ಮುಖ್ಯ ಸುದ್ದಿ
Akhanda Bharath: ಬಜರಂಗದಳದಿಂದ ನಡುರಾತ್ರಿ ಧ್ವಜಾರೋಹಣ | ಅಖಂಡ ಭಾರತಕ್ಕೆ ಸಂಕಲ್ಪ

CHITRADURGA NEWS | 15 AUGUST 2024
ಚಿತ್ರದುರ್ಗ/ಹೊಸದುರ್ಗ: ವಿಶ್ವಹಿಂದೂ ಪರಿಷತ್, ಬಜರಂಗದಳದಿಂದ ಚಿತ್ರದುರ್ಗ ಹಾಗೂ ಹೊಸದುರ್ಗದಲ್ಲಿ ಆಗಸ್ಟ್ 14 ಮಧ್ಯರಾತ್ರಿ ರಾಷ್ಟ್ರ ಧ್ವಜಾರೋಹಣ ಮಾಡುವ ಮೂಲಕ ಅಖಂಡ ಭಾರತ ಸಂಕಲ್ಪ (Akhanda Bharath) ದಿನಾಚರಣೆ ಆಚರಿಸಲಾಯಿತು.
ಹೊಸದುರ್ಗ ಪಟ್ಟಣದಲ್ಲಿ ಬೃಹತ್ ಸಂಖ್ಯೆಯಲ್ಲಿ ಸೇರಿದ್ದ ಬಜರಂಗದಳ ಕಾರ್ಯಕರ್ತರು, ನೂರಾರು ಪಂಜುಗಳನ್ನು ಹಿಡಿದು ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮಾಡಿ ಘೋಷಣೆ ಕೂಗಿದರು.
ಕ್ಲಿಕ್ ಮಾಡಿ ಓದಿ: ಹೊರಕೆರೆ ದೇವರಪುರ ದೇವಸ್ಥಾನ | ಆಡಳಿತ ಮಂಡಳಿಗೆ ಪದಾಧಿಕಾರಿಗಳ ಆಯ್ಕೆ
ಚಿತ್ರದುರ್ಗ ನಗರದ ಜೆಸಿಆರ್ ಹಾಗೂ ಆನೆ ಬಾಗಿಲಿನಿಂದ ಪಂಜುಗಳನ್ನು ಹಿಡಿದು ಬಂದ ಬಜರಂಗದಳ ಕಾರ್ಯಕರ್ತರು ನಗರದ ವೀರ ವನಿತೆ ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿ ರಾತ್ರಿ 12 ಗಂಟೆಗೆ ಧ್ವಜಾರೋಹಣ ನೆರವೇರಿಸಿ ಅಖಂಡ ಭಾರತ ನಿರ್ಮಾಣಕ್ಕೆ ಸಂಕಲ್ಪ ಮಾಡಿದರು.
1947 ಆಗಸ್ಟ್ 14 ಮಧ್ಯರಾತ್ರಿ ದೇಶ ವಿಭಜನೆಯಾದ ಕರಾಳ ದಿನ:
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಜರಂಗದಳ ರಾಜ್ಯ ಪ್ರಮುಖರಾದ ಪುನೀತ್ ಅತ್ತಾವರ ಮಾತನಾಡಿ, 1947 ಆಗಸ್ಟ್ 14ರ ಮಧ್ಯ ರಾತ್ರಿ ಇಡೀ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಂಭ್ರಮ ಒಂದು ಕಡೆಯಾದರೆ, ಹಿಂದೂಸ್ತಾನ ಮತ್ತು ಪಾಕಿಸ್ಥಾನ ವಿಭಜನೆಯಾದ ನೋವು ಮತ್ತೊಂದು ಕಡೆ ಇತ್ತು ಎಂದರು.
ಕ್ಲಿಕ್ ಮಾಡಿ ಓದಿ: ಬೆಳಗಿನ ಜಾವದ ಮಳೆಗೆ ಬೆಚ್ಚಿದ ದುರ್ಗ | ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ಗೊತ್ತಾ ?
1947 ಆಗಸ್ಟ್ 14 ರಾತ್ರಿ ನಡೆದ ಜರಾಳ ಘಟನೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು. ತುಂಡಾದ ಈ ದೇಶ ಮತ್ತೆ ಅಖಂಡವಾಗಿಸಲು ವಿಶ್ವಹಿಂದೂ ಪರಿಷತ್ ಬಜರಂಗದಳ ಅಖಂಡ ಭಾರತ ಸಂಕಲ್ಪ ದಿನಾಚರಣೆ ಆಚರಿಸುತ್ತಾ ಬರುತ್ತಿದೆ ಎಂದು ಹೇಳಿದರು.
1947 ರಲ್ಲಿ ಛಿದ್ರವಾಗಿದ್ದು ಕೇವಲ ಭಾರತವಲ್ಲ. ಕೋಟ್ಯಾಂತರ ಭಾರತೀಯರ ಹೃದಯ. ಭಾರತ ವಿಭಜನೆಯಾಗಲು ಬ್ರಿಟೀಷರು, ಕಾಂಗ್ರೆಸ್ ಹಾಗೂ ಮುಸ್ಲೀಮರು ಕಾರಣರಾಗಿದ್ದಾರೆ. ಇಂದು ನಮಗೆ ಸಿಕ್ಕಿರುವುದು ಕೇವಲ ರಾಜಕೀಯ ಸ್ವಾತಂತ್ರ್ಯ ಮಾತ್ರ ಎಂದರು.
