ಮುಖ್ಯ ಸುದ್ದಿ
ಅಧಿಕಾರಿಗಳ ವಶಕ್ಕೆ ಮಂಕಿ ಮ್ಯಾನ್ ಜ್ಯೋತಿರಾಜ್ | ರಾಮನಗರದಲ್ಲಿ ಘಟನೆ

CHITRADURGA NEWS | 22 MARCH 2024
ಚಿತ್ರದುರ್ಗ: ಬೆಟ್ಟಗುಡ್ಡ, ಬಹು ಅಂತಸ್ತಿನ ಕಟ್ಟಡವನ್ನು ಸರಾಗವಾಗಿ ಏರುವ ಕಲೆ ಕರಗತವಾಗಿರುವ ಮಂಕಿಮ್ಯಾನ್ ಎಂದೇ ಖ್ಯಾತಿಗಳಿಸಿರುವ ಜ್ಯೋತಿ ರಾಜ್‌ನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಅನುಮತಿ ಪಡೆಯದೆ ರಾಮನಗರ ತಾಲ್ಲೂಕಿನ ಹಂದಿಗುಂದಿ ಬೆಟ್ಟವನ್ನು ಗುರುವಾರ ಏಕಾಂಗಿಯಾಗಿ ಹತ್ತಲು ಯತ್ನಿಸಿದ ಸಾಹಸಿಗ ಜ್ಯೋತಿರಾಜ್ (ಕೋತಿರಾಜ್) ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಕ್ಲಿಕ್ ಮಾಡಿ ಓದಿ: ಎಚ್ಚರ…ವೇದಾವತಿ ನದಿಗೆ ಹರಿಯಲಿದೆ ವಿವಿ ಸಾಗರ ನೀರು | ಇಲ್ಲಿದೆ ನೋಡಿ ನದಿ ಪಾತ್ರದ ಹಳ್ಳಿಗಳ ಪಟ್ಟಿ
ಬೆಟ್ಟ ಹತ್ತಲು ಅನುಮತಿ ನೀಡುವಂತೆ ಜ್ಯೋತಿರಾಜ್ ಕಳೆದ ಐದಾರು ದಿನಗಳಿಂದ ಅನುಮತಿ ನೀಡುವಂತೆ ಇಲಾಖೆ ಅಧಿಕಾರಿಗಳನ್ನು ಕೋರಿದ್ದರು. ಆದರೆ ಸುರಕ್ಷತೆಯ ದೃಷ್ಟಿಯಿಂದ ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಯ ಅನುಮತಿ ಸಹ ಪಡೆಯಿರಿ. ಆಮೇಲೆ ನಾವು ಅನುಮತಿ ಕೊಡುತ್ತೇವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದರು.
ಅಧಿಕಾರಿಗಳ ಸೂಚನೆ ಉಲ್ಲಂಘಿಸಿದ ಜ್ಯೋತಿರಾಜ್ ಬೆಳಿಗ್ಗೆ ಬೆಟ್ಟ ಹತ್ತಲು ಮುಂದಾಗಿದ್ದಾನೆ. ವಿಷಯ ತಿಳಿದ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿದ್ದಾರೆ. ಈ ವೇಳೆಗೆ ಸ್ವಲ್ಪ ದೂರ ಹತ್ತಿದ್ದ ಅವರನ್ನು ಕೆಳಕ್ಕೆ ಇಳಿಸಿ ವಶಕ್ಕೆ ಪಡೆದಿದ್ದಾರೆ.
ಕ್ಲಿಕ್ ಮಾಡಿ ಓದಿ: ಚುನಾವಣಾ ಕರ್ತವ್ಯ ನಿರ್ಲಕ್ಷ್ಯ ಮೂವರು ಶಿಕ್ಷಕಿಯರು ಅಮಾನತು
ಬಳಿಕ ಮೊಬೈಲ್‌ನಲ್ಲಿ ಜ್ಯೋತಿರಾಜ್ ಸೆರೆಹಿಡಿದಿದ್ದ ಬೆಟ್ಟ ಹತ್ತುವಾಗಿನ ದೃಶ್ಯವನ್ನು ಡಿಲೀಟ್ ಮಾಡಿಸಿದ್ದಾರೆ. ಜ್ಯೋತಿರಾಜ್ ಅವರಿಂದ ಮುಚ್ಚಳಿಕೆ ಪತ್ರ ಬರೆಯಿಸಿಕೊಂಡು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
