ಮುಖ್ಯ ಸುದ್ದಿ
ROAD WORKS; ರಸ್ತೆ ಕಾಮಗಾರಿಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೂಮಿ ಪೂಜೆ
CHITRADURGA NEWS | 14 JULY 2024
ಚಿತ್ರದುರ್ಗ: ಅಲ್ಪ ಸಂಖ್ಯಾತರ ಇಲಾಖೆಯಿಂದ ಬಂದ ವಿಶೇಷ 5 ಕೋಟಿ ಅನುದಾನದಲ್ಲಿ ನಗರದ 11,12,14,16 ಮತ್ತು 23ನೇ ವಾರ್ಡಗಳ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೂಮಿ ಪೂಜೆ ಸಲ್ಲಿಸಿದರು.
ಇದನ್ನೂ ಓದಿ: Ravi Hegde; ಇದು ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳುವ ಸಮಯ | ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ
ಈ ವೇಳೆ ಮಾತನಾಡಿದ ಶಾಸಕರು, ನಗರದ ಎಲ್ಲಾ ಕಡೆ ರಸ್ತೆ ನಿರ್ಮಾಣ ಮಾಡುವುದಕ್ಕೆ ಸರ್ಕಾರ ಅನುದಾನವನ್ನು ನೀಡಿದೆ.
ಅಲ್ಪಸಂಖ್ಯಾತ ಇಲಾಖೆಯ ಸಚಿವರಾದ ಜಮೀರ್ ಆಹ್ಮದ್‍ರವರು ಎಲ್ಲಿ ಮುಸ್ಲಿಂ ಜನಾಂಗದವರು ಹೆಚ್ಚಾಗಿ ವಾಸ ಮಾಡುತ್ತಿದ್ದಾರೆ ಅಂತಹ ವಾರ್ಡಗಳಲ್ಲಿ ಉತ್ತಮವಾದ ರಸ್ತೆಯನ್ನು ನಿರ್ಮಾಣ ಮಾಡಲು ಅನುದಾನವನ್ನು ತಮ್ಮ ಇಲಾಖೆ ವತಿಯಿಂದ ನೀಡಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಇನ್ನೂ ಅನೇಕ ಕಡೆಗಳಲ್ಲಿ ರಸ್ತೆಗಳನ್ನು ನಿರ್ಮಾಣ ಮಾಡಬೇಕಿದೆ, ಕೆಲವಡೆಗಳಲ್ಲಿ ರಸ್ತೆಗಳೆ ಇಲ್ಲವಾಗಿದೆ, ಅಂತಹ ಸ್ಥಳಗಳಲ್ಲಿ ಸಿಸಿ ರಸ್ತೆಯನ್ನು ನಿರ್ಮಾಣ ಮಾಡಲಾಗುವುದೆಂದು ತಿಳಿಸಿದರು.
ಚಿತ್ರದುರ್ಗ ನಗರದ ಅಭೀವೃದ್ದಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು 20 ಕೋಟಿ ಹಣವನ್ನು ನೀಡಿದ್ದಾರೆ, ಇದರಲ್ಲಿ 8 ಕೋಟಿ ಹಣವನ್ನು ನಗರದ ವಿವಿಧ ಕಾಮಗಾರಿಗಳಿಗೆ ಬಳಕೆ ಮಾಡಲಾಗುವುದು.
ಇದನ್ನೂ ಓದಿ: ಛಲವಾದಿ ಮಹಾಸಭಾ ನೂತನ ರಾಜ್ಯಾಧ್ಯಕ್ಷೆ ವಾಣಿ ಶಿವರಾಮ್ ಗೆ ಸನ್ಮಾನ
ಈಗ ಅನೇಕ ಕಡೆಗಳಲ್ಲಿ ಡಾಂಬರ್ ರಸ್ತೆಗಳಿವೆ ಅವು ಸಹಾ ಹಾಳಾಗಿವೆ ಅವುಗಳನ್ನು ಹೊಸದಾಗಿ ಸಿ.ಸಿ. ರಸ್ತೆಗಳಾಗಿ ನಿರ್ಮಾಣ ಮಾಡಲಾಗುವುದು ಎಂದರು.
ಸಚಿವರಾದ ಜಮೀರ್ ಆಹ್ಮದ್‍ರವರು ನಗರದ ಅಭಿವೃದ್ದಿಗಾಗಿ ಈಗ ನೀಡಿದ ಅನುದಾನ ಅಲ್ಲದೆ 10 ಕೋಟಿ ಅನುದಾನವನ್ನು ನೀಡುವ ಭರವಸೆಯನ್ನು ನೀಡಿದ್ದಾರೆ ಎಂದು ತಿಳಿಸಿದರು.
ವಾರ್ಡ ನಂ, 11ರಲ್ಲಿ ಉಸ್ಮೀನೀಯ ಮಸೀದಿ ರಸ್ತೆ, ಕೂಹಿನೂರು ಈದ್ಗಾ, 12ರಲ್ಲಿ ಟಿಪ್ಪುಸುಲ್ತಾನ್ ಸರ್ಕಲ್ ರಸ್ತೆ, 14ರಲ್ಲಿ ಮಹಮದೀಯ ಮಸೀದಿ ರಸ್ತೆ, 16ರಲ್ಲಿ ಎಂ.ಕೆ.ಪ್ಯಾಲೇಸ್ ರಸ್ತೆ, 23ರಲ್ಲಿ ಪ್ರಸನ್ನ ಟಾಕೀಸ್ ರಸ್ತೆಗಳನ್ನು ನಿರ್ಮಾಣ ಮಾಡಲು ಶಾಸಕರು ಪೂಜಾ ಕಾರ್ಯಕ್ರಮವನ್ನು ನೇರವೇರಿಸಿದರು.
ಇದನ್ನೂ ಓದಿ: STUDENTS; ಕಳಪೆ ಆಹಾರ | ಹಾಸ್ಟೆಲ್ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಈ ಸಂದರ್ಭದಲ್ಲಿ ವಕ್ಛ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ, ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ತಾಜ್‍ಪೀರ್, ನಗರಸಭೆಯ ಮಾಜಿ ಅಧ್ಯಕ್ಷ ಮಂಜುನಾಥ್ ಗೊಪ್ಪೆ, ಸರ್ದಾರ್ ಆಹ್ಮದ್, ವೆಂಕಟೇಶ್ ಶಬ್ಬೀರ್ ಬಾಷಾ, ಆನ್ವರ್ ಬಾಷಾ, ಸೈಯದ್ ಹನೀಫ್, ಸೈಯದ್ ಖುದ್ದುಸ್, ಮುನ್ನಾ, ಸೈದು, ಮಕ್ಕಾ ಮಸೀದಿಯ ಮುತ್ತುವಲ್ಲಿ ದಾದಾಪೀರ್ ಪಾಟೀಲ್, ಬಾಷಿಧ್‍ಖಾನ್ ಸೇರಿದಂತೆ ಇತರರು ಭಾಗವಹಿಸಿದ್ದರು.