Connect with us

    ಬೈಕು ಅಡ್ಡಗಟ್ಟಿ ಒಂದೂವರೆ ಕೋಟಿ ರೂ. ದರೋಡೆ | ಅಡಿಕೆ ವ್ಯಾಪಾರದ ಹಣ

    ಚಿತ್ರದುರ್ಗ ಗ್ರಾಮಾಂತರ ಠಾಣೆ

    ಕ್ರೈಂ ಸುದ್ದಿ

    ಬೈಕು ಅಡ್ಡಗಟ್ಟಿ ಒಂದೂವರೆ ಕೋಟಿ ರೂ. ದರೋಡೆ | ಅಡಿಕೆ ವ್ಯಾಪಾರದ ಹಣ

    ಚಿತ್ರದುರ್ಗ ನ್ಯೂಸ್.ಕಾಂ:

    ರಸ್ತೆಗೆ ಕಾರು ಅಡ್ಡಗಟ್ಟಿ ಐದು ಜನರ ಗ್ಯಾಂಗ್ ದಾಳಿ ನಡೆಸಿ ಹಣದ ಬ್ಯಾಗ್ ಕಿತ್ತುಕೊಂಡು ಹೋಗಿರುವ ಘಟನೆ ನಗರದ ಹೊರವಲಯದ ಈಚಲನಾಗೇನಹಳ್ಳಿ ಬಳಿ ನಡೆದಿದೆ.

    ಚಿತ್ರದುರ್ಗ ತಾಲೂಕಿನ ಹೊಸಹಳ್ಳಿ ಗ್ರಾಮದ ಮಹಮ್ಮದ್ ಇರ್ಫಾನುಲ್ಲಾ ಹಾಗೂ ಆತನ ಸ್ನೇಹಿತ ಝಾಕೀರ್ 1.50 ಕೋಟಿ ರೂ. ಹಣದ ಬ್ಯಾಗ್‍ನೊಂದಿಗೆ ಹೋಗುತ್ತಿದ್ದಾಗ ಈಚಲನಾಗೇನಹಳ್ಳಿ ಖಾದಿ ಕೇಂದ್ರದ ಬಳಿ ಕಾರು ಅಡ್ಡ ಹಾಕಿದ ಐದು ಜನರ ತಂಡ ಮಾರಾಕಾಸ್ತ್ರಗಳನ್ನು ತೊರಿಸಿ, ಬೆದರಿಸಿ, ಕೈ ಕಾಲುಗಳಿಂದ ಹಲ್ಲೆ ನಡೆಸಿ ಹಣ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ದೂರು ದಾಖಲಾಗಿದೆ.

    ಮಹಮ್ಮದ್ ಇರ್ಫಾನುಲ್ಲಾ ಅವರ ಅಣ್ಣ ಮಹಮ್ಮದ್ ಸಮೀವುಲ್ಲಾ ಅಡಿಕೆ ವ್ಯಾಪಾರ ಮಾಡಿಕೊಂಡಿದ್ದು, ಹೈದಾರಾಬಾದ್‍ನಲ್ಲಿ ಅಡಿಕೆಗೆ ಸಂಬಂಧಪಟ್ಟ ಹಣ ಬರಬೇಕಾಗಿತ್ತು. ಅದನ್ನು ತೆಗೆದುಕೊಂಡು ಬರಲು ತಮ್ಮ ಇರ್ಫಾನುಲ್ಲಾ ಅವರನ್ನು ಕಳಿಸಿದ್ದರು.

    ಇದನ್ನೂ ಓದಿ: 6 ಲಕ್ಷ ರೂ. ಮೌಲ್ಯದ ಬೆಳ್ಳುಳ್ಳಿ ಕಳ್ಳತನ

    ಡಿ.3 ರಂದು ರಾತ್ರ ಹಣ ತೆಗೆದುಕೊಂಡು ಬಂದು, ಚಿತ್ರದುರ್ಗದ ಸಂಬಂಧಿಕರ ಮನೆಯಲ್ಲಿದ್ದ ಬೈಕ್ ತೆಗೆದುಕೊಂಡು ಸ್ನೇಹಿತ ಝಾಕೀರ್ ಜೊತೆಗೆ ಡಿ.4ರಂದು ಬೆಳಗಿನ ಜಾವ ಈಚಲನಾಗೇನಹಳ್ಳಿ ಮಾರ್ಗವಾಗಿ ಹೊಸಹಳ್ಳಿಗೆ ತೆರಳುವಾಗ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

    ಸ್ಥಳಕ್ಕೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ತನಿಖೆ ಕೈಗೊಂಡಿದ್ದಾರೆ.
    ಕಳೆದೊಂದು ತಿಂಗಳಿಂದ ಜಿಲ್ಲೆಯಲ್ಲಿ ಹಣದ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರು ಹೆಚ್ಚು ಜಾಗೃತೆ ವಹಿಸಬೇಕಾಗಿದೆ. ಇತ್ತೀಚೆಗೆ ಹೊಸದುರ್ಗದಲ್ಲಿ ಬ್ಯಾಂಕ್‍ನಿಂದ ಹತ್ತು ಲಕ್ಷ ರೂ. ಬಿಡಿಸಿಕೊಂಡು ಕಾರಿನಲ್ಲಿಟ್ಟಿದ್ದಾಗ ಗಾಜು ಹೊಡೆದು ಕಳ್ಳತನ ಮಾಡಲಾಗಿತ್ತು.

    ಆನಂತರ ಹಿರಿಯೂರಿನಲ್ಲಿ ಕೂಡಾ ಇಂಥದ್ದೇ ಪ್ರಕರಣದಲ್ಲಿ ಹಣ ಕಳ್ಳತನ ನಡೆದಿತ್ತು. ಸೋಮವಾರ ತಡರಾತ್ರಿ ಹಿರಿಯೂರು ತಾಲೂಕಿನ ಬಬ್ಬೂರು ಗ್ರಾಮದಲ್ಲಿ ಕೂಡಾ ಸರಣಿ ಕಳ್ಳತನ ಪ್ರಕರಣಗಳು ನಡೆದಿರುವುದು ಆತಂಕ ಹೆಚ್ಚಾಗುವಂತೆ ಮಾಡಿದೆ.

    Click to comment

    Leave a Reply

    Your email address will not be published. Required fields are marked *

    More in ಕ್ರೈಂ ಸುದ್ದಿ

    To Top