By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: Maharshi Valmiki: ಮಹರ್ಷಿ ವಾಲ್ಮೀಕಿ ವಿಗ್ರಹ ಪ್ರತಿಷ್ಠಾಪನೆ ಸಂಭ್ರಮ | ವೇದಾವತಿಯಿಂದ ಗಂಗಾ ಪೂಜೆ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » Maharshi Valmiki: ಮಹರ್ಷಿ ವಾಲ್ಮೀಕಿ ವಿಗ್ರಹ ಪ್ರತಿಷ್ಠಾಪನೆ ಸಂಭ್ರಮ | ವೇದಾವತಿಯಿಂದ ಗಂಗಾ ಪೂಜೆ

ಚಳ್ಳಕೆರೆ

Maharshi Valmiki: ಮಹರ್ಷಿ ವಾಲ್ಮೀಕಿ ವಿಗ್ರಹ ಪ್ರತಿಷ್ಠಾಪನೆ ಸಂಭ್ರಮ | ವೇದಾವತಿಯಿಂದ ಗಂಗಾ ಪೂಜೆ

News Desk Chitradurga News
Last updated: 21 November 2024 18:27
News Desk Chitradurga News
7 months ago
Share
ಮಹರ್ಷಿ ವಾಲ್ಮೀಕಿ ವಿಗ್ರಹ ಪ್ರತಿಷ್ಠಾಪನೆ
ಮಹರ್ಷಿ ವಾಲ್ಮೀಕಿ ವಿಗ್ರಹ ಪ್ರತಿಷ್ಠಾಪನೆ
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 21 NOVEMBER 2024

ಚಳ್ಳಕೆರೆ: ತಾಲ್ಲೂಕಿನ ಮೈಲನಹಳ್ಳಿಯ ಬಸ್ ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಿರುವ ಮಹರ್ಷಿ ವಾಲ್ಮೀಕಿ(Maharshi Valmiki) ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಸಮಾರಂಭ ಸಡಗರ ಸಂಭ್ರಮದಿಂದ ಜರುಗಿತು.

ಕ್ಲಿಕ್ ಮಾಡಿ ಓದಿ: ಮಲ್ಲಿಕಾರ್ಜುನ ಖರ್ಗೆ ನಾಗಪುರದ RSS ಕಚೇರಿಗೆ ಬರಲಿ | ಗೋವಿಂದ ಕಾರಜೋಳ ಆಹ್ವಾನ

ಮುಂಜಾನೆ ಸಮೀಪದ ವೇದಾವತಿ ನದಿಯಲ್ಲಿ ಗಂಗಾಪೂಜೆ ನೆರವೇರಿಸಿ ಕುಂಭಗಳಲ್ಲಿ ಗಂಗಾ ಜಲವನ್ನ ತರಿಸಿ ವಾಲ್ಮೀಕಿ ವಿಗ್ರಹಕ್ಕೆ ಅಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ವಾಲ್ಮೀಕಿ ವಿಗ್ರಹ ಲೋಕಾರ್ಪಣೆಯಾಯಿತು.

ಬಳಿಕ ವೇದಿಕೆ ಕಾರ್ಯಕ್ರಮವನ್ನು ನಿವೃತ್ತ ತಹಶೀಲ್ದಾರ್ ರಘುಮೂರ್ತಿ ಉದ್ಘಾಟಿಸಿ ಮಾತನಾಡಿ, ವರ್ತಮಾನದಲ್ಲಿ ವಾಲ್ಮೀಕಿಯನ್ನು ಮಹರ್ಷಿ, ಆದಿಕವಿ, ಆಧ್ಯಾತ್ಮಿಕ ಚಿಂತಕರಾಗಿ ನೋಡುವುದಕ್ಕಿಂತ ಹೆಚ್ಚಾಗಿ, ಅವರು ಬರೆದ ರಾಮಾಯಣವನ್ನು ನೈತಿಕ ಪಾಠವಾಗಿ ನೋಡುವ ತುರ್ತಿದೆ.

ವಾಲ್ಮೀಕಿ ರಚಿಸಿದ ರಾಮಾಯಣದ ರಾಮ ಮಹಾತ್ಮ ಗಾಂಧಿಗೂ ಮಾದರಿಯಾಗಿದ್ದರು. ವರ್ತಮಾನದಲ್ಲಿ ಯುವ ತಲೆಮಾರು ವಾಲ್ಮೀಕಿಯ ಮೂಲಕ ರಾಮಾಯಣ ನೋಡಬೇಕಿದೆ. ವಾಲ್ಮೀಕಿ ಮೂಲಕ ರಾಮಾಯಣ ಮರುವ್ಯಾಖ್ಯಾನಿಸುವ, ವಾಲ್ಮೀಕಿಯ ಕಣ್ಣಿನಿಂದ ರಾಮಾಯಣದ ಪಾತ್ರಗಳನ್ನು ಮರು ವಿಶ್ಲೇಷಣೆಗೆ ಒಳಪಡಿಸುವಂಥ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕಿದೆ. ಆಗ ಮಾತ್ರವೇ ವಾಲ್ಮೀಕಿಗೆ ನಿಜವಾದ ಗೌರವ ಕೊಟ್ಟಂತಾಗುತ್ತದೆ ಎಂದರು.

