Connect with us

    ಮಠ, ಪೀಠದ ಅಧಿಕಾರ ಮರಳಿ ಪಡೆದ ಮುರುಘಾ ಶರಣರು | ಜಿಲ್ಲಾ ನ್ಯಾಯಾಧೀಶರಿಂದ ಹಸ್ತಾಂತರ

    ಮುರುಘರಾಜೇಂದ್ರ ಬೃಹನ್ಮಠ

    ಮುಖ್ಯ ಸುದ್ದಿ

    ಮಠ, ಪೀಠದ ಅಧಿಕಾರ ಮರಳಿ ಪಡೆದ ಮುರುಘಾ ಶರಣರು | ಜಿಲ್ಲಾ ನ್ಯಾಯಾಧೀಶರಿಂದ ಹಸ್ತಾಂತರ

    https://chat.whatsapp.com/Jhg5KALiCFpDwME3sTUl7x

    ಚಿತ್ರದುರ್ಗ ನ್ಯೂಸ್.ಕಾಂ: ಮುರುಘಾ ಮಠದ ಪೀಠಾಧಿಪತಿ ಡಾ.ಶ್ರೀ.ಶಿವಮೂರ್ತಿ ಮುರುಘಾ ಶರಣರಿಗೆ ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್‍ಜೆಎಂ ವಿದ್ಯಾಪೀಠದ ಆಡಳಿತವನ್ನು ಹೈಕೋರ್ಟ್ ನಿರ್ದೇಶನದಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಸ್ತಾಂತರ ಮಾಡಿದ್ದಾರೆ.

    ಪೋಕ್ಸೋ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾದ ನಂತರ ಮಠಕ್ಕೆ ಸರ್ಕಾರದಿಂದ ಆಡಳಿತಾಧಿಕಾರಿ ನೇಮಕ ಮಾಡಲಾಗಿತ್ತು. ಆನಂತರ ಈ ತೀರ್ಮಾನಕ್ಕೆ ವಿರೋಧ ವ್ಯಕ್ತವಾಗಿ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದರಿಂದ, ಹೈಕೋರ್ಟ್ ಜಿಲ್ಲಾ ನ್ಯಾಯಾಧೀಶರನ್ನೇ ತಾತ್ಕಾಲಿಕ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿತ್ತು.

    ಇದನ್ನೂ ಓದಿ: ಜೈಲಿನಿಂದ ಹೊರಗೆ ಬಂದ ಮುರುಘಾ ಶರಣರು | 14 ತಿಂಗಳ ಜೈಲುವಾಸಕ್ಕೆ ಮುಕ್ತಿ

    ಈಗ ಮುರುಘಾ ಶರಣರು ಜಾಮೀನು ಆಧಾರದಲ್ಲಿ ಬಿಡುಗಡೆಯಾಗಿದ್ದರಿಂದ ಮತ್ತೆ ಮಠ ಹಾಗೂ ಎಸ್‍ಜೆಎಂ ವಿದ್ಯಾಪೀಠದ ಆಡಳಿತ ನಿರ್ವಹಣೆಯ ಅಧಿಕಾರ ಅವರಿಗೆ ಲಭ್ಯವಾಗಿದೆ.

    ಹೈಕೋರ್ಟ್ ನಿರ್ದೇಶನದ ಮೇರೆಗೆ ಮುರುಘಾ ಮಠದ ತಾತ್ಕಾಲಿಕ ಆಡಳಿತಾಧಿಕಾರಿಯಾಗಿದ್ದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶೆ ಕೆ.ಬಿ.ಗೀತಾ ಅವರು ಪೀಠಾಧಿಪತಿ ಶಿವಮೂರ್ತಿ ಶರಣರಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ.

    ಪೀಠಾಧಿಪತಿಗೆ ಅಧಿಕಾರ ಮರಳಿಸಿದ ಆದೇಶ ಡಿ.5ರಂದು ಹೊರಬಿದ್ದಿದ್ದು, ನ್ಯಾಯಾಧೀಶರ ಕಚೇರಿ ಗುರುವಾರ ಅಧಿಕೃತ ಪತ್ರವನ್ನು ಮಠಕ್ಕೆ ತಲುಪಿಸಿದೆ. ಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ನ್ಯಾಯಾಲಯದ ಆದೇಶ ಪ್ರತಿ ಸ್ವೀಕರಿಸಿ ಶಿವಮೂರ್ತಿ ಮುರುಘಾ ಶರಣರಿಗೆ ತಲುಪಿಸಿದ್ದಾರೆ. ಮುರುಘಾ ಶರಣರಿಗೆ ಚಿತ್ರದುರ್ಗ ಜಿಲ್ಲೆ ಪ್ರವೇಶಕ್ಕೆ ನಿಬರ್ಂಧ ಇರುವುದರಿಂದ ಹೊರಗಿನಿಂದಲೇ ಆಡಳಿತ ನಡೆಸಲಿದ್ದಾರೆ.

