ಮುಖ್ಯ ಸುದ್ದಿ
Medical college; ಚಿತ್ರದುರ್ಗ ಮೆಡಿಕಲ್ ಕಾಲೇಜಿಗೆ ನೋಟೀಸ್ | MLC ಕೆ.ಎಸ್.ನವೀನ್ ಆಕ್ರೋಶ
CHITRADURGA NEWS | 23 JULY 2024
ಚಿತ್ರದುರ್ಗ: ಚಿತ್ರದುರ್ಗದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಪ್ರಾರಂಭವಾದ ಮೊದಲ ವರ್ಷವೇ ರಾಷ್ಟ್ರೀಯ ವೈದ್ಯಕೀಯ ಆಯೋಗ(NMC) ಶೋಕಾಸ್ ನೋಟೀಸ್ ನೀಡಿ ಬರೋಬ್ಬರಿ 15 ಲಕ್ಷ ರೂ. ದಂಡ ವಿಧಿಸಿದೆ.
ಈ ಬಗ್ಗೆ ಸೋಮವಾರ ವಿಧಾನ ಪರಿಷತ್ತಿನ ಕಲಾಪದಲ್ಲಿ ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿರುವ MLC ಕೆ.ಎಸ್.ನವೀನ್ ಧ್ವನಿ ಎತ್ತಿದ್ದು, ಸರ್ಕಾರ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಲೋಕಸಭೆ ಅಧಿವೇಶನದಲ್ಲಿ ಕೇಂದ್ರೀಯ ವಿದ್ಯಾಲಯ ಸದ್ದು | ಮೊದಲ ದಿನ ಮೊದಲ ಪ್ರಶ್ನೆ ಕೇಳಿದ ಸಂಸದ ಗೋವಿಂದ ಎಂ.ಕಾರಜೋಳ
2022-23ನೇ ಶೈಕ್ಷಣಿಕ ವರ್ಷದಲ್ಲಿ ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧಾನಾಲಯ ಕಾರ್ಯಾರಂಭ ಮಾಡಿದ್ದು, ಮೊದಲ ವರ್ಷವೇ 150 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.
ಚಿತ್ರದುರ್ಗ ಮೆಡಿಕಲ್ ಕಾಲೇಜಿಗೆ ಈವರೆಗೆ ಬೋಧಕರು ಸೇರಿದಂತೆ ವಿವಿಧ ಹಂತದ ಸಿಬ್ಬಂದಿ ನೇಮಕವಾಗಿಲ್ಲ. ಬೆಡ್ ವಿವರಗಳಿಲ್ಲ, ಇಲ್ಲಿನ ರಕ್ತನಿಧಿ ಕೇಂದ್ರದ ನೊಂದಣಿ ನವೀಕರಣ ಸೇರಿದಂತೆ ಹಲವು ವಿಷಯಗಳನ್ನು ಪಟ್ಟಿ ಮಾಡಿ ಎನ್‍ಎಂಸಿ ನೋಟೀಸ್ ನೀಡಿದೆ.
ಇದನ್ನೂ ಓದಿ: ಪರೀಕ್ಷೆಯಲ್ಲಿ ಕಡಿಮೆ ಅಂಕ | ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಆತ್ಮಹತ್ಯೆ
ಮೆಡಿಕಲ್ ಕಾಲೇಜಿಗೆ ವಿವಿಧ ವೃಂದದ 79 ಬೋಧಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕಿದ್ದು, ಇದರಲ್ಲಿ 53 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ, 26 ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುವಂತೆ ಸರ್ಕಾರದಿಂದ ಆದೇಶವಾಗಿದೆ.
ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇಮಕಾತಿ ವಯೋಮಿತಿ ಹೆಚ್ಚಿಸಲು ಪ್ರಾಧ್ಯಾಪಕರೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಕಾರಣಕ್ಕೆ ನೇಮಕಾತಿ ವಿಳಂಬವಾಗಿದೆ ಎಂದು ಕೆ.ಎಸ್.ನವೀನ್ ಎತ್ತಿದ ಪ್ರಶ್ನೆಗಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಸದನದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಬರೋಬ್ಬರಿ 15 ಲಕ್ಷ ರೂ. ದಂಡ:
2 ತಿಂಗಳಲ್ಲಿ ಮೆಡಿಕಲ್ ಕಾಲೇಜಿನ ನ್ಯೂನ್ಯತೆಗಳನ್ನು ಸರಿಪಡಿಸದಿದ್ದರೆ ಮಂಜೂರಾಗಿರುವ 150 ಮೆಡಿಕಲ್ ಸೀಟುಗಳನ್ನು ಕಡಿಮೆ ಮಾಡುವುದಾಗಿ ಎನ್‍ಎಂಸಿ ಸೂಚನೆ ನೀಡಿದೆ. ಜೊತೆಗೆ ಸರ್ಕಾರಕ್ಕೆ 15 ಲಕ್ಷ ರೂ. ದಂಡ ವಿಧಿಸಿದೆ. ಜೊತೆಗೆ 500 ಕೋಟಿ ರೂ. ಯೋಜನೆಯ ಕಾಲೇಜಿಗೆ ಕೇವಲ 60 ಕೋಟಿ ರೂ. ಮಾತ್ರ ಅನುದಾನ ನೀಡಲಾಗಿದೆ. ಚಿತ್ರದುರ್ಗ ಜಿಲ್ಲೆಯನ್ನು ಕಡೆಗಣಿಸಲಾಗುತ್ತಿದೆ ಎಂದು ಎಂಎಲ್ಸಿ ಕೆ.ಎಸ್.ನವೀನ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ನ್ಯಾಯಾಧೀಶರಿಂದ ಅಂಗನವಾಡಿ ಭೇಟಿ | ಅವ್ಯವಸ್ಥೆ ಕಂಡು ಅಸಮಧಾನ
ಈ ಬಗ್ಗೆ ಪ್ರತಿಕ್ರಿಯಿಸಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ನೋಟೀಸ್‍ನಲ್ಲಿ ಎನ್‍ಎಂಸಿ ಎತ್ತಿರುವ ವಿಚಾರಗಳನ್ನು ಸರ್ಕಾರ ಒಪ್ಪಿಕೊಂಡಿದೆ.
ಎಲ್ಲವನ್ನೂ ಸರಿಪಡಿಸಲು ಸರ್ಕಾರ ಮುಂದಾಗಿದೆ. ಚಿತ್ರದುರ್ಗ ಜಿಲ್ಲೆಯನ್ನು ಕಡೆಗಣಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಎನ್‍ಎಂಸಿ ಗುರುತಿಸಿರುವ ನ್ಯೂನ್ಯತೆಗಳು:
- ಅಗತ್ಯವಿರುವ ಸಿಬ್ಬಂದಿಗಳ ಕೊರತೆ.
- ಟ್ಯೂಟರ್ ನೇಮಕವಾಗಿಲ್ಲ.
- ಅಗತ್ಯವಿರುವ ಬೆಡ್‍ಗಳು ಭರ್ತಿ ಆಗಿಲ್ಲ.
- ರಕ್ತನಿಧಿ(ಬ್ಲಡ್ ಬ್ಯಾಂಕ್) ನೊಂದಣಿ ನವೀಕರಣ ಆಗಿಲ್ಲ.
- ಕ್ಲಿನಿಕಲ್ ಪ್ಯಾಥಲಜಿ, ಎಮಟಾಲಜಿ, ಬಯೋ ಕೆಮಿಸ್ಟ್ರಿ ಮತ್ತು ಸಿರಾಲಜಿ ಕುರಿತ ಒಪಿಡಿ-ಐಪಿಡಿ ಮಾಹಿತಿ ತಪ್ಪಾಗಿದೆ.
- ಎಕ್ಸ್-ರೇ, ಸಿ.ಟಿ.ಸ್ಕ್ಯಾನ್ ಪರೀಕ್ಷೆಗಳು ನಿರೀಕ್ಷೆಗಿಂತ ಕಡಿಮೆಯಾಗಿವೆ.
- ಎಂಆರ್‍ಐ ಪರೀಕ್ಷೆಗಳು ಹೆಚ್ಚಾಗಿರವ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