ಹೊಳಲ್ಕೆರೆ
ಮತ್ತಿಘಟ್ಟ-ಚಿತ್ರದುರ್ಗ | ಸಾಸಲು ಸರ್ಕಲ್- ಹಿರೆಬೆನ್ನೂರಿಗೆ ಸಿಸಿ ರೋಡ್ | 65.39 ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಚಂದ್ರಪ್ಪ ಚಾಲನೆ

CHITRADURGA NEWS | 09 MARCH 2024
ಹೊಳಲ್ಕೆರೆ: ತಾಲ್ಲೂಕಿನ ಮತ್ತಿಘಟ್ಟ ಗ್ರಾಮದಿಂದ ಚಿತ್ರದುರ್ಗ ಮುಖ್ಯ ರಸ್ತೆವರಿಗೂ 31.14 ಕೋಟಿ ರೂ ವೆಚ್ಚದ ಹಾಗೂ ಸಾಸಲು ವೃತ್ತದಿಂದ ಹಿರೇಬೆನ್ನೂರುವರೆಗೆ 34.25 ಕೋಟಿ ರೂ. ವೆಚ್ಚದ ನೂತನ ಸಿಸಿ ರಸ್ತೆ ಕಾಮಗಾರಿಗಳಿಗೆ ಶಾಸಕ ಎಂ.ಚಂದ್ರಪ್ಪ ಚಾಲನೆ ನೀಡಿದರು.
ಇದನ್ನೂ ಓದಿ: ಹಿರಿಯ ನ್ಯಾಯವಾದಿ ಎಂ.ಮಹೇಶ್ವರಪ್ಪ ಇನ್ನಿಲ್ಲ
ಈ ವೇಳೆ ಮಾತನಾಡಿದ ಅವರು, ಇನ್ನು ನೂರು ವರ್ಷಗಳಾದರೂ ಹಾಳಾಗದೆ ಗಟ್ಟಿಮುಟ್ಟಾಗಿರುವಂತ ಸಿಸಿ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತದೆ, ರಸ್ತೆ ಆಗೋದಕ್ಕಿಂತ ಮುಂಚೆ ರೈತರ ತಮ್ಮ ಹೊಲ ಹಾಗೂ ತೋಟಗಳಿಗೆ ಪೈಪ್ಗಳನ್ನು ಹಾಕಿಸಿಕೊಳ್ಳುವುದು ಉತ್ತಮ, 450 ಕೋಟಿ ರೂಗಳನ್ನು ಖರ್ಚು ಮಾಡಿ ಹಿರಿಯೂರಿನ ವಾಣಿವಿಲಾಸ ಸಾಗರದಿಂದ ನೀರು ತಂದು ತಾಲ್ಲೂಕಿನ ಎಲ್ಲಾ ಹಳ್ಳಿಗಳಿಗೆ, ಮನೆ ಮನೆಗೆ ಕುಡಿಯುವ ನೀರು ಪೂರೈಸಲಾಗುವುದು. ನಾನು ಶಾಸಕನಾಗಿ ಬಂದಮೇಲೆ ಇಲ್ಲಿ ಮಣ್ಣಿನ ರಸ್ತೆ ಇತ್ತು, ಯಾರಿಂದ ಏನನ್ನು ಹೇಳಿಸಿಕೊಳ್ಳದೆ ಇಲ್ಲಿ ಯಾವ ಕೆಲಸವಾಗಬೇಕೆನ್ನುವುದನ್ನು ಕಣ್ಣಾರೇ ಕಂಡು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯುತ್ತಿದ್ದೇನೆ ಎಂದರು.
ಇದನ್ನೂ ಓದಿ: ಮಾ.10 ರಂದು ಕನ್ನಡ ಹಬ್ಬ, ಪ್ರಶಸ್ತಿ ಪ್ರಧಾನ ಸಮಾರಂಭ
ವಿಧಾನಸೌಧವನ್ನು 85 ಲಕ್ಷ ರೂಗಳಲ್ಲಿ ಕಟ್ಟಲಾಗಿದೆ, ನಿಮ್ಮ ಊರಿಗೆ 31 ವರೆ ಕೋಟಿ ರೂಗಳನ್ನು ಮಂಜೂರು ಮಾಡಿಸಿದ್ದೇನೆ, ಕೆರೆಯ ಮಧ್ಯದಲ್ಲಿ 40 ರಿಂದ 50 ಅಡಿ ಬೋರುವೆಲ್ ಕೊರೆದು ಪಿಲ್ಲರ್ ಹಾಕಿ ಮೋಟಾರ್ ಕೂರಿಸಿ ಡಿಸೆಂಬರ್-ಜನವರಿ ಒಳಗೆ ಎಲ್ಲಾ ಹಳ್ಳಿಗಳಿಗೂ ನೀರು ಸರಬರಾಜು ಮಾಡಲಾಗುವುದು, ವಿ.ವಿ ಸಾಗರದಿಂದ ಇನ್ನೂ ಹತ್ತು ವರ್ಷ ನೀರು ಬರದಿದ್ದರೂ ಹೆದರಬೇಕಾಗಿಲ್ಲ ಎಂದು ತಿಳಿಸಿದರು.
