Connect with us

    Madara Channaiah Sri: ಮಹಾನಾಯಕ ದಲಿತ ಸೇನೆ ಉದ್ಘಾಟನೆ | ಮಾದಾರ‌ ಚನ್ನಯ್ಯ ಶ್ರೀ ಭಾಗೀ

    ಮಹಾನಾಯಕ ದಲಿತ ಸೇನೆ ಉದ್ಘಾಟನೆ

    ಮುಖ್ಯ ಸುದ್ದಿ

    Madara Channaiah Sri: ಮಹಾನಾಯಕ ದಲಿತ ಸೇನೆ ಉದ್ಘಾಟನೆ | ಮಾದಾರ‌ ಚನ್ನಯ್ಯ ಶ್ರೀ ಭಾಗೀ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 08 DECEMBER 2024

    ಚಿತ್ರದುರ್ಗ: ಡಾ.ಬಿ.ಆರ್.ಅಂಬೇಡ್ಕರ್(Dr. B. R. Ambedkar) 68 ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಸಿದ್ದಾಪುರದಲ್ಲಿ ಮಹಾನಾಯಕ ದಲಿತ ಸೇನೆ ಘಟಕವನ್ನು ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ(Madara Channaiah Sri) ಉದ್ಘಾಟಿಸಿದರು.

    ಕ್ಲಿಕ್ ಮಾಡಿ ಓದಿ: ವ್ಯಾಪಾರ ಹೆಚ್ಚಾಗವಂತೆ ಪೂಜೆ ಮಾಡುವುದಾಗಿ ಹೇಳಿ ಚಿನ್ನ ಕದ್ದು ಎಸ್ಕೇಪ್

    ನಂತರ ಮಾತನಾಡಿದ ಸ್ವಾಮೀಜಿ, ಸಂವಿಧಾನದ ಮೂಲಕ ಪ್ರತಿಯೊಬ್ಬರಿಗೂ ಸಮಾನತೆ ನೀಡಿರುವ ಡಾ.ಬಿ.ಆರ್.ಅಂಬೇಡ್ಕರ್ ಹಿಂದೂ ಧರ್ಮದಲ್ಲಿ ಹುಟ್ಟಿ, ಹಿಂದೂವಾಗಿ ಸಾಯಲಾರೆ ಎಂದು ಬೌದ್ದ ಧರ್ಮಕ್ಕೆ ಸೇರಿದರು.

    ಕೇವಲ ದಲಿತರೆನ್ನುವ ಕಾರಣಕ್ಕಾಗಿ ಡಾ.ಬಿ.ಆರ್.ಅಂಬೇಡ್ಕರ್ ಜೀವನದಲ್ಲಿ ಸಾಕಷ್ಟು ನೋವು, ಹಿಂಸೆ, ಅವಮಾನ, ಅಸ್ಪøಶ್ಯತೆಯನ್ನು ಅನುಭವಿಸಿದರು.

    ಯಾರು ಪಡೆಯದಷ್ಟು ಪದವಿಗಳನ್ನು ಪಡೆದಿದ್ದ ಅಂಬೇಡ್ಕರ್‍ ವರಲ್ಲಿದ್ದ ಜ್ಞಾನ, ವಿದ್ವತ್ತನ್ನು ಗುರುತಿಸಿ ಬರೋಡಾದ ರಾಜ ಶಿಕ್ಷಣಕ್ಕಾಗಿ ವಿದೇಶಕ್ಕೆ ಕಳಿಸಿ ಅಲ್ಲಿಂದ ಹಿಂದಿರುಗಿದ ನಂತರ ತಮ್ಮ ದೇಶದಲ್ಲಿಯೇ ಹುದ್ದೆ ಕೊಟ್ಟಾಗ ಅಲ್ಲಿನ ಜನರ ಕಿರುಕುಳ ತಾಳದೆ ಅಂಬೇಡ್ಕರ್ ಮುಂಬೈಗೆ ಹಿಂದಿರುಗಿದರು.

    ಕ್ಲಿಕ್ ಮಾಡಿ ಓದಿ: ಬುರುಜನಹಟ್ಟಿ ಮಲೆನಾಡ ಚೌಡೇಶ್ವರಿ ಜಾತ್ರೆ | ಕಣ್ಮನ‌ ಸೆಳೆದ ದೇವಿಯ ಅಲಂಕಾರ

    ಶೋಷಣೆ, ಅವಮಾನ ತಾಳದೆ ಹಿಂದೂ ಧರ್ಮ ತ್ಯಜಿಸಿ ಅ.14 1956 ರಂದು ಭೌದ್ದ ಧರ್ಮಕ್ಕೆ ಸೇರ್ಪಡೆಗೊಂಡರು ಎಂದು ತಿಳಿಸಿದರು.

    ಪ್ರತಿ ಮನೆಯಲ್ಲಿಯೂ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ರವರನ್ನು ಪೂಜಿಸಿ ಅವರ ಆದರ್ಶ, ತತ್ವ, ಸಿದ್ದಾಂತಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಸಂವಿಧಾನವನ್ನು ನಿಜವಾಗಿಯೂ ಗೌರವಿಸಿದಂತಾಗುತ್ತದೆ ಎಂದರು.

    ಡಾ.ಬಿ.ಆರ್.ಅಂಬೇಡ್ಕರ್‍ ಆಸೆಯಂತೆ ಶಿಕ್ಷಣ, ಸಂಘಟನೆ, ಹೋರಾಟದಿಂದ ದಲಿತರು ಜೀವನದಲ್ಲಿ ಬದಲಾವಣೆ ಕಂಡುಕೊಳ್ಳಬೇಕು. ಶಿಕ್ಷಣಕ್ಕಾಗಿ ಸರ್ಕಾರ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ, ಸದ್ಬಳಕೆ ಮಾಡಿಕೊಳ್ಳಿ ಎಂದು ತಿಳಿಸಿದರು.

    ಕ್ಲಿಕ್ ಮಾಡಿ ಓದಿ: 12. ಜಂಗಮಯ್ಯರ ಆಗಮನ

    ಮಹಾನಾಯಕ ದಲಿತ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಮಂಜುನಾಥ್ ತಾಳಿಕೆರೆ, ಪ್ರಧಾನ ಕಾರ್ಯದರ್ಶಿ ಹೊಳೆಯಪ್ಪ ಕೆ.ಸಾಕ್ಯ, ಜಿಲ್ಲಾ ಉಪಾಧ್ಯಕ್ಷ ದುರುಗೇಶ್, ಗ್ರಾಮ ಘಟಕದ ಅಧ್ಯಕ್ಷ ಲೋಕೇಶ್, ಸಿದ್ದಾಪುರ ಗ್ರಾಮದ ಮುಖಂಡರಾದ ಅಂಜಿನಪ್ಪ, ಜಗದೀಶ್, ಪ್ರಭುಲಿಂಗ ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top