ಕ್ಲಿಕ್ ಮಾಡಿ ಓದಿ: ಹರ್ ಘರ್ ತಿರಂಗಾ ಅಭಿಯಾನ | ಗಮನ ಸೆಳೆದ ತಿರಂಗಾ ಯಾತ್ರೆ
ಮುಸ್ಲೀಂ ತುಷ್ಠೀಕರಣಕ್ಕೆ ಪೂರ್ಣ ವಿರಾಮ ಇಡುವ ಕಾಲ ಬಂದಿದೆ. ಬಾಂಗ್ಲಾ ಹೊತ್ತಿ ಉರಿಯುತ್ತಿದೆ. ಮೀಸಲಾತಿಗಾಗಿ ಆರಂಭವಾದ ಹೋರಾಟ ದೇಶವನ್ನು ಅರಾಜಕತೆ ಕಡೆಗೆ ತಂದು ಅಲ್ಲಿನ ಹಿಂದುಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ.
ಬಾಂಗ್ಲಾದಲ್ಲಿ ಬಜರಂಗದಳ, ಆರೆಸ್ಸೆಸ್ಸ್, ಬಿಜೆಪಿ, ಮೋದಿ, ಸಂಘ ಪರಿವಾರ ಯಾವುದೂ ಇಲ್ಲ. ಆದರೂ ಅಲ್ಲಿ ಗಲಾಟೆ ಆಗುತ್ತಿದೆ ಎಂದರೆ ಅದಕ್ಕೆ ಯಾರು ಕಾರಣ ಎನ್ನುವುದನ್ನು ಇಡೀ ಜಗತ್ತು ಅರ್ಥ ಮಾಡಿಕೊಳ್ಳಬೇಕು ಎಂದರು.
ಕ್ಲಿಕ್ ಮಾಡಿ ಓದಿ: ಸ್ವಾತಂತ್ರ್ಯ ದಿನಾಚರಣೆ ಆಫರ್ | ಎಕ್ಸ್-ರೇ, ಲ್ಯಾಬ್ ಟೆಸ್ಟ್ ಉಚಿತ
ದೇಶದ ಕಾನೂನು ಮತ್ತು ಸಂಸ್ಕøತಿಗೆ ಗೌರವ ಕೊಟ್ಟರೆ ಸರ್ವೇ ಜನ ಸುಖಿನೋ ಭವಂತು ಎಂದು ಹೇಳುತ್ತಿದ್ದೇವೆ. ಇಪ್ತಾರ್ ಕೂಟ ಆಯೋಜಿಸಿದರೆ, ಗಣಪತಿ ಶೋಭಾಯತ್ರೆಯಲ್ಲಿ ಮಜ್ಜಿಗೆ, ಶರಬತ್ತು ವಿತರಿಸಿದರೆ ಸಾಮರಸ್ಯ ಬರುವುದಿಲ್ಲ. ಬದಲಾಗಿ ಹಿಂದುಘಲ ಭಾವನೆಗಳಿಗೆ ಘಾಸಿಯಾಗದಂತೆ ನಡೆದುಕೊಂಡರೆ ಸಾಮರಸ್ಯ ಬರುತ್ತದೆ ಎಂದು ಒರತಿಪಾದಿಸಿದರು.
ಮತ್ತೋರ್ವ ಬಜರಂಗದಳ ಮುಖಂಡ ನರೇಶ್ ರೆಡ್ಡಿ ಮಾತನಾಡಿ, ದೇಶ ವಿಭಜನೆ ಆಗಬಾರದು, ಅಖಂಡವಾಗಿರಬೇಕು ಎಂದು ಹೇಳಿದ ಮಹಾತ್ಮಾ ಗಾಂಧೀಜಿ, ನೆಹರು, ಬಾಬು ರಾಜೇಂದ್ರ ಪ್ರಸಾದ್ ಸೇರಿದಂತೆ ಅಂದಿನ ಹಿರಿಯರ ಎದುರಿನಲ್ಲೇ ದೇಶ ಹೊಡೆದು ಹೋಳಾಯಿತು.
ಕ್ಲಿಕ್ ಮಾಡಿ ಓದಿ: ಚಿರತೆ ಸಾವಿನ ಬಗ್ಗೆ ಅನುಮಾನ | ಕರುನಾಡ ವಿಜಯಸೇನೆಯಿಂದ ತನಿಖೆಗೆ ಆಗ್ರಹ
ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ಅಜಯ್, ವಿಹಿಂಪ, ಬಜರಂಗದಳ ಮುಖಂಡರಾದ ಅಶೋಕ್, ಶ್ರೀನಿವಾಸ್, ರಂಗಸ್ವಾಮಿ, ಪ್ರಭಂಜನ್, ಕಿಶೋರ್ ಮತ್ತಿತರರು ಭಾಗವಹಿಸಿದ್ದರು.
ಹೊಸದುರ್ಗದಲ್ಲಿ ನಡೆದ ಅಖಂಡ ಭಾರತ ಸಂಕಲ್ಪ ದಿನಾಚರಣೆಯಲ್ಲಿ ವಿಹಿಂಪ, ಬಜರಂಗದಳ ಪ್ರಮುಖರಾದ ಸಿದ್ದೇಶ್, ಶ್ರೀನಿವಾಸ್ ಮೂರ್ತಿ, ಕುಮಾರ, ಕೃಷ್ಣಣ್ಣ, ಕೋಡಿಹಳ್ಳಿ ರವಿಕಿರಣ್ ಪಾಟೀಲ್, ರಾಧಾ ರಂಗಪ್ಪ ಮತ್ತಿತರರಿದ್ದರು.