ಹೆಚ್.ಡಿ. ಪುರ, ನಂದನಹೊಸೂರು, ತಾಳ್ಯ, ಶಿವಗಂಗಾ ಕೆರೆಗಳಿಗೆ ಪೈಪ್ ಲೈನ್ ಹಾಕಿಸಿದ್ದೇನೆ, ಗಾಂಧೀಜಿ ಜಯಂತಿಯಂದು ಎಲ್ಲಾ ಕೆರೆಗಳಿಗೆ ನೀರು ತುಂಬಿಸುತ್ತೇನೆ, ಅಧಿಕಾರ ಶಾಶ್ವತವಲ್ಲ ಏನು ಕೆಲಸ ಮಾಡದವರಿಗೆ ವೋಟು ಹಾಕಿದರೆ ದೇವರು ಮೆಚ್ಚುವುದಿಲ್ಲ ಎನ್ನುವ ಅರಿವು ಪ್ರತಿಯೊಬ್ಬರಲ್ಲಿಯೂ ಇರಬೇಕೆಂದು ಶಾಸಕ ಎಂ. ಚಂದ್ರಪ್ಪ ಜನತೆಯನ್ನು ಎಚ್ಚರಿಸಿದ್ದರು.

ಸಾಸಲು ವೃತ್ತದಿಂದ ಹಿರೇಬೆನ್ನೂರು ವರೆಗಿನ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಎಂ. ಚಂದ್ರಪ್ಪ ಚಾಲನೆ ನೀಡಿದರು.
ಇದನ್ನೂ ಓದಿ: ಎಸ್‍ಓಪಿ ರಸರೊಬ್ಬರ ಜಪ್ತಿ | ಕೃಷಿ ಇಲಾಖೆ ಜಾರಿ ದಳ ದಾಳಿ
ನಾಲ್ಕು ವರ್ಷ 11 ತಿಂಗಳು ನಾನು ರಾಜಕೀಯ ಮಾಡಲ್ಲ, ಎಲ್ಲಾ ಪಕ್ಷದವರ ವಿಶ್ವಾಸ ಪಡೆದು ಕ್ಷೇತ್ರದ ಜನರಿಗೆ ಅನುಕೂಲವಾಗುವಂತ ಕೆಲಸ ಮಾಡುತ್ತಿದ್ದೇನೆ, ಚುನಾವಣೆ ಸಂದರ್ಭದಲ್ಲಿ ಕೇವಲ ಒಂದು ತಿಂಗಳ ಮಾತ್ರ ನಾನು ರಾಜಕೀಯ ಮಾಡುತ್ತೇನೆ, ಅಧಿಕಾರ ಶಾಶ್ವತವಲ್ಲ ಇರೋಷ್ಟು ದಿನ ಹತ್ತಾರು ಜನ ಮೆಚ್ಚುವ ರೀತಿ ಕೆಲಸ ಮಾಡುವ ಜಾಯಮಾನ ನನ್ನದು ಎಂದರು.
1994 ರಲ್ಲಿ ಮೊದಲ ಬಾರಿಗೆ ಭರಮಸಾಗರದಿಂದ ಸ್ಪರ್ಧಿಸಿ ಶಾಸಕನಾಗಿದ್ದೆ, ಒಂದು ಬಾರಿ ಗೆದ್ದವರು ಎರಡನೇ ಬಾರಿಗೆ ಭರಮಸಾಗರದಲ್ಲಿ ಗೆಲ್ಲುವುದಿಲ್ಲ ಎನ್ನುವ ಮೂಢನಂಬಿಕೆ ಇತ್ತು, ಆದರೆ ಎರಡನೇ ಬಾರಿಗೆ ಸ್ಪರ್ಧಿಸಿದಾಗಲೂ ಭರಮಸಾಗರ ಕ್ಷೇತ್ರದ ಜನ ಮತ ನೀಡಿ ನನ್ನನ್ನು ಗೆಲ್ಲಿಸಿದರು.
ಇದನ್ನೂ ಓದಿ: ರೈತರ ಧರಣಿ | ತಾತ್ಕಾಲಿಕ ಸ್ಥಗಿತ | ಈಚಘಟ್ಟ ಸಿದ್ದವೀರಪ್ಪ
ನೂರಾರು ಕೋಟಿಗಳನ್ನು ಖರ್ಚು ಮಾಡಿದ್ದೇನೆ, ಚಿಕ್ಕಜಾಜೂರು ಬಳಿ 12 ಕೋಟಿ ರೂ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಿಸಲಾಗುತ್ತಿದೆ, ಡಾ.ಗಳು ಅಲ್ಲಿಯೇ ಉಳಿದುಕೊಳ್ಳಲಿ ಎನ್ನುವ ಉದ್ದೇಶದಿಂದ 2 ಕೋಟಿ ರೂ ವೆಚ್ಚದಲ್ಲಿ ಕ್ವಾಟರ್ಸ್‍ಗಳನ್ನು ಕಟ್ಟಲಾಗುವುದೆಂದರು.
ಈ ಸಂದರ್ಭದಲ್ಲಿ ಹೊಳಲ್ಕೆರೆ ಬಿಜೆಪಿ ಮಂಡಲ ಅಧ್ಯಕ್ಷ ಸಿದ್ದೇಶ್, ಇಂಜಿನಿಯರ್ ಕಾಂತರಾಜ್, ಉದಯ ಶಿವಕುಮಾರ್ ಕಂಪನಿ ಲಿಮಿಟೆಡ್ನ ಇಂಜಿನಿಯರ್ ಮಂಜುಶ್ರೀ, ಗ್ರಾಮ್ ಪಂಚಾಯಿತಿ ಉಪಾಧ್ಯಕ್ಷ ಗೀತಮ್ಮ ಸೇರಿದಂತೆ ಗ್ರಾಮಸ್ಥರು ಇದ್ದರು.
