ಮುಖ್ಯ ಸುದ್ದಿ
ನಾಯಕನಹಟ್ಟಿ | 61 ಲಕ್ಷ ರೂ.ಗಳಿಗೆ ಮುಕ್ತಿ ಭಾವುಟ ಹರಾಜು
CHITRADURGA NEWS | 26 MARCH 2024
ಚಿತ್ರದುರ್ಗ: ಮಧ್ಯ ಕರ್ನಾಟಕದ ಪ್ರಮುಖ ಜಾತ್ರಾ ಮಹೋತ್ಸವ ಎಂದೇ ಗುರುತಿಸಕೊಂಡಿರುವ ನಾಯಕನಹಟ್ಟಿ ಶ್ರೀ ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಸಾಗುತ್ತಿದೆ.
ಭೀಕರ ಬರದ ನಡುವೆಯೂ ಲಕ್ಷಾಂತರ ಭಕ್ತರು ಜಾತ್ರೆಯಲ್ಲಿ ಭಾಗವಹಿಸಿ ಸಮೃದ್ಧ, ಮಳೆ ಮತ್ತು ಬೆಳೆ ನೀಡಲೆಂದು ಶ್ರೀ ಗುರು ತಿಪ್ಪೇರುದ್ರಸ್ವಾಮಿ ಬಳಿ ಪ್ರಾರ್ಥನೆ ಮಾಡಿದ್ದಾರೆ.
ಇದನ್ನೂ ಓದಿ: ಮುತ್ತುಗದ ಮರ ಮೈ ತುಂಬಾ ಹೂ ಬಿಟ್ಟರೆ ಏನರ್ಥ ಗೊತ್ತಾ..!
ಜಾತ್ರೆಯಲ್ಲಿ ಪ್ರಮುಖ ಆಕರ್ಷಣೆಯಾಗಿರುವ ಮುಕ್ತಿ ಭಾವುಟಕ್ಕೆ ಸಾಕಷ್ಟು ಪೈಪೋಟಿ ನಡೆಯುತ್ತದೆ. ಪ್ರತಿ ವರ್ಷವೂ ಮುಕ್ತಿ ಭಾವುಟವನ್ನು ಯಾರು, ಎಷ್ಟು ಮೊತ್ತಕ್ಕೆ ಹರಾಜಿನಲ್ಲಿ ಪಡೆದುಕೊಂಡರು ಎನ್ನುವುದು ಭಕ್ತರಲ್ಲಿ ಕುತೂಹಲ ಮೂಡಿಸುತ್ತದೆ.
ಅಂತೆಯೇ ಈ ವರ್ಷ ಅಂದರೆ 2024ರಲ್ಲಿ ನಡೆದ ಶ್ರೀ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಮಾತ್ರೆಯ ಮುಕ್ತಿ ಭಾವಟ ಬರೋಬ್ಬರಿ 61 ಲಕ್ಷ ರೂ.ಗಳಿಗೆ ಹರಾಜಾಗಿದೆ.
ಇದನ್ನೂ ಓದಿ: 150 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಣೆ | ಖಚಿತ ಮಾಹಿತಿ ಆಧರಿಸಿ ಪೊಲೀಸರ ಕಾರ್ಯಾಚರಣೆ
ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ 61 ಲಕ್ಷ ರೂ.ಗಳಿಗೆ ಮುಕ್ತಿ ಭಾವುಟವನ್ನು ಹರಾಜಿನಲ್ಲಿ ಪಡೆದುಕೊಂಡಿದ್ದಾರೆ.
ವಿಶೇಷವೆಂದರೆ ಕಳೆದ ವರ್ಷ ಕೂಡಾ ಸಚಿವ ಡಿ.ಸುಧಾಕರ್ 55 ಲಕ್ಷ ರೂ.ಗಳಿಗೆ ಮುಕ್ತಿ ಭಾವುಟವನ್ನು ಹರಾಜಿನಲ್ಲಿ ಪಡೆದುಕೊಂಡಿದ್ದರು.
ಇದನ್ನೂ ಓದಿ: ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ರಥೋತ್ಸವ ವೈಭವ | ಮನೆ ಮಾಡಿದ ಸಂಭ್ರಮ | ಒಳಮಠ, ಹೊರಮಠದಲ್ಲಿ ಭಕ್ತರ ದಂಡು
2022ರಲ್ಲಿ ಚಳ್ಳಕೆರೆ ಎಪಿಎಂಸಿ ಅಧ್ಯಕರಾಗಿದ್ದ ಟಿ.ಪ್ರಕಾಶ್ 16 ಲಕ್ಷ ರೂ.ಗಳಿಗೆ, 2021ರಲ್ಲಿ ನಾಯಕನಹಟ್ಟಿಯ ವಕೀಲ ಎಸ್.ಉಮಾಪತಿ 21 ಲಕ್ಷ ರೂ.ಗಳಿಗೆ ಪಡೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಮುಕ್ತಿ ಭಾವುಟ ಹರಾಜಿನ ನಂತರ ನಾಯಕನಹಟ್ಟಿಯ ತೇರು ಬೀದಿಯಲ್ಲಿ ಶ್ರೀ ತಿಪ್ಪೇರುದ್ರಸ್ವಾಮಿಯ ಬೃಹತ್ ಗಾತ್ರದ ತೇರನ್ನು ಲಕ್ಷಾಂತರ ಭಕ್ತರು ಎಳೆದು ಪುನೀತರಾದರು. ಈ ವೇಳೆ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮತ್ತಿತರರಿದ್ದರು.