋಧರು ದೇಶದ ಗಾಡಿ ಕಾಯುತ್ತಿರುವುದರಿಂದ ಪ್ರತಿಯೊಬ್ಬರು ನೆಮ್ಮದಿಯಾಗಿ ಜೀವಿಸುತ್ತಿದ್ದೇವೆ. ನಮ್ಮ ದೇಶದ ಕೆಚ್ಚೆದೆಯ ಯೋಧರು ಪ್ರಪಂಚದ ಬೇರೆ ಎಲ್ಲಿಯೂ ಸಿಗುವುದಿಲ್ಲ. ಅಮೇರಿಕಾ, ರಷ್ಯ, ಜಪಾನ್ ಸೇರಿದಂತೆ ಅನೇಕ ಮುಂದುವರೆದ ದೇಶಗಳು ನಮ್ಮ ಯೋಧರ ಕೆಚ್ಚೆದೆ, ಸಾಹಸವನ್ನು ಕಂಡು ನಿಬ್ಬೆರಗಾಗಿವೆ.

Also Read: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?

ಭಯೋತ್ಪಾದಕರನ್ನು ಬಗ್ಗು ಬಡಿಯುವುದಕ್ಕಾಗಿಯೇ ಅತ್ಯಾಧುನಿಕ ಶಾಸ್ತ್ರಸ್ತ್ರ ಗಳನ್ನು ಭಾರತದಲ್ಲಿಯೇ ತಯಾರು ಮಾಡಲಾಗುತ್ತದೆ. ಚಳ್ಳಕೆರೆ ಸಮೀಪವಿರುವ ಡಿ.ಆರ್.ಡಿ.ಓ.ದಲ್ಲಿ ಬ್ರಹ್ಮೋಸ್ ಕ್ಷಿಪಣಿ ಹಾಗೂ ರಫೇಲ್ ಯುದ್ದ ವಿಮಾನ ತಯಾರು ಮಾಡುವ ಕುರಿತು ಮಾತುಕತೆ ನಡೆಯುತ್ತಿದೆ.

ದೇಶಕ್ಕೆ ಅಪಾಯ ಎದುರಾದ ಸಂದರ್ಭದಲ್ಲಿ ಭಾರತದ 140 ಕೋಟಿ ಜನರು ಒಗ್ಗಟ್ಟು ದೇಶಾಭಿಮಾನ ಪ್ರದರ್ಶಿಸುವಂತೆ ಶಾಸಕ ಡಾ.ಎಂ.ಚ0ದ್ರಪ್ಪ ಮನವಿ ಮಾಡಿದರು.

ಈ ವೇಳೆ ಬಿಜೆಪಿ ಮುಖಂಡರುಗಳಾದ ಸಂಪತ್‌ಕುಮಾರ್, ವೆಂಕಟೇಶ್‌ಯಾದವ್, ನಾಗರಾಜ್‌ಬೇದ್ರೆ, ಚಂದ್ರು ವಿ.ಎಸ್.ಹಳ್ಳಿ, ಹೊಳಲ್ಕೆರೆ ಬಿಜೆಪಿ. ಮಂಡಲ ಅಧ್ಯಕ್ಷ ನಾರದಮುನಿ ವಸಂತ್, ಮಾಜಿ ಅಧ್ಯಕ್ಷ ಸಿದ್ದೇಶ್, ಪುರಸಭೆ ಮಾಜಿ ಅಧ್ಯಕ್ಷ ಆರ್.ಎ.ಅಶೋಕ್, ಸದಸ್ಯರುಗಳು ತಿರಂಗಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

Share This Article
Leave a Comment

Leave a Reply

Your email address will not be published. Required fields are marked *

Exit mobile version