    ಇದನ್ನೂ ಓದಿ: ಚಿತ್ರದುರ್ಗ-ತುಮಕೂರು ನಡುವೆ ಏರ್‍ಪೋರ್ಟ್(AIRPORT) ನಿರ್ಮಾಣಕ್ಕೆ ಚಿಂತನೆ

    ಮಠದ ಸದ್ಭಕ್ತರು ಎಂದಿನಂತೆ ಸಹರಿಕರಿಸಬೇಕು ಎಂದು ಗುರುವಾರ ಸಂಜೆ ಮುರುಘಾ ಮಠ ಹಾಗೂ ಎಸ್‍ಜೆಎಂ ವಿದ್ಯಾಪೀಠದ ಪ್ರಕಠಣೆಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

    ಮುರುಘರಾಜೇಂದ್ರ ಬೃಹನ್ಮಠ

    ಮುರುಘರಾಜೇಂದ್ರ ಬೃಹನ್ಮಠ

    ಮಠದ ಆಡಳಿತಕ್ಕೆ ಸಂಬಂಧಿಸಿ ಏನೇನು ಆಗಿತ್ತು:

    2022 ಸೆಪ್ಟಂಬರ್ 1 ರಂದು ರಾತ್ರಿ ಮುರುಘಾ ಮಠದ ಪೀಠಾಧಿಪತಿ ಡಾ.ಶ್ರೀ.ಶಿವಮೂರ್ತಿ ಮುರುಘಾ ಶರಣರನ್ನು ಪೋಕ್ಸೋ() ಕಾಯ್ದೆ ಅಡಿ ಬಂಧಿಸಲಾಗಿತ್ತು. ಬರೋಬ್ಬರಿ 14 ತಿಂಗಳುಗಳ ಕಾಲ ಶರಣರು ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು.

    ಶ್ರೀಗಳ ಬಂಧನವಾಗುತ್ತಲೇ ಮಠದ ದೈನಂದಿನ ಆಗುಹೋಗುಗಳು, ವಿದ್ಯಾಪೀಠದ ನೌಕರರ ವೇತನ ಇತ್ಯಾದಿ ನಿರ್ವಹಣೆಗೆ ಅಡಚಣೆಯಾಗುತ್ತದೆ. ಮಠದ ಆಡಳಿತ ಸುಸೂತ್ರವಾಗಿ ನಡೆದುಕೊಂಡು ಹೋಗುವ ನಿಟ್ಟಿನಲ್ಲಿ ಸರ್ಕಾರ ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಬೇಕು ಎಂದು ಮಠದ ಭಕ್ತರು, ಮಾಜಿ ಸಚಿವ ಎಚ್.ಏಕಾಂತಯ್ಯ ಮತ್ತಿತರರು ಸಭೆ ನಡೆಸಿ ಒತ್ತಾಯ ಮಾಡಿದ್ದರು.

    ಇದನ್ನೂ ಓದಿ: ದುರ್ಗದ ಭೂಗರ್ಭದಲ್ಲಿ ಬಹುಬೇಡಿಕೆಯ ನಿಕ್ಷೇಪ ಪತ್ತೆ

    ಈ ಒತ್ತಡದ ಕಾರಣಕ್ಕೆ ಸರ್ಕಾರ 2022 ಡಿಸೆಂಬರ್ 13 ರಂದು ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್.ವಸ್ತ್ರದ್ ಅವರನ್ನು ಮಠಕ್ಕೆ ಆಡಳಿತಾಧಿಕಾರಿಯಾಗಿ ನೇಮಕ ಮಾಡಿತ್ತು.

