ಮುಖ್ಯ ಸುದ್ದಿ
ನಾಯಕನಹಟ್ಟಿ ಮುಕ್ತಿ ದೊಡ್ಡ ಮೊತ್ತಕ್ಕೆ ಹರಾಜು | ಈ ಬಾರಿ ಯಾರಿಗೆ ಒಲಿಯಿತು ಮುಕ್ತಿ ಭಾವುಟ ?

CHITRADURGA NEWS | 16 MARCH 2025
ಚಿತ್ರದುರ್ಗ: ಮಧ್ಯ ಕರ್ನಾಟಕದ ಅತೀ ದೊಡ್ಡ ಜಾತ್ರೆ ಅಥವಾ ಪರಿಷೆ ಎಂದೇ ಹೆಸರಾಗಿರುವ ಪವಾಡ ಪುರುಷ, ಕಾಯಕಯೋಗಿ ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ.
ತೇರು ಎಳೆಯುವ ಮುನ್ನಾ ಸಚಿವರು, ಜಿಲ್ಲಾಧಿಕಾರಿಗಳು ಮತ್ತಿತರೆ ಪ್ರಮುಖರು ಪೂಜೆ ಸಲ್ಲಿಸಿ, ಮುಕ್ತಿ ಭಾವುಟ ಹರಾಜು ಹಾಕುವುದು ವಾಡಿಕೆ.
ಇದನ್ನೂ ಓದಿ: PSI ಗಾದಿಲಿಂಗಪ್ಪ – ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತೇಗೌಡ ಹಲ್ಲೇ ಪ್ರಕರಣ | ಪಿಎಸ್ಐ ವಿರುದ್ಧ FIR ದಾಖಲಿಸಲು ಪಟ್ಟು
ಅದರಂತೆ ಈ ಬಾರಿ ರಥದ ಮುಂದೆ ನಡೆದ ಹಟ್ಟಿ ತಿಪ್ಪೇಶನ ಮುಕ್ತಿ ಭಾವುಟ ಭರ್ಜರಿ ಮೊತ್ತಕ್ಕೆ ಹರಾಜಾಗಿದೆ.
ಈ ವರ್ಷದ ಮುಕ್ತಿ ಭಾವುಟವನ್ನು ಬೆಂಗಳೂರು ಮೂಲದ, ನಾಯಕನಹಟ್ಟಿ ಅಳಿಯರಾದ ತೇಜಸ್ವಿ ಆರಾಧ್ಯ 63 ಲಕ್ಷ ರೂ.ಗಳಿಗೆ ಹರಾಜು ಮೂಲಕ ಪಡೆದುಕೊಂಡರು.
ಇದನ್ನೂ ಓದಿ: ನಾಯಕನಹಟ್ಟಿ ಜಾತ್ರೆ ಮುಕ್ತಿ ಭಾವುಟ ಹರಾಜಿಗೆ ಅಡ್ವಾನ್ಸ್ ಚೆಕ್ ಕಡ್ಡಾಯ
ಕಳೆದ ವರ್ಷ 2024ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಬರೋಬ್ಬರಿ 61 ಲಕ್ಷ ರೂ.ಗಳಿಗೆ ಹರಾಜು ಮೂಲಕ ಮುಕ್ತಿ ಭಾವುಟ ಪಡೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
