ಲೋಕಸಮರ 2024
ಮೊದಲ ಪಟ್ಟಿಯಲ್ಲಿ ಚಿತ್ರದುರ್ಗದ ಅಭ್ಯರ್ಥಿ ಹೆಸರಿಲ್ಲ | ಅಳೆದು ತೂಗಿ ಅಭ್ಯರ್ಥಿ ಆಯ್ಕೆ ಮಾಡಲಿರುವ ಕಾಂಗ್ರೆಸ್
CHITRADURGA NEWS | 08 MARCH 2024
ಚಿತ್ರದುರ್ಗ: ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಲೋಕಸಭೆ ಚುನಾವಣೆಗೆ ಮೊದಲ ಪಟ್ಟಿ ಪ್ರಕಟವಾಗಿದ್ದು, ಇದರಲ್ಲಿ ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಹೆಸರು ಪ್ರಕಟವಾಗಿಲ್ಲ.
ಪಕ್ಕದ ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಯ ಅಭ್ಯರ್ಥಿಗಳ ಹೆಸರುಗಳನ್ನು ನೋಡಿದ ಚಿತ್ರದುರ್ಗದ ಅನೇಕ ಕಾಂಗ್ರೆಸ್ ಕಾರ್ಯಕರ್ತರು, ನಿರೀಕ್ಷೆ ಮಾಡಿದ್ದರು
ಇದನ್ನೂ ಓದಿ: ಹಿರಿಯ ನ್ಯಾಯವಾದಿ ಎಂ.ಮಹೇಶ್ವರಪ್ಪ ಇನ್ನಿಲ್ಲ
ಚಿತ್ರದುರ್ಗ ಕೈ ಟಿಕೇಟ್‍ಗೆ ಭಾರೀ ಪೈಪೋಟಿ ಏರ್ಪಟ್ಟಿದೆ. ಪಕ್ಷದಿಂದ ಆಕಾಂಕ್ಷಿಗಳ ಅರ್ಜಿ ಪಡೆಯಲು ಡಾ.ಎಚ್.ಸಿ.ಮಹಾದೇವಪ್ಪ ಜಿಲ್ಲೆಗೆ ಆಗಮಿಸಿದ್ದಾಗ ಬರೋಬ್ಬರಿ 24 ಮಂದಿ ಅರ್ಜಿ ಸಲ್ಲಿಸಿದ್ದರು.
ಇದರೊಟ್ಟಿಗೆ ಹೊರಗಿನವರು, ಸ್ಥಳೀಯರು ಎನ್ನುವ ಚರ್ಚೆ ಕೂಡಾ ಜೋರಾಗಿರುವುದರಿಂದ ಕಾಂಗ್ರೆಸ್ ಅಳೆದು ತೂಗಿ ಅಭ್ಯರ್ಥಿ ಆಯ್ಕೆ ಮಾಡಲು ತೀರ್ಮಾನಿಸಿದಂತಿದೆ.
ಇದನ್ನೂ ಓದಿ: ಮಾರ್ಚ್ 10 ರಂದು ಕನ್ನಡ ಹಬ್ಬ | ಕೆ.ಟಿ.ಶಿವಕುಮಾರ್
ಮೊದಲ ಪಟ್ಟಿಯಲ್ಲಿ ಚಿತ್ರದುರ್ಗದ ಹೆಸರು !
ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಮೊದಲ ಪಟ್ಟಿ ಪ್ರಕಟವಾಗಿದ್ದು, ಮೊದಲ ಪಟ್ಟಿ ಪ್ರಕಟವಾಗುವ ಹೊತ್ತಿನಲ್ಲೇ ಚಿತ್ರದುರ್ಗ ಲೋಕಸಭಾ ಕ್ಷೇತ್ರ ಸದ್ದು ಮಾಡಿದೆ.
ಕಾಂಗ್ರೆಸ್ ವರಿಷ್ಠ ಮಂಡಳಿ ಅಧಿಕೃತವಾಗಿ ರಿಲೀಸ್ ಮಾಡುವ ಪಟ್ಟಿ ಮೊದಲೇ ಸೋರಿಕೆಯಾಗಿದೆ ಎನ್ನಲಾಗಿದ್ದು, ಈ ಪಟ್ಟಿಯಂತೆ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಹೆಸರು ಅಂತಿಮವಾಗಿದೆ ಎನ್ನಲಾಗಿತ್ತು. ಆದರೆ, ಪಕ್ಷ ಅಧಿಕೃತವಾಗಿ ಪ್ರಕಟಿಸಿದ ಪಟ್ಟಿಯಲ್ಲಿ ಚಿತ್ರದುರ್ಗ ಕ್ಷೇತ್ರದ ಹೆಸರಿರಲಿಲ್ಲ.
ಇದನ್ನೂ ಓದಿ: ಡಿಸಿಎಂ ಅಂದ್ರೆ ಡಮ್ಮಿ ಸಿಎಂ
ಕೆಲ ಸುದ್ದಿ ವಾಹಿನಿ ಹಾಗೂ ಜಾಲಾತಾಣಗಳಲ್ಲಿ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಚಿತ್ರದುರ್ಗ ಕಾಂಗ್ರೆಸ್ ಅಭ್ಯರ್ಥಿ ಎಂದು ಪ್ರಕಟವಾಗಿತ್ತು.
ಕರ್ನಾಟಕ ರಾಜ್ಯದ ಎರಡು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ವರಿಷ್ಠರು ತಡೆ ಹಿಡಿದಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ರೋಗಿಗಳಿಗೆ ಸಿಹಿ ಸುದ್ದಿ ನೀಡಿದ ಶಾಸಕ ಕೆ.ಸಿ.ವೀರೇಂದ್ರ
ಈ ಪಟ್ಟಿಯಲ್ಲಿ ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಗಳ ಹೆಸರಿದ್ದು, ಚಿತ್ರದುರ್ಗ ಟಿಕೇಟ್‍ಗೆ ತೀವ್ರ ಪೈಪೋಟಿ ಇರುವುದು ಹಾಗೂ ಬಿಜೆಪಿ ಯಾರಿಗೆ ಟಿಕೇಟ್ ಕೊಡುತ್ತದೆ ಎನ್ನುವುದನ್ನು ನೋಡಿಕೊಂಡು ಮುಂದುವರೆಯಲು ಕಾಂಗ್ರೆಸ್ ತೀರ್ಮಾನಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಜಯಪ್ರಕಾಶ್ ಹೆಗಡೆ ಅವರ ಹೆಸರು ಚಾಲ್ತಿಯಲ್ಲಿದ್ದು, ಅವರು ಇನ್ನೂ ಕಾಂಗ್ರೆಸ್ ಸೇರ್ಪಡೆಯಾಗದ ಕಾರಣ ಅದನ್ನೂ ತಡೆಹಿಡಿಯಲಾಗಿದೆ ಎನ್ನುವ ವಿಶ್ಲೇಷಣೆಗಳು ಕೇಳಿ ಬಂದಿವೆ.
ಇದನ್ನೂ ಓದಿ: ಚನ್ನಗಿರಿ ಅಡಿಕೆ ಮಾರುಕಟ್ಟೆಯಲ್ಲಿ ರಾಶಿ ಬೆಲೆ 159 ರೂ. ಹೆಚ್ಚಳ