ಮುಖ್ಯ ಸುದ್ದಿ
ನನ್ನ ಕಟಿಂಗ್ ಮಾಡುವವರಿಗೆ ಬಿಡುವಿಲ್ಲ | ಅವರು ಬಂದು ಕಟ್ ಮಾಡ್ತಾರಾ | ಮಧು ಬಂಗಾರಪ್ಪ ಗರಂ
CHITRADURGA NEWS | 27 MAY 2024
ಚಿತ್ರದುರ್ಗ: ಶಿವಮೊಗ್ಗ ಮೂಲದ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಅದೇ ಜಿಲ್ಲೆಯ ಶಿಕ್ಷಣ ಸಚಿವರ ನಡುವೆ ವಾಕ್ ವಾರ್ ಶುರುವಾಗಿದೆ.
ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಮೇ.25 ರಂದು ಚಿತ್ರದುರ್ಗದಲ್ಲಿ ವೈ.ಎ.ನಾರಾಯಣಸ್ವಾಮಿ ಪರವಾಗಿ ಮತಯಾಚನೆಗೆ ಬಂದಿದ್ದ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಆಡಿದ್ದ ಮಾತು ಕಿಡಿ ಹೊತ್ತಿಸಿದೆ.
ಇದನ್ನೂ ಓದಿ: ಕಾಂಗ್ರೆಸ್ಸಿನಿಂದ ಶಿಕ್ಷಣ ಕ್ಷೇತ್ರ ಕಲುಷಿತ | ಬಿ.ವೈ.ವಿಜಯೇಂದ್ರ ವಾಗ್ದಾಳಿ
ವಿಜಯೇಂದ್ರ ಭಾಷಣದಲ್ಲಿ, ಹಿಂದೆಲ್ಲಾ ತಾಯಂದಿರು ಮಕ್ಕಳಿಗೆ ನೀಟಾಗಿ ಕಟಿಂಗ್ ಮಾಡಿಸಿ, ಎಣ್ಣೆ ಹಚ್ಚಿ ತಲೆ ಬಾಚಿ ಶಾಲೆಗೆ ಕಳಿಸುತ್ತಿದ್ದರು. ಆದರೆ, ಇಂದು ರಾಜ್ಯದ ಶಿಕ್ಷಣ ಸಚಿವರಿಗೆ ಕಟಿಂಗ್ ಮಾಡಿಸಿಕೊಂಡು ಶಿಸ್ತಾಗಿ ಬನ್ನಿ ಎಂದು ಹೇಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದರು.
ಮೇ.27 ಸೋಮವಾರ ಚಿತ್ರದುರ್ಗದ ದುರ್ಗದ ಸಿರಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಖಡಕ್ ಉತ್ತರ ಕೊಟ್ಟಿದ್ದಾರೆ.
ಇದನ್ನೂ ಓದಿ: ಮಹಿಳೆಯರಿಗೆ ಐಟಿಐ ಸೀಟುಗಳು ಲಭ್ಯ | ONLINE ಮೂಲಕ ಅರ್ಜಿ ಹಾಕಿ
ಸುದ್ದಿಗಾರರ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕಿಸಿದ ಕುರಿತು ಪ್ರಶ್ನಿಸುತ್ತಲೇ ಗರಂ ಆದ ಮಧು ಬಂಗಾರಪ್ಪ, ನನ್ನ ಹೇರ್ ಕಟಿಂಗ್ ಮಾಡುವವರು ಬಿಡುವಾಗಿಲ್ಲ. ಅವರಿಗೆ(ವಿಜಯೇಂದ್ರ) ಬಿಡುವಿದ್ದರೆ ಬಂದು ಮಾಡಲು ಹೇಳಿ ಎಂದರು.
ಇಂತಹ ಪ್ರಶ್ನೆಗಳಿಗೆ ಉತ್ತರ ಕೊಡಲು ನಾಚಿಕೆ ಆಗುತ್ತದೆ. ಒಂದು ಪಕ್ಷದ ರಾಜ್ಯ ಅಧ್ಯಕ್ಷರು ಜವಾಬ್ದಾರಿ ಇಟ್ಟುಕೊಂಡು ಮಾತನಾಡುವುದನ್ನು ಕಲಿಯಲಿ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕಾಂಗ್ರೆಸ್ OPS ಪರವಾಗಿದೆ | MLC ಪುಟ್ಟಣ್ಣ
ಮುಂದುವರೆದು ಮಾತನಾಡಿದ ವಿಜಯೇಂದ್ರ, ಸಚಿವ ಮಧು ಬಂಗಾರಪ್ಪ ಇನ್ನೂ ಚಿತ್ರರಂಗದಲ್ಲಿರುವ ಭ್ರಮೆಯಲ್ಲಿದ್ದಾರೆ ಎಂದಿದ್ದರು, ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅವರಪ್ಪ ಇನ್ನೂ ಮುಖ್ಯಮಂತ್ರಿ ಎನ್ನುವ ಭ್ರಮೆಯಲ್ಲಿದ್ದಾರಾ ಎಂದು ಮರು ಪ್ರಶ್ನೆ ಹಾಕಿದರು.
