ಮುಖ್ಯ ಸುದ್ದಿ
FREE UNIFORM; ಮೇದಾರ ಕೇತೇಶ್ವರ ಮಠ | 150 ಬಡ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ
CHITRADURGA NEWS | 10 JULY 2024
ಚಿತ್ರದುರ್ಗ: ಸೀಬಾರದ ಸಮೀಪವಿರುವ ಮೇದಾರ ಕೇತೇಶ್ವರ ಮಠದಲ್ಲಿರುವ 150 ಬಡ ಮಕ್ಕಳಿಗೆ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ದಂಪತಿಯಿಂದ ಉಚಿತ ಸಮವಸ್ತ್ರ ವಿತರಿಸಲಾಯಿತು.
ಇದನ್ನೂ ಓದಿ: Mining Company: ಇಷ್ಟು ವರ್ಷದ ಲೆಕ್ಕದ ಜತೆ ಗಣಿ ಕಂಪನಿಯರನ್ನು ಸಭೆಗೆ ಕರೆಸಿ | ಸಂಸದ ಗೋವಿಂದ ಎಂ.ಕಾರಜೋಳ ಖಡಕ್ ಸೂಚನೆ
ಈ ವೇಳೆ ಬಸವ ಮೇದಾರ ಕೇತೇಶ್ವರ ಸ್ವಾಮೀಜಿ ಮಾತನಾಡಿ, ಬಡ ಮಕ್ಕಳ ಶಿಕ್ಷಣಕ್ಕೆ ಅವಶ್ಯವಿರುವ ವಸ್ತುಗಳನ್ನು ಹಿಂದಿನಿಂದಲೂ ನೀಡುತ್ತಾ ಬರುತ್ತಿರುವ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹಾಗೂ ಪತಿ ವಿಧಾನಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್ ಇವರುಗಳ ಸೇವೆ ಶ್ಲಾಘನೀಯ ಎಂದರು.
ಪೂರ್ಣಿಮ ಶ್ರೀನಿವಾಸ್‍ರವರು ಶಾಸಕರಾಗಿದ್ದಾಗಲೂ ನಮ್ಮ ಮಠದ ಬಡ ಮಕ್ಕಳ ಶಿಕ್ಷಣಕ್ಕೆ ಏನು ಕೇಳಿದರೂ ಇಲ್ಲವೆನ್ನಲಿಲ್ಲ. ನಮ್ಮ ಮಠದ ಜೊತೆ ಮೊದಲಿನಿಂದಲೂ ಅವಿನಾಭಾವ ಒಡನಾಟವಿದೆ. ಬಡ ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ಎಲ್ಲಾ ರೀತಿಯ ಸೌಲತ್ತುಗಳನ್ನು ನೀಡುತ್ತಿದೆ. ಇದರ ಜೊತೆಗೆ ಇಂತಹ ದಾನಿಗಳು ಕೈಜೋಡಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಗುಣಗಾನ ಮಾಡಿದರು.
ಹಳ್ಳಿಗಾಡಿನಿಂದ ಬರುವ ಬಡ ಕುಟುಂಬದ ಮಕ್ಕಳು ಬಟ್ಟೆ ಕೊಂಡುಕೊಳ್ಳಲು ಆಗದಂತ ಕಡು ಕಷ್ಟದಲ್ಲಿರುತ್ತಾರೆ. ಇಂತಹ ಮಕ್ಕಳಿಗೆ ಪೂರ್ಣಿಮಾ ಶ್ರೀನಿವಾಸ್ ದಂಪತಿಗಳು ಸಮವಸ್ತ್ರಗಳನ್ನು ಉದಾರ ಮನಸ್ಸಿನಿಂದ ಕೊಡಿಸಿದ್ದಾರೆ. ಇದೇ ರೀತಿ ಇನ್ನು ಅನೇಕ ಪರೋಪಕಾರದ ಸೇವೆ ಮಾಡುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಸ್ವಾಮೀಜಿ ಹಾರೈಸಿದರು.
ಲೇಖಕ ಹೆಚ್.ಆನಂದ್‍ಕುಮಾರ್ ಮಾತನಾಡಿ, ಮೇದಾರ ಎನ್ನುವ ಬುಡಕಟ್ಟು ಸಮುದಾಯ ಅತ್ಯಂತ ಕಡು ಬಡತನದಲ್ಲಿದ್ದು, ಶಿಕ್ಷಣದ ಮೂಲಕ ಬದುಕನ್ನು ಹಸನು ಮಾಡಿಕೊಳ್ಳಬೇಕು. ಮಠದ ಸುತ್ತಲು ಒಳ್ಳೆಯ ಪ್ರಶಾಂತ ವಾತಾವರಣವಿದ್ದು, ಮಕ್ಕಳು ಇದರ ಸದುಪಯೋಗಪಡಿಸಿಕೊಂಡು ಶಿಕ್ಷಣವಂತರಾಗುವ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಇದನ್ನೂ ಓದಿ: JYOTHI RATHAYATRE | ಕೋಟೆನಾಡಿನಲ್ಲಿ ಕರ್ನಾಟಕ ಜ್ಯೋತಿ ರಥಯಾತ್ರೆಯ ಭವ್ಯ ಮೆರವಣಿಗೆ
ವಿದ್ಯಾರ್ಥಿ ಜೀವನ ಎನ್ನುವುದು ವೈಯಾರ ಪುಂಡಾಟಿಕೆ ಮಾಡುವುದಲ್ಲ. ಶ್ರದ್ದೆ ವಹಿಸಿ ಕಠಿಣ ಪರಿಶ್ರಮದಿಂದ ಶಿಕ್ಷಣ ಕಲಿತಾಗ ಜೀವನದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಲು ಸಾಧ್ಯ. ಬುದ್ದ, ಬಸವ, ಅಂಬೇಡ್ಕರ್ ಅವರ ಆಶಯದಂತೆ ನೀವುಗಳು ವಿದ್ಯಾವಂತರಾಗಬೇಕು ಎಂದರು.
ಈ ಸಂದರ್ಭದಲ್ಲಿ ಕಣಿವೆ ಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಬೆಳಗಟ್ಟ, ಪೊಲೀಸ್ ವೃತ್ತ ನಿರೀಕ್ಷಕ ತಿಪ್ಪೇಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಮಂಜಪ್ಪ, ವೇಮನರೆಡ್ಡಿ ಸೇರಿದಂತೆ ಇತರರು ಇದ್ದರು.