    ಸರ್ಕಾರದ ಈ ನಿರ್ಧಾರವನ್ನು ಪ್ರಶ್ನೆ ಮಾಡಿ ಮಠದ ಉಸ್ತುವಾರಿಗಳಾಗಿರುವ ಶ್ರೀ ಬಸವಪ್ರಭು ಸ್ವಾಮೀಜಿ ಹಾಗೂ ಮಠದ ಭಕ್ತರ ಮತ್ತೊಂದು ಗುಂಪು ಮತ್ತೆ ಹೈಕೋರ್ಟ್‍ನಲ್ಲಿ ದಾವೆ ಹೂಡಿತು.

    ವಿಚಾರಣೆ ನಡೆಸಿದ ನ್ಯಾಯಾಲಯ, ಮಠದ ಆಡಳಿತ ವ್ಯವಸ್ಥೆಯಲ್ಲಿ ಸರ್ಕಾರದ ಹಸ್ತಕ್ಷೇಪ ಸಲ್ಲದು ಎಂದು ತೀರ್ಮಾನಿಸಿ, ಸರ್ಕಾರ ನೇಮಿಸಿದ್ದ ಆಡಳಿತಾಧಿಕಾರಿಯನ್ನು ಹಿಂಪಡೆಯಲು ಸೂಚಿಸಿತು. ಇದೇ ವೇಳೆ ಭಕ್ತರು ಸಮಿತಿ ನೇಮಕ ಮಾಡಿಕೊಳ್ಳಲು ಸಲಹೆ ಮಾಡಿತ್ತು.

    ಮುರುಘರಾಜೇಂದ್ರ ಬೃಹನ್ಮಠ

    ಮುರುಘರಾಜೇಂದ್ರ ಬೃಹನ್ಮಠ

    ಈ ವೇಳೆ ಮತ್ತೆ ಗೊಂದಲಕ್ಕೆ ಒಳಗಾದ ಒಂದು ಗುಂಪು, ಸಮಿತಿ ಯಾರ ನೇತೃತ್ವದಲ್ಲಿ ಆಗಬೇಕು. ಮಠದ ಆಡಳಿತಾಧಿಕಾರಿ ಹಿಂಪಡೆದ ನಂತರ ಯಾರು ನಿರ್ವಹಣೆ ಮಾಡುತ್ತಾರೆ ಎಂದು ನಿರ್ದೇಶನ ಕೋರಿ ಕೋರ್ಟ್ ಮೊರೆ ಹೋಯಿತು.

    ಎಲ್ಲವನ್ನೂ ಗಮನಿಸಿದ ನ್ಯಾಯಾಲಯ, ಚಿತ್ರದುರ್ಗ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರನ್ನೇ ಮಠಕ್ಕೆ ತಾತ್ಕಾಲಿಕ ಆಡಳಿತಾಧಿಕಾರಿಯನ್ನಾಗಿ 2023 ಜುಲೈ 3 ರಂದು ನೇಮಕ ಮಾಡಿ ಆದೇಶಿಸಿತ್ತು.
    ಅಂದಿನಿಂದ ಮಠದ ಎಲ್ಲ ಚಟುವಟಿಕೆಗಳೂ ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲೇ ನಡೆದುಕೊಂಡು ಬರುತ್ತಿದ್ದವು.

    2023 ನವೆಂಬರ್ 16 ರಂದು ಡಾ.ಶ್ರೀ.ಶಿವಮೂರ್ತಿ ಮುರುಘಾ ಶರಣರಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ, ಚಿತ್ರದುರ್ಗ ಜಿಲ್ಲೆ ಪ್ರವೇಶಿಸದಂತೆ ಸೂಚಿಸಿ ಬಿಡುಗಡೆ ಮಾಡಿತು.

    ಬಿಡುಗಡೆಯಾದ ನಂತರ ದಾವಣಗೆರೆಯಲ್ಲಿ ತಂಗಿದ್ದ ಶ್ರೀಗಳು, ಮತ್ತೆ ಮಠದ ಜವಾಬ್ದಾರಿ ಮರಳಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಡಿ.5 ರಂದು ಹೈಕೋರ್ಟ್ ನಿರ್ದೇಶನ ನೀಡಿದ್ದು, ಜಿಲ್ಲಾ ನ್ಯಾಯಾಧೀಶರು ಗುರುವಾರ ಶ್ರೀಗಳಿಗೆ ಅಧಿಕಾರಿ ಹಸ್ತಾಂತರ ಮಾಡಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top