ಮುಖ್ಯ ಸುದ್ದಿ
ಚಿತ್ರದುರ್ಗ ನಗರಸಭೆ ಬಜೆಟ್ | ಯಾವ ಕೆಲಸಕ್ಕೆ ಎಷ್ಟು ಅನುದಾನ ಮೀಸಲು | ಇಲ್ಲಿದೆ ಪೂರ್ಣ ವಿವರ

Published on
CHITRADURGA NEWS | 18 FEBRUARY 2025
ಚಿತ್ರದುರ್ಗ: ಚಿತ್ರದುರ್ಗ ನಗರಸಭೆ ಅಧ್ಯಕ್ಷೆ ಸುಮಿತಾ ರಾಘವೇಂದ್ರ 2025-26ನೇ ಸಾಲಿಗೆ 1.2 ಕೋಟಿ ರೂ ಉಳಿತಾಯ ಬಜೆಟ್ ಮಂಡನೆ ಮಾಡಿದರು.
ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆ ಹಾಗೂ ಆಯವ್ಯಯ ಮಂಡನೆ ಸಭೆಯಲ್ಲಿ 146.80 ಕೋಟಿ ರೂ. ಬಜೆಟ್ ಮಂಡನೆ ಮಾಡಿದರು.

ಇದನ್ನೂ ಓದಿ: ಐಮಂಗಲ ಪೊಲೀಸರಿಂದ ಅಂತಾರಾಜ್ಯ ಕಳ್ಳನ ಬಂಧನ | 351 ಗ್ರಾಂ ಚಿನ್ನಾಭರಣ ವಶಕ್ಕೆ
66.17 ಕೋಟಿ ರೂ. ಆದಾಯ, 64.58 ಕೋಟಿ ರೂ.ಖರ್ಚು ಸೇರಿದಂತೆ ವಿವಿಧ ಮೂಲಗಳಿಂದ ಆದಾಯದ ನಿರೀಕ್ಷೆ ಮಾಡಲಾಗಿದೆ ಎಂದು ವಿವರಿಸಿದರು.
- ನಗರಸಭೆ ಆದಾಯ ಮತ್ತು ಸರ್ಕಾರದ ಅನುದಾನದಿಂದ ನಗರದ ವಿವಿಧ ವಾರ್ಡ್‍ಗಳಲ್ಲಿ ನೀರಿನ ಅವಶ್ಯಕತೆ ಇರುವ ಕಡೆ ಬೋರ್‍ವೆಲ್, ಶುದ್ಧ ನೀರಿನ ಘಟಕ, ಪೈಪ್‍ಲೈನ್ ಅಳವಡಿಕೆ, ನಿರ್ವಹಣೆ ಇತ್ಯಾದಿ ಕಾರ್ಯಗಳಿಗೆ 11.25 ಕೋಟಿ ರೂ. ಮೀಸಲಿಡಲಾಗಿದೆ.
- ನಗರದಲ್ಲಿನ ಒಳಚರಂಡಿಗಳ ಸಮರ್ಪಕ ನಿರ್ವಹಣೆ, ಅಭಿವೃದ್ಧಿಗಾಗಿ 3 ಕೋಟಿ ರೂ.
- ಪೂರ್ಣಗೊಳ್ಳುವ ಹಂತದಲ್ಲಿರುವ ತ್ಯಾಗರಾಜ ಮಾರುಕಟ್ಟೆ, ಮಾಂಸ ಮಾರುಕಟ್ಟೆ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ 2.5 ಕೋಟಿ ಮೀಸಲಿಡಲಾಗಿದೆ.
ಇದನ್ನೂ ಓದಿ: ಬೆಳೆ ವಿಮೆ ತಿರಸ್ಕೃತ ಪಟ್ಟಿ ಪ್ರಕಟ | ಆಕ್ಷೇಪಣೆ ಸಲ್ಲಿಸಲು ಮಾರ್ಚ್ 4 ಕೊನೆ ದಿನ
- ನಗರಸಭೆ ವ್ಯಾಪ್ತಿಯಲ್ಲಿ ಶೌಚಾಲಯ ನಿರ್ಮಾಣ, ನಿರ್ವಹಣೆ, ಘನತ್ಯಾಜ್ಯ ವಿಲೇವಾರಿ, ಕಸ ವಿಂಗಡಣೆ, ಯಂತ್ರಗಳ ಅಳವಡಿಕೆ, ಸ್ಮಶಾನಗಳ ಅಭಿವೃದ್ಧಿ, ಮುಕ್ತಿ ವಾಹನ ಖರೀದಿ, ಆಧುನಿಕ ವಧಾಗಾರ ಸೇರಿದಂತೆ ನೈರ್ಮಲೀಕರಣಕ್ಕಾಗಿ ಒಟ್ಟು 20 ಕೋಟಿ ರೂ.ಗಳನ್ನು ತೆಗೆದಿಡಲಾಗಿದೆ.
- ಹಾಲಿ ಇರುವ ವಿದ್ಯುತ್ ದೀಪಗಳ ಬದಲು ಎಲ್‍ಇಡಿ ದೀಪ ಅಳವಡಿಕೆ, ವಾರ್ಡ್‍ಗಳಲ್ಲಿ ಹೊಸದಾಗಿ ವಿದ್ಯುತ್ ಕಂಬ ಅಳವಡಿಸಲು 4 ಕೋಟಿ ನಿಗಧಿ ಮಾಡಲಾಗಿದೆ.
