Connect with us

    K.S.Naveen: ಸಮಾಜಶಾಸ್ತ್ರ ರಾಷ್ಟ್ರೀಯ ಸಮ್ಮೇಳನ | ಎಂಎಲ್ಸಿ ಕೆ.ಎಸ್.ನವೀನ್ ಚಾಲನೆ

    Socialogy National conference

    ಮುಖ್ಯ ಸುದ್ದಿ

    K.S.Naveen: ಸಮಾಜಶಾಸ್ತ್ರ ರಾಷ್ಟ್ರೀಯ ಸಮ್ಮೇಳನ | ಎಂಎಲ್ಸಿ ಕೆ.ಎಸ್.ನವೀನ್ ಚಾಲನೆ

    CHITRADURGA NEWS | 15 NOVEMBER 2024

    ಚಿತ್ರದುರ್ಗ: ನಗರದ ಸರ್ಕಾರಿ ಕಲಾ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಕರ್ನಾಟಕ ಸಮಾಜಶಾಸ್ತ್ರ ಸಂಘದಿಂದ 16ನೇ ರಾಷ್ಟ್ರೀಯ ಸಮಾಜಶಾಸ್ತ್ರ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು.

    ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ (K.S.Naveen) ಸಮ್ಮೇಳನಕ್ಕೆ ಚಾಲನೆ ನೀಡಿ, ಮಾತನಾಡುತ್ತಾ, ಸಮಾಜಶಾಸ್ತ್ರಜ್ಞರು ಗಂಭೀರವಾಗಿ ಚಿಂತಿಸಿದರೆ ದೇಶದ ಭವಿಷ್ಯವನ್ನು ಪರಿವರ್ತಿಸಬಹುದು ಎಂದು ಅಭಿಪ್ರಾಯಪಟ್ಟರು.

    ಇದನ್ನೂ ಓದಿ: ವಾಣಿವಿಲಾಸ ಸಾಗರ ಕೋಡಿ ಬೀಳಲು 1.95 ಅಡಿ ಬಾಕಿ

    ದಿನ ಬೆಳಗಾದರೆ ಮಾಧ್ಯಮಗಳಲ್ಲಿ ಭ್ರμÁ್ಟಚಾರ, ಅಪರಾಧಗಳನ್ನೇ ನೋಡುತ್ತಿದ್ದೇವೆ. ಇಂದಿನ ಪೀಳಿಗೆಯ ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರ, ಗುರು-ಹಿರಿಯರನ್ನು ಗೌರವಿಸುವುದು ಹಾಗೂ ಸಮಾಜದಲ್ಲಿ ಯಾವ ರೀತಿ ಬದುಕಬೇಕೆನ್ನುವ ಜ್ಞಾನ ಬೇಕಾಗಿರುವುದರಿಂದ ಸಮಾಜಶಾಸ್ತ್ರಕ್ಕೆ ತನ್ನದೆ ಆದ ಮಹತ್ವವಿದೆ ಎಂದರು.

    ಇದನ್ನೂ ಓದಿ:  ವಿದೇಶಿ ವ್ಯಾಸಂಗ ವೇತನಕ್ಕೆ ಅರ್ಜಿ ಆಹ್ವಾನ

    ದಾವಣಗೆರೆ ವಿಶ್ವವಿದ್ಯಾನಿಲಯದ ಉಪ ಕುಲಪತಿ ಪ್ರೊ.ಬಿ.ಡಿ.ಕುಂಬಾರ್ ಮಾತನಾಡಿ, ಸಮಾಜದಲ್ಲಿನ ಪ್ರತಿಯೊಂದು ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಪರಿಹಾರ ಕಂಡುಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ. ಸಮಾಜಶಾಸ್ತ್ರ ವಿಷಯವನ್ನು ಇಂಜಿನಿಯರಿಂಗ್ ಮತ್ತು ಮೆಡಿಕಲ್ ಶಿಕ್ಷಣದಲ್ಲಿಯೂ ಕಲಿಸುವ ಅಗತ್ಯತೆಯಿದೆ. ಸಮಾಜಶಾಸ್ತ್ರಜ್ಞರನ್ನು ಸಮಾಜದ ಉದ್ದಾರಕರೆಂದು ಕರೆಯಬೇಕಾಗಿದೆ. ಸಮಾಜದಲ್ಲಿನ ಸಾಮಾಜಿಕ ಸಮಸ್ಯೆಗಳ ಕುರಿತು ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗ ಜಾಗೃತಿ ಮೂಡಿಸುವ ಹೊಣೆಗಾರಿಕೆ ಪ್ರಾಧ್ಯಾಪಕರು ಹಾಗೂ ಉಪನ್ಯಾಸಕರುಗಳ ಮೇಲಿದೆ ಎಂದು ಹೇಳಿದರು.

