ಮುಖ್ಯ ಸುದ್ದಿ
ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ರಥೋತ್ಸವ ವೈಭವ | ಮನೆ ಮಾಡಿದ ಸಂಭ್ರಮ | ಒಳಮಠ, ಹೊರಮಠದಲ್ಲಿ ಭಕ್ತರ ದಂಡು
CHITRADURGA NEWS | 26 MARCH 2024
ಚಿತ್ರದುರ್ಗ: ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆಯ ದೊಡ್ಡ ರಥೋತ್ಸವ ಚಾಲನೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಸಂಪ್ರದಾಯಂತೆ ಬೆಳಿಗ್ಗೆ ಭಕ್ತರು ನಂದಿ ರಥವನ್ನು ಎಳೆದು ಭಕ್ತಿ ಸಮರ್ಪಿಸಿದರು. ಬಣ್ಣದ ಬಾವುಟಗಳಿಂದ ಅಲಂಕೃತಗೊಂಡಿರುವ ರಥಕ್ಕೆ ಭಕ್ತರು ಬೃಹತ್ ಹೂವಿನ ಹಾರಗಳನ್ನು ಸಮರ್ಪಿಸಿದರು. ಸಾಲು ಸಾಲಾಗಿ ಸಾಗಿದ ಹೂವಿನ ಹಾರದ ಮೆರವಣಿಗೆಯನ್ನು ಜನರು ಕಣ್ತುಂಬಿಕೊಂಡರು.
ಸಕಲ ದಿಕ್ಕುಗಳಿಂದ ಜನರು ನಾಯಕನಹಟ್ಟಿಗೆ ಆಗಮಿಸುತ್ತಿದ್ದು, ಕ್ಷಣದಿಂದ ಕ್ಷಣಕ್ಕೆ ಭಕ್ತರ ಸಂಖ್ಯೆ ಏರಿಕೆ ಕಾಣುತ್ತಿದೆ. ಒಳಮಠ, ಹೊರಮಠದಲ್ಲಿ ಸ್ವಾಮಿ ದರ್ಶನಕ್ಕೆ ಸಾವಿರಾರು ಸಂಖ್ಯೆಯ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಭಕ್ತರು ಬಿಸಿಲಿಗೆ ಸವಾಲ್ ಹಾಕಿ ಜಾತ್ರೆಗೆ ಜಮಾಯಿಸುತ್ತಿದ್ದಾರೆ.
ಕ್ಲಿಕ್ ಮಾಡಿ ಓದಿ: ನಾಯಕನಹಟ್ಟಿಯಲ್ಲಿ ಪೀಪಿ ಊದಿದರೆ ಹುಷಾರ್ | ನಿಮ್ಮ ನಡುವೆಯೇ ಇರ್ತಾರೆ ಪೊಲೀಸ್
ಕ್ಲಿಕ್ ಮಾಡಿ ಓದಿ: 150 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಣೆ | ಖಚಿತ ಮಾಹಿತಿ ಆಧರಿಸಿ ಪೊಲೀಸರ ಕಾರ್ಯಾಚರಣೆ