ಮುಖ್ಯ ಸುದ್ದಿ
Raghavendra Swamy Maharathotsava;ರಾಘವೇಂದ್ರ ಸ್ವಾಮಿಗಳ ಮಹಾರಥೋತ್ಸವ | ಭಕ್ತಿಯಲ್ಲಿ ಮಿಂದೆದ್ದ ಅಪಾರ ಭಕ್ತ ಸಮೂಹ
CHITRADURGA NEWS | 22 AUGUST 2024
ಚಿತ್ರದುರ್ಗ: ಶ್ರೀಗುರು ರಾಘವೇಂದ್ರ ರಾಯರ 353ನೇ ಆರಾಧನಾ ಮಹೋತ್ಸವದ ಅಂಗವಾಗಿ ಗುರುವಾರ ನಗರದಲ್ಲಿ ಮಹಾರಥೋತ್ಸವ(Maharathotsava)ಜರು
ಕ್ಲಿಕ್ ಮಾಡಿ ಓದಿ: BJP: ಹೊಸದುರ್ಗ ಪುರಸಭೆ ಅಧ್ಯಕ್ಷರಾಗಿ ರಾಜೇಶ್ವರಿ ಆನಂದ್ ಅವಿರೋಧ ಆಯ್ಕೆ | ಉಪಾಧ್ಯಕ್ಷರಾಗಿ ಗೀತಾ ಆಸಂಗಿ
ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಬೃಂದಾವನದಲ್ಲಿ ಕಳೆದ ಮೂರು ದಿನಗಳಿಂದ ಆರಾಧನೆ ನಡೆಯುತ್ತಿದ್ದು, ಇಂದು ರಥೋತ್ಸವದ ಸಂಭ್ರಮ ಮನೆ ಮಾಡಿತ್ತು.
ಗುರು ಸಾರ್ವಭೌಮರ ಉತ್ತರಾರಾಧನೆ ಗುರುವಾರ ನಡೆದಿದ್ದು, ಉತ್ತರಾರಾಧನೆ ಪ್ರಯುಕ್ತ ನಗರದ ಪ್ರಮುಖ ಬೀದಿಗಳಲ್ಲಿ ಮಹಾರಥೋತ್ಸವ ಜರುಗಿತು.
ಈ ವೇಳೆ ವಿವಿಧ ಭಜನಾಮಂಡಳಿಗಳು ಹಾಗೂ ಶ್ರೀ ಗುರುಸಾರ್ವಭೌಮರ ಭಕ್ತರೊಂದಿಗೆ ಜರುಗಿತು.
ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ದರ್ಶನ ಪಡೆದರು. ರಥೋತ್ಸವದ ವೇಳೆ ಭಕ್ತಿ ಭಾವ ಪರವಶರಾಗಿದ್ದರು. ಆರಾಧನೆ ಪ್ರಯುಕ್ತ ಮಠದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು.
ಕ್ಲಿಕ್ ಮಾಡಿ ಓದಿ: VV Sagar inflow; ವಿವಿ ಸಾಗರ ಒಳ ಹರಿವು ಹೆಚ್ಚಳ | ಜಲಾಶಯದ ಇಂದಿನ ನೀರಿನ ಮಟ್ಟ
ರಾಯರ ಮಠಕ್ಕೆ ಮರದಿಂದ ನಿರ್ಮಾಣ ಮಾಡಿರುವ ರಥವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಿ, ರಾಯರನ್ನು ಪ್ರತಿಷ್ಠಾಪಿಸಿ ರಥೋತ್ಸವ ನಡೆಸಲಾಯಿತು.