ಚಿತ್ರರಂಗದ ಬಗ್ಗೆ ಮಾತನಾಡುವ ಅಗತ್ಯ ಇಲ್ಲ. ಇವರು ಬಂದು ಮೂರು ಗಂಟೆ ಸಿನಿಮಾ ನೋಡಿ ಮಜಾ ಮಾಡಲ್ವಾ. ಯಾರಾದರೂ ಪುಗಸಟ್ಟೆ ಸಿನಿಮಾ ಮಾಡ್ತಾರಾ ಎಂದು ಹೇಳಿದರು.
ಇದನ್ನೂ ಓದಿ: ಚಿತ್ರದುರ್ಗದ ಜಿ.ಎಸ್.ಮಂಜುನಾಥ್ ಅವರನ್ನು ಎಂಎಲ್ಸಿ ಮಾಡಲು ಕಾಂಗ್ರೆಸ್ ಮುಖಂಡರ ಒತ್ತಾಯ
ಇನ್ನೂ ಚನ್ನಗಿರಿ ಗಲಭೆ ಪ್ರಕರಣದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವ ಪ್ರಶ್ನೆ ಇಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತೆ. ಬಿಜೆಪಿ ವಿರೋಧಕ್ಕಾಗಿ ವಿರೋಧ ಮಾಡುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ನಮ್ಮ ಇಲಾಖೆಯಲ್ಲೂ ಕೊರತೆಗಳಿವೆ. ಹಂತಹಂತವಾಗಿ ಸರಿಪಡಿಸುತ್ತೇವೆ. ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ ಆಗಿಲ್ಲ. ಫಲಿತಾಂಶದ ಗುಣಮಟ್ಟ ಹೆಚ್ಚು ಕಡಿಮೆ ಆಗಿದೆ. 9 ವರ್ಷದಿಂದ ಶಿಕ್ಷಕರ ನೇಮಕ ಆಗಿಲ್ಲ. ಆದಷ್ಟು ಬೇಗ ಎಷ್ಟು ಸಾಧ್ಯವೋ ಅಷ್ಟು ನೇಮಕ ಮಾಡಿಕೊಳ್ಳುತ್ತೇವೆ. ಮುಖ್ಯಮಂತ್ರಿ ಒಪ್ಪಿದ್ದಾರೆ ಎಂದರು.
ಇದನ್ನೂ ಓದಿ: KSRTC ಬಸ್ ಹರಿದು ಕುರಿಗಾಯಿ ರಾಜಪ್ಪ ಹಾಗೂ 21 ಕುರಿಗಳ ದುರ್ಮರಣ
ಮೇಲ್ಮನೆಯಲ್ಲಿ ನಮಗೆ ಸಂಪೂರ್ಣ ಮೆಜಾರಿಟಿ ಇಲ್ಲ. ಹಾಗಾಗಿ ವಿಧಾನ ಪರಿಷತ್ತಿನ ಆರು ಕ್ಷೇತ್ರಗಳಲ್ಲಿ ಗೆಲ್ಲುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. 2023 ವಿಧಾನಸಭೆ ಚುನಾವಣೆಯಲ್ಲಿ ಗೆದ್ದಂತೆಯೇ ಗೆಲ್ಲುವ ವಿಶ್ವಾಸ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಹಿಂದೆ ಗ್ಯಾರೆಂಟಿಗಳ ಆಧಾರದಲ್ಲಿಯೇ ನಮ್ಮ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಈಗಾಗಲೇ ಯುವನಿಧಿ ಜಾರಿ ಮಾಡಿದ್ದೇವೆ. ಒಪಿಎಸ್ ಜಾರಿ ಮಾಡುವುದಾಗಿ ಪ್ರಣಾಳಿಕೆಯಲ್ಲೇ ಭರವಸೆ ನೀಡಿದ್ದೇವೆ. ಹಂತಹಂತವಾಗಿ ಅನುμÁ್ಠನ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದರು.
ಇದನ್ನೂ ಓದಿ: ಡೆಂಗ್ಯೂ ತಡೆಗೆ ಆಯುರ್ವೇದದಲ್ಲಿದೆ ಉತ್ತಮ ಪರಿಹಾರ
ಆಗ್ನೇಯ ಶಿಕ್ಷಕರ ಕ್ಷೇತ್ರದ ನಮ್ಮ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಶಿಕ್ಷಣ ಕ್ಷೇತ್ರದ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡಿದ್ದಾರೆ. ಅವರು ಗೆದ್ದರಿ ಪರಿಷತ್ತಿನಲ್ಲಿ ಶಿಕ್ಷಕರಿಗೆ ಧ್ವನಿಯಾಗಿ ಕೆಲಸ ಮಾಡುತ್ತಾರೆ. ಹಾಗಾಗಿ ಶಿಕ್ಷಕ ಮತದಾರರು ಡಿ.ಟಿ.ಶ್ರೀನಿವಾಸ್ ಅವರಿಗೆ ಮೊದಲನೇ ಪ್ರಾಶಸ್ತ್ಯದ ಮತ ಹಾಕುವಂತೆ ಮಧು ಬಂಗಾರಪ್ಪ ಮನವಿ ಮಾಡಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಲಕ್ಷ್ಮೀಕಾಂತ್, ಖುದ್ದೂಸ್, ಮೈಲಾರಪ್ಪ, ಸಂಪತ್‍ಕುಮಾರ್, ಎನ್.ಡಿ.ಕುಮಾರ್, ಹನುಮಂತಪ್ಪ ಮತ್ತಿತರರಿದ್ದರು.