ಮುಖ್ಯ ಸುದ್ದಿ
Heavy Rain: ನಾಯಕನಹಟ್ಟಿ ಪೊಲೀಸ್ ಠಾಣೆ ಮತ್ತೆ ನೀರುಪಾಲು | ಮೊಳಕಾಲುದ್ದ ನೀರು ತುಂಬಿ ಪೊಲೀಸರ ಪರದಾಟ
Published on
CHITRADURGA NEWS | 22 OCTOBER 2024
ಚಿತ್ರದುರ್ಗ: ಜಿಲ್ಲೆಯಲ್ಲಿ ಮತ್ತೆ ಮಳೆಯ ಆರ್ಭಟ ಮುಂದುವರೆದಿದ್ದು, ಭಾರೀ ಮಳೆಯಿಂದಾಗಿ ನಾಯಕನಹಟ್ಟಿ ಪೊಲೀಸ್ ಠಾಣೆಗೆ ಮತ್ತೊಮ್ಮೆ ನೀರು ನುಗ್ಗಿದೆ.
ಮೂರು ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ನೀರು ತುಂಬಿದ್ದ ಠಾಣೆಯನ್ನು ಪೊಲೀಸರು ಸ್ವಚ್ಛಗೊಳಿಸಿ ದಿನ ಕಳೆಯುವುದರ ಒಳಗಾಗಿ ಮತ್ತೆ ನೀರು ತುಂಬಿದೆ.
ಇದನ್ನೂ ಓದಿ: ಪ್ರಾಣ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುವ ಪೊಲೀಸರ ತ್ಯಾಗ ಸ್ಮರಣೀಯ | ಡಿಸಿ ವೆಂಕಟೇಶ್
ಬರೋಬ್ಬರಿ ಮೊಳಕಾಲುದ್ದದವರೆಗೆ ನೀರು ತುಂಬಿದ್ದರಿಂದ ಪೊಲೀಸರು ಕಡತಗಳನ್ನು ನೀರಿನಿಂದ ರಕ್ಷಿಸಲು ರಾತ್ರಿ ಹರಸಾಹಸ ಮಾಡುವಂತಾಯಿತು.
ಕಬೋರ್ಡ್, ಬೀರುಗಳಲ್ಲಿದ್ದ ಕಡತದ ಗಂಟುಗಳನ್ನು ಎತ್ತಿ ಟೇಬಲ್‌ಗಳ ಮೇಲಿಡುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಜಿಲ್ಲೆಯಲ್ಲಿ 48 ಮನೆ ಹಾನಿ | ಯಾವ ತಾಲೂಕಿನಲ್ಲಿ ಎಷ್ಟು ಮಳೆ
ಈಗಾಗಲೇ ನಾಯಕನಹಟ್ಟಿ ಸಣ್ಣ ಕೆರೆ ತುಂಬಿ ಕೋಡಿ ಬಿದ್ದಿದ್ದು, ಅಪಾರ ಪ್ರಮಾಣದ ಮಳೆಯಾಗುತ್ತಿರುವುದು ಒಂದು ಲೆಕ್ಕದಲ್ಲಿ ಆತಂಕ ಮೂಡಿಸುತ್ತಿದೆ.
Continue Reading
Related Topics:Chitradurga, Chitradurga Latest News, Chitradurga news, flooding, heavy rain, Kannada News, Nayakanahatti Police Station, Police, water entering the station, ಕನ್ನಡ ಸುದ್ದಿ, ಚಿತ್ರದುರ್ಗ, ಚಿತ್ರದುರ್ಗ ನ್ಯೂಸ್, ಚಿತ್ರದುರ್ಗ ಲೇಟೆಸ್ಟ್ ನ್ಯೂಸ್, ಜಲಾವೃತ, ಠಾಣೆಗೆ ನುಗ್ಗಿದ ನೀರು, ನಾಯಕನಹಟ್ಟಿ ಪೊಲೀಸ್ ಠಾಣೆ, ಪೊಲೀಸ್, ಭಾರೀ ಮಳೆ
Click to comment