ಮುಖ್ಯ ಸುದ್ದಿ
Library: ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ | ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು

Published on
CHITRADURGA NEWS | 05 NOVEMBER 2024
ಚಿತ್ರದುರ್ಗ: ಚಿತ್ರದುರ್ಗ ನಗರ ಕೇಂದ್ರ ಗ್ರಂಥಾಲಯ(Library)ದಲ್ಲಿ ಇದೇ ನವೆಂಬರ್ 14 ರಿಂದ 20 ರವರೆಗೆ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಿಸುತ್ತಿದ್ದು, ಇದರ ಅಂಗವಾಗಿ ನವೆಂಬರ್ 11ರಂದು ಚಿತ್ರದುರ್ಗ ನಗರ ವ್ಯಾಪ್ತಿಯಲ್ಲಿ ಮಾತ್ರ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆ ಆಯೋಜಿಸಲಾಗಿದೆ.
ಕ್ಲಿಕ್ ಮಾಡಿ ಓದಿ: City Council: ನಿಮ್ಮ ನಿವೇಶನ ಸ್ವಚ್ಛಗೊಳಿಸದಿದ್ದರೆ ದಂಡ ಖಚಿತ | ನಗರಸಭೆ ಅಧ್ಯಕ್ಷೆ ಸುಮಿತಾ ರಾಘವೇಂದ್ರ
ಪ್ರತಿ ಶಾಲಾ ಹಾಗೂ ಕಾಲೇಜುಗಳಿಂದ ಇಬ್ಬರು ವಿದ್ಯಾರ್ಥಿಗಳಂತೆ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಉಪನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಈಗಾಗಲೇ ಪತ್ರ ರವಾನಿಸಲಾಗಿದೆ ಹಾಗೂ ಶಾಲಾ ಕಾಲೇಜುಗಳಿಗೆ ಗ್ರಂಥಾಲಯದಿಂದಲೇ ಮುದ್ದಾಂ ಆಗಿ ಪತ್ರ ನೀಡಲಾಗಿದೆ.
ಒಂದು ವೇಳೆ ತಲುಪದಿದ್ದಲ್ಲಿ ಶಾಲಾ ಮುಖ್ಯೋಪಾಧ್ಯಾರು ಹಾಗೂ ಪ್ರಾಂಶುಪಾಲರು ಶಾಲಾ-ಕಾಲೇಜುಗಳಿಂದ ಇಬ್ಬರು ವಿದ್ಯಾರ್ಥಿಗಳನ್ನು ನವಂಬರ್ 8 ರಂದು ಸಂಜೆ 5 ಗಂಟೆಯೊಳಗಾಗಿ ನಗರ ಕೇಂದ್ರ ಗ್ರಂಥಾಲಯ ಕಚೇರಿಗೆ ಹೆಸರು ಸಲ್ಲಿಸಲು ಸೂಚಿಸಲಾಗಿದೆ.
ಸ್ಫರ್ಧೆಯ ವಿವರ: ನವಂಬರ್ 11ರಂದು ಬೆಳಿಗ್ಗೆ 11 ರಿಂದ 12 ಗಂಟೆಯವರೆಗೆ “ಐತಿಹಾಸಿಕ ಚಿತ್ರದುರ್ಗ ಕಲ್ಲಿನ ಕೋಟೆಗೆ ಸಂಬಂಧಿಸಿದ ವಿಷಯದ ಕುರಿತು ಸ್ಥಳದಲ್ಲೆ ಚಿತ್ರ ಬರೆಯುವ ಸ್ಪರ್ಧೆವನ್ನು ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದೆ.
ಕ್ಲಿಕ್ ಮಾಡಿ ಓದಿ: Crop Damage: ಮಳೆಯಿಂದ ಬೆಳೆ ಹಾನಿ | ಶೀಘ್ರ ಪರಿಹಾರಕ್ಕೆ ರೈತರ ಆಗ್ರಹ
ಅಂದು ಮಧ್ಯಾಹ್ನ 3 ರಿಂದ 4 ರವರಗೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ “ಗ್ರಂಥಾಲಯದ ಮಹತ್ವ” ಕುರಿತು ಪ್ರಬಂಧ ಸ್ಪರ್ಧೆ ನಡೆಯಲಿದೆ. ಅಂದು ಸಂಜೆ 4 ರಿಂದ 5 ರವರೆಗೆ ಪ್ರಥಮ ಮತ್ತು ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ “ ತಾ.ರಾ.ಸು ಜೀವನ ಚರಿತ್ರೆ” ಕುರಿತು ಪ್ರಬಂಧ ಸ್ಪರ್ಧೆ ನಡೆಯಲಿದೆ.
ಈ ಎಲ್ಲಾ ಸ್ಪರ್ಧೆಗಳಿಗೆ 1 ಗಂಟೆ ಅವಧಿ ನಿಗಧಿಪಡಿಸಲಾಗಿದೆ ಎಂದು ಚಿತ್ರದುರ್ಗ ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Continue Reading
You may also like...
Related Topics:Central Library, Chitradurga, Chitradurga news, Chitradurga Updates, Kannada Latest News, Kannada News, National Library Week, Students, Various competitions, ಕನ್ನಡ ನ್ಯೂಸ್, ಕನ್ನಡ ಲೇಟೆಸ್ಟ್ ನ್ಯೂಸ್, ಕನ್ನಡ ಲೇಟೆಸ್ಟ್ ಸುದ್ದಿ, ಕನ್ನಡ ಸುದ್ದಿ, ಕೇಂದ್ರ ಗ್ರಂಥಾಲಯ, ಚಿತ್ರದುರ್ಗ, ಚಿತ್ರದುರ್ಗ ನ್ಯೂಸ್, ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ, ವಿದ್ಯಾರ್ಥಿಗಳಿಗೆ, ವಿವಿಧ ಸ್ಪರ್ಧೆ

Click to comment