Connect with us

    ನಾಯಕನಹಟ್ಟಿ ಜಾತ್ರಾ ಮಹೋತ್ಸವ | ದೊಡ್ಡರಥಕ್ಕೆ ಕಳಶ ಪ್ರತಿಷ್ಠಾಪನೆ | ಅವಘಡಕ್ಕೆ ಅವಕಾಶವಿಲ್ಲದಂತೆ ಜಾಗ್ರತೆ ವಹಿಸಿ

    ಮುಖ್ಯ ಸುದ್ದಿ

    ನಾಯಕನಹಟ್ಟಿ ಜಾತ್ರಾ ಮಹೋತ್ಸವ | ದೊಡ್ಡರಥಕ್ಕೆ ಕಳಶ ಪ್ರತಿಷ್ಠಾಪನೆ | ಅವಘಡಕ್ಕೆ ಅವಕಾಶವಿಲ್ಲದಂತೆ ಜಾಗ್ರತೆ ವಹಿಸಿ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 23 MARCH 2024
    ಚಿತ್ರದುರ್ಗ: ನಾಯಕನಹಟ್ಟಿ ಶ್ರೀ ಗುರುತಿಪ್ಪೇರುದ್ರ ಸ್ವಾಮಿಯ ಜಾತ್ರಾ ಮಹೋತ್ಸವ ಈಗಾಗಲೇ ಪ್ರಾರಂಭವಾಗಿದ್ದು, ಮಹೋತ್ಸವದ ಮುಖ್ಯ ಘಟ್ಟವಾದ ದೊಡ್ಡ ರಥೋತ್ಸವಕ್ಕೆ ಕೇವಲ ನಾಲ್ಕು ದಿನ ಬಾಕಿ ಉಳಿದಿವೆ. ಈ ಹಿನ್ನೆಲೆಯಲ್ಲಿ ಸಂಪ್ರದಾಯದಂತೆ ದೊಡ್ಡರಥಕ್ಕೆ ಕಳಶ ಪ್ರತಿಷ್ಠಾಪನೆ ಕಾರ್ಯ ನೆರವೇರಿಸಲಾಯಿತು.

    ಅಂದಾಜು 45 ಕೆಜಿ ತೂಕದ 5 ಅಡಿ ಎತ್ತರದ ನೂತನ ಕಳಶವನ್ನು ಸಂಪ್ರದಾಯದಂತೆ ಗ್ರಾಮದ ಬಾಬುದಾರರು ಮತ್ತು ದೈವಸ್ಥರು ಪಟ್ಟಣದ ಒಳಮಠದಿಂದ ಪೂಜಾ ವಿಧಿವಿಧಾನಗಳ ಮೂಲಕ ಮೆರವಣಿಗೆಯಲ್ಲಿ ದೊಡ್ಡರಥದ ಬಳಿ ತಂದರು. ನಂತರ ಕಳಶವನ್ನು ಕಂಬಳಿಯ ಗದ್ದಿಗೆ ಮೇಲಿಟ್ಟು ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದರು. ಹಗ್ಗದ ಸಹಾಯದಿಂದ ರಥದ ಮೇಲಕ್ಕೆ ಎಳೆದು ಪ್ರತಿಷ್ಠಾಪಿಸಲಾಯಿತು. ಈವೇಳೆ ಭಕ್ತರು ತಿಪ್ಪೇಶನಿಗೆ ಜೈಕಾರ ಹಾಕಿದರು.

    ಕಳಶ ಪ್ರತಿಷ್ಠಾಪನೆಯ ನಂತರ ರಥಕ್ಕೆ ಬಣ್ಣಗಳ ಬಾವುಟಗಳನ್ನು ಜೋಡಿಸುವ ಕಾರ್ಯ ಪ್ರಾರಂಭವಾಯಿತು.
    ಭಕ್ತರಿಗೂ ಪಾನಕ, ಕೋಸಂಬರಿ ಹಾಗೂ ಪ್ರಸಾದ ವಿತರಿಸಲಾಯಿತು.

    ಕ್ಲಿಕ್ ಮಾಡಿ ಓದಿ: ರೈತರ ಗಮನಕ್ಕೆ…ಬೋರ್‌ವೆಲ್‌ ಪ್ರತಿ ಅಡಿಗೆ ರೂ.105ಫಿಕ್ಸ್‌ | ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ.ಮಂಜುನಾಥ್‌

    ಬಳಿಕ ನಾಯಕನಹಟ್ಟಿಯ ಈಶ್ವರ ದೇವಾಲಯದಲ್ಲಿ ಡಿವೈಎಸ್ಪಿ ಟಿ.ಬಿ.ರಾಜಣ್ಣ ನೇತೃತ್ವದಲ್ಲಿ ರಥ ನಡೆಸುವವರ ಸಭೆ ನಡೆಯಿತು. ‘ಗುರು ತಿಪ್ಪೇರುದ್ರಸ್ವಾಮಿ ವಾರ್ಷಿಕ ಮಹಾಜಾತ್ರೆಯಲ್ಲಿ ರಥಕ್ಕೆ ಸನ್ನೆ ಹಾಕುವವರು ತಮ್ಮ ಜವಾಬ್ದಾರಿ ಅರಿತು ರಥ ನಡೆಸಬೇಕು. ಈ ವೇಳೆ ಯಾವುದೇ ಅವಘಡಗಳಿಗೆ ಅವಕಾಶವಿಲ್ಲದಂತೆ ಜಾಗ್ರತೆ ವಹಿಸಬೇಕು’ ಎಂದು ಡಿವೈಎಸ್ಪಿ ಟಿ.ಬಿ.ರಾಜಣ್ಣ ಹೇಳಿದರು.