ರಥ ಹೊರಡುವ ಮುನ್ನಾ ನೆರದಿದ್ದ ಭಕ್ತಾಧಿಗಳಿಗೆ ಮಠದಿಂದ ಬಾಳೆ ಹಣ್ಣು, ತೆಂಗಿನಕಾಯಿ, ಹೂ ಹಾಗೂ ಚಿಲ್ಲರೆ ಹಣವನ್ನು ನೀಡಲಾಯಿತು. ರಥೋತ್ಸವದಲ್ಲಿ ಚಂಡೆ, ನಾಗಸ್ವಾರ, ಭಜನಾ ತಂಡಗಳು ಭಾಗವಹಿಸಿದ್ದವು. ದಾರಿಯುದ್ದಕ್ಕೆ ನೆರದಿದ್ದ ಭಕ್ತಾಧಿಗಳು ರಾಯರ ಮಂತ್ರೋದ್ಘೋಷ ಮಾಡಿದರು.
ರಾಯರ ಮಠದಿಂದ ಪ್ರಾರಂಭವಾದ ರಥೋತ್ಸವವು ಆನೆಬಾಗಿಲು, ಚಿಕ್ಕಪೇಟೆ, ಸಂತೇಪೇಟೆ ವೃತ್ತದಿಂದ ಮರಳಿ ವಾಪಾಸ್ಸು ರಾಯರ ಮಠವನ್ನು ತಲುಪಿತ್ತು.
ಬೆಳಿಗ್ಗೆ ನಿರ್ಮಾಲ್ಯ ಅಷ್ಟೋತ್ತರ ಸಹಿತ ಫಲಪಂಚಾಮೃತ ಅಭಿಷೇಕ ಉತ್ಸವರಾಯರ ಪಾದಪೂಜೆ, ಕನಕಾಭಿಷೇಕ ನೈವೇದ್ಯ, ಅಲಂಕಾರ ಪಂಕ್ತಿ, ಹಸ್ತೋದಕ, ಮಹಾಮಂಗಳಾರತಿ, ತೀರ್ಥಪ್ರಸಾದ ಭಜನಾ ಕಾರ್ಯಕ್ರಮ ಸಂಸ್ಕೃತಿ ಕಾರ್ಯಕ್ರಮ ರಜತ ರಥೋತ್ಸವ, ಸ್ವಸ್ತಿವಾಚನ, ಅಷ್ಟಾವಧಾನ, ಮಹಾ ಮಂಗಳಾರತಿ. ಕಾರ್ಯಕ್ರಮ ನಡೆಯಿತು.
ಕ್ಲಿಕ್ ಮಾಡಿ ಓದಿ: Adike Rate: ಅಡಿಕೆ ಧಾರಣೆ | ಆಗಸ್ಟ್ 21 | ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್
ಶ್ರೀ ಗುರುರಾಜ ಭಕ್ತ ಮಂಡಳಿಯಿಂದ ಗುರುವಾರ ಸಂಜೆ ಶ್ರೀ ರಾಘವೇಂದ್ರ ಸ್ವಾಮಿಗಳ ಸ್ಮರಣೆ ರೂಪಕ ನಡೆಯಿತು.
ಸುಜ್ಣಾನೇಂದ್ರತೀರ್ಥರ ಆರಾಧನೆ:
ಆ. 23 ನೇ ಶುಕ್ರವಾರ ಶ್ರೀ ಸುಜ್ಞಾನೇಂದ್ರತೀರ್ಥರ ಆರಾಧನೆ, ಪವಮಾನ ಹೋಮ, ಸರ್ವಸಮರ್ಪಣೋತ್ಸವ ಕಾರ್ಯಕ್ರಮ ನಡೆಯಲಿದೆ.
ಶುಕ್ರವಾರ ಬೆಳಿಗ್ಗೆ 11.00 ರಿಂದ ಭಜನೆ ಶ್ರೀ ಬ್ರಹ್ಮಚೈತನ್ಯ ಮಹಿಳಾ ಭಜನಾ ಮಂಡಳಿಯವರಿಂದ ಸಂಜೆ 5.30 ರಿಂದ 7.30ರವರೆಗೆ ಚಂಪಕ ಶ್ರೀಧರ್ ಮತ್ತು ಶಿಷ್ಯವೃಂದ ದವರಿಂದ ಕರ್ನಾಟಕ ಸಂಗೀತ ಕಾರ್ಯಕ್ರಮ ನಡೆಯಲಿದೆ.