Connect with us

ಕೋಪದ ಕೈಗೆ ಬುದ್ದಿ ಕೊಟ್ಟ ಅಪ್ಪ: ಮಗನ ಪ್ರಾಣವೇ ಹೋಯ್ತು | ಟಿವಿ ರಿಮೋಟಿಗಾಗಿ ನಡೆದ ಜಗಳ ಸಾವಿನಲ್ಲಿ ಅಂತ್ಯ

FIR

ಕ್ರೈಂ ಸುದ್ದಿ

ಕೋಪದ ಕೈಗೆ ಬುದ್ದಿ ಕೊಟ್ಟ ಅಪ್ಪ: ಮಗನ ಪ್ರಾಣವೇ ಹೋಯ್ತು | ಟಿವಿ ರಿಮೋಟಿಗಾಗಿ ನಡೆದ ಜಗಳ ಸಾವಿನಲ್ಲಿ ಅಂತ್ಯ

ಚಿತ್ರದುರ್ಗ ನ್ಯೂಸ್.ಕಾಂ: ಕೋಪದ‌ ಕೈಗೆ ಬುದ್ದಿ ಕೊಟ್ಟರೆ ಏನು ಆಗಬಾರದೋ ಅಂಥದ್ದೊಂದು‌ ಅನಾಹುತ ಮೊಳಕಾಲ್ಮೂರು ಪಟ್ಟಣದ ಎಂ.ಎನ್.ಎಸ್. ಬಡಾವಣೆಯಲ್ಲಿ ಶನಿವಾರ ರಾತ್ರಿ ಘಟಿಸಿದೆ.

ಟಿವಿ ನೋಡುವಾಗ ರಿಮೋಟ್ ಗಾಗಿ‌ ಮಕ್ಕಳು ಕಿತ್ತಾಡುವುದು ಎಲ್ಲ ಮನೆಗಳಲ್ಲಿ ಸಾಮಾನ್ಯ ಸಂಗತಿ.‌ ಆಗ ದೊಡ್ಡವರು ಬಾಯಿ,‌ಕಣ್ಣಿನಲ್ಲಿ ಎದುರಿಸಿ, ಬೈದು ಬುದ್ದಿ ಹೇಳುವುದುಂಟು. ತೀರಾ ವಿಪರೀತಕ್ಕೆ ಹೋದಾಗ ಒಂದೆರಡು ಏಟು‌ ಕೊಡಬಹುದು.

ಆದರೆ,‌ ಮೊಳಕಾಲ್ಮೂರು ಪಟ್ಟಣದ ಎಂ.ಎನ್.ಎಸ್. ಬಡಾವಣೆಯಲ್ಲಿ ಆಗಿದ್ದೇ ಬೇರೆ. ತಂದೆಯ ಕೋಪದ ಕೈಗೆ ಬುದ್ದಿ ಕೊಟ್ಟಿದ್ದರಿಂದ ಹೆತ್ತ ಮಗನನ್ನೇ ಕಳೆದುಕೊಳ್ಳುವಂತಾಗಿದೆ. ತಂದೆಯ ಮಗನ ಕೊಲೆ ಮಾಡಿದ ಆರೋಪ ಹೊತ್ತು ಕೂರುವಂತಾಗಿದೆ.

ಇದನ್ನೂ‌ ಓದಿ: ಲಾರಿಗೆ ಬೈಕ್ ಡಿಕ್ಕಿ, ಬೈಕ್ ಸವಾರ ಮೃತ್ಯು

ಆಗಿದ್ದಿಷ್ಟು, ಶನಿವಾರ ರಾತ್ರಿ, ಇಲ್ಲಿನ‌ ಲಕ್ಷ್ಮಣ ಬಾಬು ಎಂಬುವವರ ಇಬ್ಬರು ಮಕ್ಕಳು 16 ವರ್ಷ ಚಂದ್ರಶೇಖರ್, 14 ವರ್ಷದ ಪವನಕುಮಾರ ಟಿವಿ ರಿಮೋಟಿಗಾಗಿ ಕಿತ್ತಾಡಿದ್ದಾರೆ.‌ ಈ ವೇಳೆ ತಂದೆ ಗದರಿದ್ದಾರೆ. ಆದರೆ, ಇಷ್ಟಕ್ಕೆ ಮಕ್ಕಳು‌ ಸುಮ್ಮನಾಗಿಲ್ಲ.

ತಕ್ಷಣ ಕೈಗೆ ಸಿಕ್ಕಿದ ಕತ್ತರಿಯೊಂದನ್ನು ತೆಗೆದುಕೊಂಡು ಪುತ್ರ ಚಂದ್ರಶೇಖರನ ಕಡೆಗೆ ಸಿಟ್ಟಿನಲ್ಲಿ‌ ಎಸೆದಿದ್ದಾರೆ. ಆ ಕತ್ತರಿ‌ ಕಿವಿ ಮತ್ತು ಕತ್ತಿನ ಮಧ್ಯ ಭಾಗಕ್ಕೆ ತಗುಲಿ ರಕ್ತ ಚಿಮ್ಮಿದೆ.

ತಕ್ಷಣ ಅಡುಗೆ‌ ಮನೆಯಿಂದ ತಾಯಿ ಲಕ್ಷ್ಮೀ ಕಿರುಚುತ್ತಾ ಓಡಿ ಬಂದಿದ್ದಾರೆ. ತಕ್ಷಣ ಪಟ್ಟಣದ ಆಸ್ಪತ್ರೆಗೆ ದಾಖಲಿಸಿ‌ ಚಿಕಿತ್ಸೆ  ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ.‌ ಆದರೆ, ಮಾರ್ಗ ಮಧ್ಯೆ ಮಗ ಅಸುನೀಗಿದ್ದಾನೆ.

ಸ್ಥಳಕ್ಕೆ ಚಳ್ಳಕೆರೆ ಡಿವೈಎಸ್ಪಿ ಬಿ.ರಾಜಣ್ಣ, ಮೊಳಕಾಲ್ಮೂರು ಪಿಎಸ್ಐ ಪಾಂಡುರಂಗಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading
You may also like...
Click to comment

Leave a Reply

Your email address will not be published. Required fields are marked *

More in ಕ್ರೈಂ ಸುದ್ದಿ

To Top
Exit mobile version