- 2025-26ನೇ ಸಾಲಿನ 15ನೇ ಹಣಕಾಸು ಯೋಜನೆ, ಎಸ್‍ಎಫ್‍ಸಿ ಅನುದಾನ ಸೇರಿದಂತೆ ಇತರೆ ಮೂಲಗಳಿಂದ ನಗರದಲ್ಲಿನ ಹಾಳಾಗಿರುವ ರಸ್ತೆಗಳ ಅಭಿವೃದ್ಧಿ, ಚರಂಡಿ ನಿರ್ಮಾಣ, ಪಾದಾಚಾರಿ ರಸ್ತೆ ನಿರ್ಮಾಣಕಕೆ 10 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.
ಇದನ್ನೂ ಓದಿ: 34 ಲಕ್ಷ ರೂ. ವಂಚಿಸಿದ್ದ ಮೂವರು ಆರೋಪಿಗಳ ಬಂಧನ | ಸೈಬರ್ ಪೊಲೀಸ್ ಕಾರ್ಯಚರಣೆ
- ನಗರದಲ್ಲಿನ ಟ್ರಾಫಿಕ್ ನಿಯಂತ್ರಣ, ಆಟೋ ನಿಲ್ದಾಣ, ಪಾರ್ಕಿಂಗ್ ಸ್ಥಳಗಳ ಅಭಿವೃದ್ಧಿಗೆ 50 ಲಕ್ಷ ರೂ,
- ನಗರದ ವಾರ್ಡ್‍ಗಳಿಗೆ ಆಧುನಿಕ ನಾಮಫಲಕ ಅಳವಡಿಕೆಗೆ 2 ಕೋಟಿ ರೂ,
- ಮುಖ್ಯ ವೃತ್ತಗಳ ಅಭಿವೃದ್ಧಿಗೆ 1 ಕೋಟಿ ರೂ. ಮೀಸಲಿಡಲಾಗಿದೆ.
- ನಗರದಲ್ಲಿ ಹಸಿರೀಕರಣ, ವಿವಿಧ ಬಡಾವಣೆಗಳ ಉದ್ಯಾನವನ ಅಭಿವೃದ್ಧಿಗೆ 3 ಕೋಟಿ ಮೀಸಲಿಡಲಾಗಿದೆ.
- ಪರಿಶಿಷ್ಟ ವರ್ಗದವರ ಕಲ್ಯಾಣ ಅಭಿವೃದ್ಧಿಗಾಗಿ 80 ಲಕ್ಷ ರೂ,
- ಇತರೆ ಬಡ ವರ್ಗದವರ ಅಭಿವೃದ್ಧಿಗೆ 25 ಲಕ್ಷ ರೂ,
- ವಿಕಲಚೇತನರ ಕಲ್ಯಾಣಕ್ಕೆ 15 ಲಕ್ಷ ರೂ,
- ಕ್ರೀಡಾ ಚಟುವಟಿಕೆಗಳ ಪ್ರೋತ್ಸಾಹಕ್ಕೆ 2 ಲಕ್ಷ, ನಲ್ಮ್ ಯೋಜನೆಯಡಿ ತರಬೇತಿ, ಸಹಾಯಧನ ಪಾವತಿಗೆ 50 ಲಕ್ಷಗಳನ್ನು ಸರ್ಕಾರದ ವಿವಿಧ ಅನುದಾನಗಳಲ್ಲಿ ಒದಗಿಸಲಾಗಿದೆ.
ಇದನ್ನೂ ಓದಿ: ಓವರ್ ಲೋಡಿಂಗ್ | 1 ಗಂಟೆ ವಿದ್ಯುತ್ ಕಡಿತ
- ಸ್ವಯಂ ಉದ್ಯೋಗಕ್ಕೆ ಬ್ಯಾಂಕ್ ಸಾಲ ಪಡೆದಿರುವ ಫಲಾನುಭವಿಗಳಿಗೆ ಸಹಾಯಧನ ನೀಡಲು 10 ಲಕ್ಷ ರೂ,
- ವೃತ್ತಿಪರ ಶಿಕ್ಷಣ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ಖರೀದಿಗೆ 10 ಲಕ್ಷ,
- ಪೌರಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಸಹಾಯಧನ, ಆರೋಗ್ಯ ತಪಾಸಣೆಗೆ 10 ಲಕ್ಷ ರೂ ಮೀಸಲಿಡಲಾಗಿದೆ.
ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಸರುಲ್ಲಾ, ಪೌರಾಯುಕ್ತೆ ರೇಣುಕಾ ಸೇರಿದಂತೆ ಸದಸ್ಯರು, ಅಧಿಕಾರಿಗಳು ಹಾಜರಿದ್ದರು.
Continue Reading
Related Topics:Budget Presentation, Chairperson Sumita, Chitradurga City Council, Chitradurga Latest, Chitradurga news, City Council Budget, featured, Kannada News, ಅಧ್ಯಕ್ಷೆ ಸುಮಿತಾ, ಕನ್ನಡ ಸುದ್ದಿ, ಚಿತ್ರದುರ್ಗ ನಗರಸಭೆ, ಚಿತ್ರದುರ್ಗ ನ್ಯೂಸ್, ಚಿತ್ರದುರ್ಗ ಲೇಟೆಸ್ಟ್, ನಗರಸಭೆ ಬಜೆಟ್, ಬಜೆಟ್ ಮಂಡನೆ

Click to comment