ಮುಖ್ಯ ಸುದ್ದಿ
ಮುರುಘಾ ಮಠದಲ್ಲಿ ಸಾಮೂಹಿಕ ಕಲ್ಯಾಣ | 21 ಜೋಡಿ ದಾಂಪತ್ಯಕ್ಕೆ ಪದಾರ್ಪಣೆ
CHITRADURGA NEWS | 05 APRIL 2024
ಚಿತ್ರದುರ್ಗ: ನಗರದ ಶ್ರೀ ಮುರುಘರಾಜೇಂದ್ರ ಮಠದಲ್ಲಿ 34 ನೇ ವರ್ಷದ ನಾಲ್ಕನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ 21 ನವಜೋಡಿಗಳ ವಿವಾಹ ನೆರವೇರಿಸಲಾಯಿತು.
ಇದನ್ನೂ ಓದಿ: ಕೋಟೆನಾಡಿನಲ್ಲಿ ಸಿಎಂ ಸಿದ್ದರಾಮಯ್ಯ ದುರ್ಗದ ಬಗ್ಗೆ ಐದು ಪ್ರಮುಖ ವಿಚಾರ ಪ್ರಸ್ತಾಪ
ಈ ವೇಳೆ ಮಾತನಾಡಿದ, ಶ್ರೀ ಬಸವಪ್ರಭು ಸ್ವಾಮೀಜಿ ಸಂಸಾರದ ಜಗಳ ಅದು ಪ್ರೀತಿಯ ಜಗಳವಿರಬೇಕು, ದ್ವೇಷ ಅಸೂಯೆ ಇರಬಾರದು, ಸಾಮರಸ್ಯದ ಕೀಳು ಇರಬೇಕು, ಗಂಡನಿಗೆ ಚಟ ಹಾಗೂ ಹೆಂಡತಿಗೆ ಹಠ ಇರಬಾರದು, ದುಶ್ಚಟಗಳಿಗೆ ದಾಸರಾಗಬೇಡಿ, ಏನೇ ಕಷ್ಟ ಬಂದರೂ ಎದುರಿಸಿ ಜೀವನ ಸಾಗಿಸಬೇಕು ಎಂದರು.
ಕೋಟಿ ಕೋಟಿ ಖರ್ಚು ಮಾಡಿ ಮದುವೆಯಾದವರು ಆದರ್ಶರಾಗಿರುವುದಿಲ್ಲ, ಸರಳವಾಗಿ ವಿವಾಹವಾಗುವವರು ಆದರ್ಶ ಜೀವನ ಸಾಗಿಸಲು ಸಾಧ್ಯ.
ಇದನ್ನೂ ಓದಿ: ಚೌಕಾಸಿ ಇಲ್ಲದೆ ತರಕಾರಿ ಖರೀಧಿಸಿದ ಗೋವಿಂದ ಕಾರಜೋಳ
ಶ್ರೀ ಮಠವು ಸಾಮಾಜಮುಖಿ ಕಾರ್ಯಗಳಿಗೆ ನಿರಂತರವಾಗಿ ತೊಡಗಿಸಿಕೊಂಡಿದೆ, ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಭಾವೈಕ್ಷತೆ ಕಾಣಲು ಸಾಧ್ಯ. ಎಲ್ಲರೂ ತಪ್ಪದೇ ಮತದಾನ ಮಾಡಿರಿ ಎಂದು ಹೇಳಿದರು.
ನಿಪ್ಪಾಣಿಯ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಶ್ರೀ ಮಠದಲ್ಲಿ ನಡೆಯುವ ಕಲ್ಯಾಣ ಮಹೋತ್ಸವ ಐತಿಹಾಸಿಕವಾದದ್ದು ಇಲ್ಲಿ ಸಾವಿರಾರು ಮದುವೆಗಳು ನಡೆದಿರುವುದು ಅದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ರೂ.1.29 ಕೋಟಿ ಮೌಲ್ಯದ ಮಧ್ಯ ಜಪ್ತಿ
ನಿವೃತ್ತ ತಹಶೀಲ್ದಾರ್ ಗಿರಿಯಪ್ಪ ಮಾತನಾಡಿ, ಸಾಮೂಹಿಕ ಕಲ್ಯಾಣ ಮಹೋತ್ಸವದಿಂದ ಸಾಮಾಜಿಕ ಸಾಮರಸ್ಯ ಬೆಳೆಯುತ್ತದೆ, ನಾವು ಎಂಬ ಭಾವನೆ ಬೇರೂರಿರುತ್ತದೆ, ಸುಸಂದರ್ಭ ಎಂದರು.