ಮುಖ್ಯ ಸುದ್ದಿ
ಮಾದಾರ ಚನ್ನಯ್ಯ ಮಠವನ್ನು ರಾಜಕೀಯವಾಗಿ ಬಳಕೆ ಮಾಡಿಕೊಳ್ಳಲ್ಲ | ಕೇಂದ್ರ ಸಚಿವ ಎ.ನಾರಾಯಣಸ್ವಾಮಿ
CHITRADURGA NEWS | 25 FEBRUARY 2024
ಚಿತ್ರದುರ್ಗ: ಮಾದಾರ ಚನ್ನಯ್ಯ ಶ್ರೀಗಳನ್ನು ಅಭ್ಯರ್ಥಿ ಮಾಡುವ ಯಾವುದೇ ಚರ್ಚೆ ಪಕ್ಷದ ವಲಯದಲ್ಲಿ ನಡೆದಿಲ್ಲ. ಮಾದಾರ ಚನ್ನಯ್ಯ ಮಠ ಜಾತ್ಯಾತೀತವಾಗಿ ಪಕ್ಷಾತೀತವಾಗಿ ಸಮಾಜಕ್ಕೆ ಜಾಗೃತಿಯನ್ನು ಮೂಡಿಸುವ ಕನಸನ್ನು ಕಾಣಲಾಗುತ್ತಿದೆ. ರಾಜಕೀಯವಾಗಿ ಮಠವನ್ನು ಯಾವುದೇ ಕಾರಣಕ್ಕೂ ಸಹಾ ಬಳಕೆ ಮಾಡಿಕೊಳ್ಳುವುದಿಲ್ಲ ಎಂದು ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ ತಿಳಿಸಿದರು.
ಇದನ್ನೂ ಓದಿ: ಲೋಕಸಭೆ ಚುನಾವಣೆ | ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಗೆಲ್ಲಿಸೋಣ
ಚಿತ್ರದುರ್ಗದಲ್ಲಿ ಭಾನುವಾರ ಲೋಕಸಭೆ ಚುನಾವಣಾ ಕಚೇರಿ ಉದ್ಘಾಟಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಾದಾರ ಚನ್ನಯ್ಯ ಶ್ರೀಗಳನ್ನು ರಾಜಕೀಯಕ್ಕೆ ಬಿಜೆಪಿ ಕರೆ ತರಲಾಗುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ನಾಯಕನಹಟ್ಟಿ ತಿಪ್ಪೇಶನ ಜಾತ್ರೆಯಲ್ಲಿ ಜಕಾತಿ ವಸೂಲಿಗೆ ಬ್ರೇಕ್
ನಮ್ಮದು ಮಠ. ಮಠವನ್ನು ಯಾವುದೋ ಒಂದು ರಾಜಕೀಯ ಪಕ್ಷಕ್ಕೆ ಸಿಮೀತ ಮಾಡುವ ಉದ್ದೇಶ ಇಲ್ಲ. ನಮ್ಮ ಮಠ ಇಡೀ ಸಮಾಜಕ್ಕೆ ಮಾರ್ಗದರ್ಶನ ನೀಡುವಂತಾಗಬೇಕು. ನಮ್ಮ ಮಠ ಇಡಿ ಸಮಾಜಕ್ಕೆ ಎಲ್ಲಾ ಪಕ್ಷ ಮತ್ತು ನಾಗರೀಕರಿಗೂ ಒಂದು ಜಾಗೃತಿಯನ್ನು ಮೂಡಿಸುವಂತ ಕೇಂದ್ರವನ್ನಾಗಿ ಮಠವನ್ನು ಸ್ವೀಕಾರ ಮಾಡಲಾಗಿದೆ. ಮಠ ಜಾತ್ಯಾತೀತವಾಗಿ ಪಕ್ಷಾತೀತವಾಗಿ ಸಮಾಜಕ್ಕೆ ಜಾಗೃತಿಯನ್ನು ಮೂಡಿಸುವ ಕನಸು ಕಾಣಲಾಗುತ್ತಿದೆ. ರಾಜಕೀಯವಾಗಿ ಮಠವನ್ನು ಯಾವುದೇ ಕಾರಣಕ್ಕೂ ಸಹಾ ಬಳಕೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಮ್ಮ ಪಕ್ಷದ ಅಭ್ಯರ್ಥಿ ಕಮಲ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಅಧ್ಯಕ್ಷರು ಹೇಳಿದ್ದಾರೆ. ಆ ಕಮಲವನ್ನು ಗೆಲ್ಲಿಸಿ ಎಂದು ಕ್ಷೇತ್ರದ ಮತದಾರರಲ್ಲಿ ನಾನು ಪ್ರಾರ್ಥನೆ ಮಾಡುತ್ತೇನೆ ಎಂದರು.
ಇದನ್ನೂ ಓದಿ: ರಾಜ್ಯದಲ್ಲಿರುವುದು ಖಾಲಿ ಕೈ ಸರ್ಕಾರ | ಬಂಗಾರು ಹನುಮಂತು
ಅಧಿಕಾರಕ್ಕಾಗಿ ಬರುವ ಅಧಿಕಾರಕ್ಕಾಗಿ ಕೆಲಸವನ್ನು ಮಾಡುವ ನಾರಾಯಣಸ್ವಾಮಿ ಅಲ್ಲ. ನಾನು ಬಿಜೆಪಿ ಕಾರ್ಯಕರ್ತ. ಎಲ್ಲಿಂದಲೋ ಇಂಪೋರ್ಟ್ ಆಗಿ ಬಂದವನಲ್ಲ. ಬಿಜೆಪಿ ಕಟ್ಟಿ ಬೆಳಸುವ ಸಿದ್ದಾಂತವನ್ನು ಸ್ವೀಕಾರ ಮಾಡಿಕೊಂಡು ತಳ ಹಂತದಿಂದ ಬೆಳೆದಿರುವ ಕಾರ್ಯಕರ್ತ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.