ಮುಖ್ಯ ಸುದ್ದಿ
ಮಾ.10 ರಂದು ಕನ್ನಡ ಹಬ್ಬ, ಪ್ರಶಸ್ತಿ ಪ್ರಧಾನ ಸಮಾರಂಭ | ಕೆ.ಟಿ.ಶಿವಕುಮಾರ್

CHITRADURGA NEWS | 08 MARCH 2024
ಚಿತ್ರದುರ್ಗ : ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಕರುನಾಡ ವಿಜಯಸೇನೆಯಿಂದ ಮಾ.10 ರಂದು ಸಂಜೆ 5.40ಕ್ಕೆ ಕನ್ನಡ ಹಬ್ಬ, ಪ್ರಶಸ್ತಿ ಪ್ರಧಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ತಿಳಿಸಿದರು.
ಇದನ್ನೂ ಓದಿ: ರೋಗಿಗಳಿಗೆ ಸಿಹಿ ಸುದ್ದಿ ನೀಡಿದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖ್ಯಾತ ಜನಪದ ಗಾಯಕ ಡಾ.ಮಹದೇವಸ್ವಾಮಿ ಮಳವಳ್ಳಿ ಇವರಿಗೆ ರಾಜಾವೀರ ಮದಕರಿನಾಯಕ ಪ್ರಶಸ್ತಿ, ಲೇಖಕಿ ಬಾ.ಹ. ರಮಾಕುಮಾರಿ ಇವರಿಗೆ ಒನಕೆ ಓಬವ್ವ ಪ್ರಶಸ್ತಿ ಹಾಗೂ ಇಪ್ಪತ್ತು ಸಾವಿರ ರೂ.ಗಳ ನಗದು ನೀಡಿ ಗೌರವಿಸಲಾಗುವುದು. ಸರಿಗಮಪ ಖ್ಯಾತಿಯ ಗಾಯಕರು ಹಾಗೂ ಗಿಚ್ಚಿಗಿಲಿಗಿಲಿ ತಂಡದಿಂದ ಮನೋರಂಜನಾ ಕಾರ್ಯಕ್ರಮವಿರುತ್ತದೆ.
ಇದನ್ನೂ ಓದಿ: ಚನ್ನಗಿರಿ ಅಡಿಕೆ ಮಾರುಕಟ್ಟೆಯಲ್ಲಿ ರಾಶಿ ಬೆಲೆ 159 ರೂ. ಹೆಚ್ಚಳ
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿಯವರಿಗೆ ಕೋಟೆ ನಾಡಿನ ರಾಜಕೀಯ ಭೀಷ್ಮ, ಡಿ.ಡಿ.ಪಿ.ಐ. ಕೆ.ರವಿಶಂಕರ ರೆಡ್ಡಿಗೆ ಕೋಟೆನಾಡಿನ ಶಿಕ್ಷಣ ಕ್ರಾಂತಿಕಾರಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪನವರಿಗೆ ಕೋಟೆ ನಾಡಿನ ರಾಜಕೀಯ ಸುಪುತ್ರ ಬಿರುದು ನೀಡಿ ಸನ್ಮಾನಿಸಲಾಗುವುದು. ಇದಲ್ಲದೆ ಸಮಾಜದ ಕೊಳೆ ತೊಳೆಯುವವರು, ಪಾದರಕ್ಷೆ ಹೊಲಿಯುವವರು, ಕ್ಷೌರಿಕರು, ಅನಾಥ ಶವಗಳನ್ನು ಸಂಸ್ಕಾರ ಮಾಡುವವರು, ಬಟ್ಟೆ ಇಸ್ತ್ರಿ ಮಾಡುವವರು, ಪೌರ ಕಾರ್ಮಿಕರು, ಆಸ್ಪತ್ರೆಗಳಲ್ಲಿ ಶವ ಪೋಸ್ಟ್ ಮಾಟರ್ಂ ನಡೆಸುವವರನ್ನು ಗುರುತಿಸಿ ಗೌರವಿಸಲಾಗುವುದೆಂದು ಹೇಳಿದರು.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕನ್ನಡದ ಹಬ್ಬವನ್ನು ಸವಿಯುವಂತೆ ಕೆ.ಟಿ.ಶಿವಕುಮಾರ್ ವಿನಂತಿಸಿದರು.
ಕರುನಾಡ ವಿಜಯಸೇನೆ ಮಹಿಳಾ ಘಟಕದ ಅಧ್ಯಕ್ಷೆ ವೀಣಗೌರಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ಕಾರ್ಯದರ್ಶಿ ಅಣ್ಣಪ್ಪ, ನಿಸಾರ್ ಅಹಮದ್, ಉಪಾಧ್ಯಕ್ಷೆ ರತ್ನಮ್ಮ, ಪ್ರದೀಪ್, ಜಗದೀಶ್ ಪಿ. ಸುರೇಶ್, ವಿದ್ಯಾರ್ಥಿ ಘಟಕದ ಅಖಿಲೇಶ್, ಮಣಿಕಂಠ, ಹರೀಶ್ ಕುಮಾರ್, ಸಂತೋಷ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
