Connect with us

    Adumalleshwara Zoo: ಆಹಾ ಬನ್ನಿ ಜೋಗಿಮಟ್ಟಿ – ಆಡುಮಲ್ಲೇಶ್ವರದ ಸೊಬಗ ನೋಡಿ | ವೀಡಿಯೋ ಸ್ಟೋರಿ

    Adumalleshwara mini zoo

    ಮುಖ್ಯ ಸುದ್ದಿ

    Adumalleshwara Zoo: ಆಹಾ ಬನ್ನಿ ಜೋಗಿಮಟ್ಟಿ – ಆಡುಮಲ್ಲೇಶ್ವರದ ಸೊಬಗ ನೋಡಿ | ವೀಡಿಯೋ ಸ್ಟೋರಿ

    CHITRADURGA NEWS | 11 AUGUST 2024

    ಚಿತ್ರದುರ್ಗ: ಆಹಾ ಜೋಗಿಮಟ್ಟಿ ಅರಣ್ಯ ಪ್ರದೇಶದ ಸೊಬಗು, ಆ ಸೊಬಗಿನ ಸೆರಗಿನಲ್ಲಿರುವ ಆಡುಮಲ್ಲೇಶ್ವರವೆಂಬ ಅದ್ಬುತ. ಸ್ವರ್ಗ ನಮ್ ದುರ್ಗ ಎನ್ನುವ ಚಿತ್ರದುರ್ಗದ ಅಭಿಮಾನದ ನುಡಿಗೆ ಇದಕ್ಕಿಂತ ಬೇರೆ ಬೇಕಿಲ್ಲ ಅನ್ನಿಸುತ್ತದೆ.

    ರಮಣೀಯವಾಗಿರುವ ಜೋಗಿಮಟ್ಟಿ ಪರಿಸರದಲ್ಲಿರುವ ಆಡುಮಲ್ಲೇಶ್ವರ ಕಿರು ಮೃಗಾಲಯ ಕುರಿತು ಕರ್ನಾಟಕ ಮೃಗಾಲಯ ಪ್ರಾಧಿಕಾರ ಕಿರು ಚಿತ್ರ ಅಥವಾ ಡಾಕ್ಯುಮೆಂಟರಿ ತಯಾರಿಸಿದೆ.

    ಇದನ್ನೂ ಓದಿ: ಆಡುಮಲ್ಲೇಶ್ವರ ಮೃಗಾಲಯದಲ್ಲಿ ಕರಡಿ ಮರಿಗಳ ಕಲರವ 

    ನೋಡುತ್ತಿದ್ದರೆ ನೋಡುತ್ತಲೇ ಇರಬೇಕು ಅನ್ನಿಸುವ ಈ ಡಾಕ್ಯುಮೆಂಟರಿ ಆಡುಮಲ್ಲೇಶ್ವರ ಹಾಗೂ ಜೋಗಿಮಟ್ಟಿಯನ್ನು ಅತ್ಯಂತ ಸುಂದರವಾಗಿ ತೋರಿಸಲಾಗಿದೆ.

    1987ರಲ್ಲಿ ಪ್ರಾರಂಭವಾದ ಆಡುಮಲ್ಲೇಶ್ವರ ಕಿರು ಮೃಗಾಲಯ 8.5 ಹೆಕ್ಟೇರ್ ಪ್ರದೇಶದಲ್ಲಿ ಮೈದಳೆದಿದ್ದು, 2017ರಲ್ಲಿ ಕರ್ನಾಟಕ ಮೃಗಾಲಯ ಪ್ರಾಧಿಕಾರಕ್ಕೆ ಸೇರಿದೆ.

    ಇದನ್ನೂ ಓದಿ: ಆಡುಮಲ್ಲೇಶ್ವರದಲ್ಲಿ ಜನಿಸಿದ ಮುದ್ದಾದ ಕರಡಿ ಮರಿಗಳಿಗೆ ಚಂದದ ನಾಮಕರಣ | ಈ ಕರಡಿ ಮರಿಗಳ ಹೆಸರು ಕೇಳಿದರೇ ನೀವು ವಾವ್ ಅಂತೀರಿ..

    ದಿನೇ ದಿನೇ ಅತ್ಯದ್ವುತವಾಗಿ ರೂಪುಗೊಳ್ಳುತ್ತಿರುವ ಆಡುಮಲ್ಲೇಶ್ವರ ಮೃಗಾಲಯ ಕುರಿತು ಕೇಳುವುದು, ಓದುವುದಕ್ಕಿಂತ ಇಲ್ಲಿರುವ ವೀಡಿಯೋ ನೋಡಿ ಕಣ್ತುಂಬಿಕೊಳ್ಳಿ.

    ಇಲ್ಲಿದೆ ನೋಡಿ ಆಡುಮಲ್ಲೇಶ್ವರ ಕಿರುಮೃಗಾಲಯದ ವೀಡಿಯೋ..

    ಹಾ.. ವೀಡಿಯೋ ನೋಡಿದ ನಂತರ ನಿಮ್ಮ ಅಭಿಪ್ರಾಯ ಕಮೆಂಟ್ ಮಾಡುವ ಮೂಲಕ ಮೃಗಾಲಯಕ್ಕೆ ಹೊಸತನ ನೀಡಿದವರಿಗೆ ಪ್ರೋತ್ಸಾಹಿಸುವ ಕೆಲಸ ಮಾಡೋಣ. ಚಿತ್ರದುರ್ಗದ ರಾಜ್ಯ, ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಪ್ರವಾಸಿ ತಾಣವಾಗಿ ರೂಪುಗೊಳ್ಳಲು ಇನ್ನಷ್ಟು ಕೆಲಸಗಳಾಗಲು ಹುರಿದುಂಬಿಸೋಣ.

    ಇದನ್ನೂ ಓದಿ: ಕರಡಿಗಳ ಮುದ್ದಾದ ಗುದ್ದಾಟ ನೊಡಿದ್ದೀರಾ | ಇಲ್ಲಿದೆ ನೋಡಿ ಸುದ್ದಿ ಮತ್ತು ವಿಡಿಯೋ

    ಹಾಗೇಯೇ, ಇಂತಹ ಮತ್ತಷ್ಟು ಸುದ್ದಿ, ವೀಡಿಯೋಗಳನ್ನು ನಿಮ್ಮ ಮುಂದೆ ಹೊತ್ತು ತರಲು ಚಿತ್ರದುರ್ಗ ನ್ಯೂಸ್ ಯೂಟ್ಯೂಬ್ ಚಾನೆಲ್ ಸಬ್‍ಸಕ್ರೈಬ್ ಮಾಡಿಕೊಳ್ಳುವುದನ್ನು ಮರೆಯಬೇಡಿ, ಚಿತ್ರದುರ್ಗ ನ್ಯೂಸ್ ನೋಟಿಫಿಕೇಶನ್ ಕೂಡಾ ಆನ್ ಮಾಡಿಕೊಳ್ಳುವ ಮೂಲಕ ಚಿತ್ರದುರ್ಗ ಜಿಲ್ಲೆಯ ಕುರಿತು ಮಹತ್ವದ ಸುದ್ದಿಗಳು ಮಿಸ್ ಆಗದಂತೆ ನೋಡಿಕೊಳ್ಳಿ..

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top