    ಶಿಕ್ಷಣದಲ್ಲಿರುವ ಪಠ್ಯಗಳನ್ನು ಹೊರತುಪಡಿಸಿ ಮಕ್ಕಳಿಗೆ ಸಾಮಾಜಿಕವಾಗಿ ಜೀವಂತವಾಗಿರುವ ಸಮಸ್ಯೆಗಳ ಕುರಿತು ಬೋಧಿಸಬೇಕು. ಸಮಾಜಶಾಸ್ತ್ರದ ವಿಜ್ಞಾನಿಗಳು ಭ್ರμÁ್ಠಚಾರಗಳನ್ನು ಹೋಗಲಾಡಿಸಲು ಏನು ಮಾಡುತ್ತಿದ್ದಾರೆನ್ನುವುದು ನಮ್ಮ ಮುಂದಿರುವ ಪ್ರಶ್ನೆ? ಸಾಮಾಜಿಕ ಸಮಸ್ಯೆ, ನಿರುದ್ಯೋಗ ತಾಂಡವವಾಡುತ್ತಿದೆ.

    ಇದನ್ನೂ ಓದಿ: ಮೈಸೂರು ಕಿಸಾನ್ ಮಾಲ್ ಸ್ಥಾಪನೆ | ರೈತ ಉತ್ಪಾದಕ ಸಂಸ್ಥೆಗಳಿಂದ ಅರ್ಜಿ 

    ಭಾರತದಲ್ಲಿರುವ 140 ಕೋಟಿ ಜನರಿಗೂ ಸರ್ಕಾದ ಉದ್ಯೋಗ ಕೊಡಲು ಸಾಧ್ಯವಿಲ್ಲ. ಹೇಗೆ ಸ್ವಯಂ ಉದ್ಯೊಗ ಸೃಷ್ಟಿಸಿಕೊಂಡು ಸ್ವಾವಲಂಭಿಯಾಗಿ ಬದುಕಬೇಕೆನ್ನುವುದನ್ನು ಕಲಿಸುವುದೇ ಸಮಾಜ ಶಾಸ್ತ್ರದ ಗುರಿಯಾಗಬೇಕೆಂದರು.

    ಸ್ನಾತಕ, ಸ್ನಾತಕೋತ್ತರ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ದಿನದಿಂದ ದಿನೆ ಇಳಿಮುಖವಾಗುತ್ತಿದೆ. ಕೋಮುವಾದ ಜಾಸ್ತಿಯಾಗುತ್ತಿದೆ. ಜಾತಿಯತೆ, ಮೌಢ್ಯ, ಅಸ್ಪøಶ್ಯತೆ ನಿವಾರಿಸಬೇಕಾಗಿರುವುದು ನಮ್ಮ ಮುಂದಿರುವ ಸವಾಲು. ಈ ಸಂಬಂಧ ಸಮ್ಮೇಳನದಲ್ಲಿ ರೆಸಲೂಷನ್ ಮಾಡಿ ರಾಜ್ಯ ಸರ್ಕಾರ ಹಾಗೂ ಸಂಬಂಧಪಟ್ಟ ಮಂತ್ರಿಗಳಿಗೆ ಕಳಿಸುವಂತೆ ಪ್ರೊ.ಬಿ.ಡಿ.ಕುಂಬಾರ್ ಸಲಹೆ ನೀಡಿದರು.

    ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ ರೇಟ್ 

    ಸಮ್ಮೇಳನದ ದಿಕ್ಸೂಚಿ ಭಾಷಣ ಮಾಡಿದ, ಮಹಾರಾಷ್ಟ್ರದ ಸಾವಿತ್ರಿಬಾಯಿಪುಲೆ ಪುಣೆ ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ.ಶೃತಿ ತಾಂಬೆ, ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸಮಾನತೆ ನೀಡಿರುವುದರಿಂದ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಸಿಕ್ಕಿದೆ ಎಂದರು.

    ಸಮಾಜಶಾಸ್ತ್ರ ಸಮಾಜದ ಸತ್ಯ ಹಾಗೂ ಅಡಿಪಾಯವಿದ್ದಂತೆ. ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಮಕ್ಕಳಿಗೆ ಶಿಕ್ಷಣ ಹೇಳಿಕೊಡಲು ಹೋಗುವಾಗ ಅನೇಕರು ಅವರ ಮೇಲೆ ಮೊಟ್ಟೆ, ಕಲ್ಲು, ಸಗಣಿಯನ್ನು ಎಸೆಯುತ್ತಾರೆ. ಇμÉ್ಟಲ್ಲಾ ಅವಮಾನ ಅನುಭವಿಸಿ ಮಕ್ಕಳಿಗೆ ಪಾಠ ಹೇಳಿಕೊಡುವುದನ್ನು ಮಾತ್ರ ನಿಲ್ಲಿಸಲಿಲ್ಲ. ಇಂತಹ ಅನೇಕ ಸಾಮಾಜಿಕ ಸಮಸ್ಯೆಗಳು ಇನ್ನು ಜೀವಂತವಾಗಿವೆ. ಇದಕ್ಕೆಲ್ಲಾ ಸಮಾಜಶಾಸ್ತ್ರದಿಂದ ಪರಿಹಾರ ಕಂಡುಕೊಳ್ಳಬಹುದಾ ಎನ್ನುವ ಕುರಿತು ಚಿಂತಿಸಬೇಕಿದೆ ಎಂದರು.

    ಇದನ್ನೂ ಓದಿ: 6.60 ಕೋಟಿ‌ ಅಡಿಕೆ ದುಡ್ಡಿಗೆ ಪ್ರಾಣವೇ ಹೋಯ್ತು

    ಸರ್ಕಾರಿ ಕಲಾ ಕಾಲೇಜು ಪ್ರಾಚಾರ್ಯ ಬಿ.ಟಿ.ತಿಪ್ಪೇರುದ್ರಸ್ವಾಮಿ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಚಳ್ಳಕೆರೆ ಹೆಚ್.ಪಿ.ಪಿ.ಸಿ.ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಬಿ.ಎಸ್.ಮಂಜುನಾಥ, ಕರ್ನಾಟಕ ಸಮಾಜಶಾಸ್ತ್ರ ಸಂಘದ ಅಧ್ಯಕ್ಷೆ ಪ್ರೊ.ಎಸ್.ಜಯಶ್ರೀ, ಕಾರ್ಯದರ್ಶಿ ಡಾ.ಆದಿನಾರಾಯಣಪ್ಪ, ಸಂಘಟನಾ ಕಾರ್ಯದರ್ಶಿ ಡಾ.ಸ.ರಾ.ಲೇಪಾಕ್ಷ, ಸಹ ಸಂಘಟನಾ ಕಾರ್ಯದರ್ಶಿ ಡಾ.ಶ್ಯಾಮರಾಜ್, ಪ್ರಾಧ್ಯಾಪಕಿ ಪ್ರೊ.ತಾರಿಣಿ ಶುಭದಾಯಿನಿ ವೇದಿಕೆಯಲ್ಲಿದ್ದರು.

    ರಾಜ್ಯ ಹಾಗೂ ಹೊರ ರಾಜ್ಯಗಳ ವಿವಿಧ ಕಾಲೇಜುಗಳ ಅಧ್ಯಾಪಕರು, ವಿಶ್ವವಿದ್ಯಾನಿಲಯ ಹಾಗೂ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರು, ಸಂಶೋಧನಾ, ಸ್ನಾತಕೋತ್ತರ ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top