    ಪ್ರತಿವರ್ಷ ಗುರುತಿಪ್ಪೇರುದ್ರಸ್ವಾಮಿ ರಥೋತ್ಸವ ಅದ್ದೂರಿಯಾಗಿ ನಡೆಯುತ್ತದೆ. ಮಾರ್ಚ್ 26ರಂದು ಜಾತ್ರೆ ನಿಗದಿಯಾಗಿದ್ದು, ಈ ವರ್ಷದ ಮಹಾಜಾತ್ರೆಗೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆ ಇದೆ. ಜಾತ್ರೆಯನ್ನು ಸುಗಮವಾಗಿ ನಡೆಸುವುದು ನಮ್ಮೆಲ್ಲರ ಉದ್ದೇಶ. ರಥದ ಬಳಿ ಪೊಲೀಸರನ್ನು ನಿಯೋಜಿಸುತ್ತೇವೆ. ರಥಕ್ಕೆ ಸನ್ನೆ ಕೊಡುವ ಕೆಲಸ ನಿರ್ವಹಿಸುವ ವ್ಯಕ್ತಿಗಳಿಗೆ ಪ್ರತ್ಯೇಕ ಟೀ-ಶರ್ಟ್ ಅಥವಾ ಗುರುತಿನ ಚೀಟಿ ನೀಡಲು ಉದ್ದೇಶಿಸಲಾಗಿದೆ. ಈ ಬಗ್ಗೆ ಗ್ರಾಮಸ್ಥರು ಅಭಿಪ್ರಾಯ ತಿಳಿಸಬೇಕು ಎಂದರು.

    ಕ್ಲಿಕ್ ಮಾಡಿ ಓದಿ: ಚಳ್ಳಕೆರೆ ATR ನಲ್ಲಿ ಇಸ್ರೋ ಮಹತ್ವದ ಸಾಧನೆ | ಮರುಬಳಕೆಯ ರಾಕೇಟ್ ಪುಷ್ಪಕ್ ಯಶಸ್ವಿ ಲ್ಯಾಂಡಿಂಗ್

    ರಥೋತ್ಸವದ ವೇಳೆ ಗ್ರಾಮದ ಬಾಬುದಾರರಿಗೆ, ದೈವಸ್ಥರಿಗೆ, ಇಲಾಖೆಯ ಅಧಿಕಾರಿಗಳು ಸಹಕಾರ ನೀಡಬೇಕು. ಸನ್ನೆ ನಡೆಸುವವರಿಗೆ ಗುರುತಿನ ಚೀಟಿಯಾಗಲಿ ಅಥವಾ ಪ್ರತ್ಯೇಕ ಟೀ–ಶರ್ಟ್ ವಿತರಿಸುವುದಾಗಲಿ ಪೊಲೀಸ್ ಇಲಾಖೆಯಿಂದ ಮಾಡಬೇಡಿ. ಇದರಿಂದ ಗೊಂದಲ ಮತ್ತು ಹಲವರಲ್ಲಿ ವೈಮನಸ್ಸು ಮೂಡುತ್ತದೆ. ಹಾಗೇ ರಥೋತ್ಸವದ ವೇಳೆ ಸನ್ನೆಕೊಡುವ ನುರಿತ ವ್ಯಕ್ತಿಗಳು ಬಿಟ್ಟರೆ ಬೇರೆ ಯಾವ ವ್ಯಕ್ತಿಗಳಿಗೂ ಈ ಕಾರ್ಯ ಮಾಡಲಾಗುವುದಿಲ್ಲ. ಈ ಬಗ್ಗೆ ಯಾವುದೇ ಅನುಮಾನ ಬೇಡ. ಹಾಗೇ ಯಾವುದೇ ಅವಘಡಗಳಿಗೆ ಅವಕಾಶ ನೀಡುವುದಿಲ್ಲ ಎಂದು ಗ್ರಾಮಸ್ಥ ಕೆ.ಎನ್.ತಿಪ್ಪೇರುದ್ರಪ್ಪ ಹೇಳಿದರು.

    ಪೊಲೀಸ್ ವೃತ್ತ ನಿರೀಕ್ಷಕ ರಾಜಶೇಖರಯ್ಯ, ಪಿಎಸ್‌ಐಗಳಾದ ಕೆ.ಶಿವಕುಮಾರ್, ಕುಮಾರ್, ಮುಖ್ಯಾಧಿಕಾರಿ ಎ.ನಸರುಲ್ಲಾ, ಪ.ಪಂ.ಸಿಬ್ಬಂದಿ ಟಿ.ತಿಪ್ಪೇಸ್ವಾಮಿ, ಸುರೇಶ್, ಸಂದೀಪ್, ಪೊಲೀಸ್ ಸಿಬ್ಬಂದಿ ತಿರುಕಪ್ಪ, ಕರಿಬಸಪ್ಪ, ರುದ್ರಪ್ಪ, ಅಣ್ಣಪ್ಪ ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top