ಕ್ಲಿಕ್ ಮಾಡಿ ಓದಿ: ಮಾರುಕಟ್ಟೆ ಧಾರಣೆ | ಇಂದಿನ ಹತ್ತಿ ರೇಟ್

ರೈತ ಮುಖಂಡ ಕೆ.ಪಿ.ಭೂತಯ್ಯ ಮಾತನಾಡಿ, ವೃತ್ತಿಯಲ್ಲಿ ಬೇಟೆಗಾರನಾಗಿ, ಕಳ್ಳನೆಂಬ ಅಪಕೀರ್ತಿ ಗಳಿಸಿ ರಾಮಾಯಣವೆಂಬ ಮಹಾಗ್ರಂಥವನ್ನು ರಚಿಸಿ ಜಾಗತಿಕ ಮನ್ನಣೆಗೆ ಸ್ಫೂರ್ತಿಯಾದ ವಾಲ್ಮೀಕಿ ಮಹರ್ಷಿಯಂತಹ ಆದಿಕವಿಗಳ ಇತಿಹಾಸ ಮತ್ತೊಮ್ಮೆ ಚಿಮ್ಮಲಿ ಎಂದರು.

ಪಿಡಿಒ ನಾಗರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗನ್ನಾಥ್ ಮಾತನಾಡಿದರು.

ಕ್ಲಿಕ್ ಮಾಡಿ ಓದಿ: ವಿವಿ ಸಾಗರ ಭರ್ತಿಗೆ ಇನ್ನೊಂದು ಟಿಎಂಸಿ ಅಡಿ ಬಾಕಿ

ಕಾರ್ಯಕ್ರಮದಲ್ಲಿ ವಾಲ್ಮೀಕಿ ಯುವಕ ಸಂಘದ ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ಮುಖಂಡರಾದ ನಾಗಣ್ಣ, ಚನ್ನವೀರಪ್ಪ, ಗೌಡ್ರು ಬಸವರಾಜಪ್ಪ,

ಗ್ರಾಮ ಪಂಚಾಯಿತಿ ಸದಸ್ಯರಾದ ಜಯಲಕ್ಷ್ಮಿ, ವೆಂಕಟೇಶ್, ಶಾಂತಮ್ಮ, ಪಾಲಯ್ಯ, ಮಾಜಿ ಗ್ರಾಪಂ ಸದಸ್ಯ ಕೆ ಪಿ ತಿಪ್ಪೇಸ್ವಾಮಿ, ಈರಣ್ಣ, ಮಂಜುನಾಥ್ ಯಾದವ್ ಸೇರಿದಂತೆ ವಾಲ್ಮೀಕಿ ಯುವಕ ಸಂಘದವರು ಹಾಗೂ ಇತರರು ಇದ್ದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:celebrationChallakereChitradurgaChitradurga newsChitradurga UpdatesfeaturedGanga PujaInstallation of an idolKannada Latest NewsMaharshi ValmikiVedavatiಕನ್ನಡ ನ್ಯೂಸ್ಕನ್ನಡ ಲೇಟೆಸ್ಟ್ ನ್ಯೂಸ್ಕನ್ನಡ ಲೇಟೆಸ್ಟ್ ಸುದ್ದಿಕನ್ನಡ ಸುದ್ದಿಗಂಗಾ ಪೂಜೆಚಳ್ಳಕೆರೆಚಿತ್ರದುರ್ಗಚಿತ್ರದುರ್ಗ ಅಪ್ಡೇಟ್ಸ್ಚಿತ್ರದುರ್ಗ ನ್ಯೂಸ್ಫೀಚರ್ಡ್ಮಹರ್ಷಿ ವಾಲ್ಮೀಕಿವಿಗ್ರಹ ಪ್ರತಿಷ್ಠಾಪನೆವೇದಾವತಿಸಂಭ್ರಮ
Share This Article
Facebook Email Print
Previous Article Govinda karajola ಮಲ್ಲಿಕಾರ್ಜುನ ಖರ್ಗೆ ನಾಗಪುರದ RSS ಕಚೇರಿಗೆ ಬರಲಿ | ಗೋವಿಂದ ಕಾರಜೋಳ ಆಹ್ವಾನ
Next Article Power Cut chitradurga News (3) Power cut: ಹಿರಿಯೂರು ತಾಲೂಕಿನಲ್ಲಿ ನಾಳೆ ವಿದ್ಯುತ್ ವ್ಯತ್ಯಯ
Leave a Comment

Leave a Reply Cancel reply

Your email address will not be published. Required fields are marked *

ಉಸಿರಾಟದ ಕಾಯಿಲೆಗಳಿಗೆ ಈ ಎಲೆಯನ್ನು ಬಳಸಿ
Life Style
ಹೃದಯಾಘಾತದ ನಂತರ ಈ ತಪ್ಪುಗಳನ್ನು ಮಾಡಬೇಡಿ
Life Style
ಸ್ವಸ್ತಿಕ್ ಚಿಹ್ನೆ ಬಿಡಿಸುವಾಗ ನೀವು ಈ ತಪ್ಪನ್ನು ಮಾಡಬೇಡಿ
Life Style
today bhavishya
Astrology: ದಿನ ಭವಿಷ್ಯ | ಜೂನ್ 29 | ಆಕಸ್ಮಿಕ ಧನ ವ್ಯಯದ ಸೂಚನೆ, ಆಸ್ತಿ ವಿಷಯಗಳಲ್ಲಿ ವಿವಾದಗಳು
Dina Bhavishya
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up