ಮುಖ್ಯ ಸುದ್ದಿ
LOKAYUKTHA; ಬೆಳ್ಳಂ ಬೆಳಗ್ಗೆ ಚಿತ್ರದುರ್ಗದಲ್ಲಿ ಲೋಕಾಯುಕ್ತರ ದಾಳಿ

CHITRADURGA NEWS | 11 JULY 2024
ಚಿತ್ರದುರ್ಗ: ಬೆಳ್ಳಂ ಬೆಳಗ್ಗೆ ಲೋಕಾಯುಕ್ತರು ದಾಳಿ ನಡೆಸಿದ್ದು, ಚಿತ್ರದುರ್ಗ ಜಿಲ್ಲೆಯ ಇಬ್ಬರ ಮನೆ ಮೇಲೆ ದಾಳಿ ನಡೆಸಲಾಗಿದೆ.
ಸಣ್ಣ ನೀರಾವರಿ ಇಲಾಖೆಯ ನಿವೃತ್ತ ಮುಖ್ಯ ಇಂಜಿನಿಯರ್ ಎಂ.ರವೀಂದ್ರಪ್ಪ ಹಾಗೂ ಬಿಬಿಎಂಪಿ ಸೂಪರಿಂಡೆಂಟ್ ಇಂಜಿನಿಯರ್ ಆಗಿರುವ ಜಗದೀಶ್ ಅವರ ಚಿತ್ರದುರ್ಗದ ನಿವಾಸದ ಮೇಲೆ ದಾಳಿ ನಡೆಸಲಾಗಿದೆ.
ಇದನ್ನೂ ಓದಿ: ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಹಿರಿಯ ಪತ್ರಕರ್ತ ಎಂ.ಎನ್.ಅಹೋಬಲಪತಿ ನೇಮಕ
ಜಗದೀಶ್ ಇತ್ತೀಚೆಗೆ ಬಿಬಿಎಂಪಿಯಿಂದ ಭದ್ರಾ ಮೇಲ್ದಂಡೆ ಯೋಜನೆಗೆ ವರ್ಗಾವಣೆ ಆಗಿದ್ದರು.
ಎಂ.ರವೀಂದ್ರಪ್ಪ ಅವರ ಹಿರಿಯೂರು ತಾಲೂಕು ಸೂಗೂರು ಫಾರಂ ಹೌಸ್, ಬೆಂಗಳೂರಿನ ಅಪಾರ್ಟ್‍ಮೆಂಟ್, ಚಿತ್ರದುರ್ಗದ ವಿನಾಯಕ ಬಡಾವಣೆಯ ಮನೆ, ಐಮಂಗಲ ಬಳಿಯ ಬಾಟಲಿಂಗ್ ಫ್ಯಾಕ್ಟರಿ ಮೇಲೆಯೂ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎನ್.ವಾಸುದೇವರಾಂ ನೇತೃತ್ವದಲ್ಲಿ ಈ ರೇಡ್ ನಡೆದಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಇಷ್ಟು ವರ್ಷದ ಲೆಕ್ಕದ ಜತೆ ಗಣಿ ಕಂಪನಿಯರನ್ನು ಸಭೆಗೆ ಕರೆಸಿ | ಸಂಸದ ಗೋವಿಂದ ಎಂ.ಕಾರಜೋಳ ಖಡಕ್ ಸೂಚನೆ
ಇನ್ನೂ ನಿವೃತ್ತ ಇಂಜಿನಿಯರ್ ಎಂ.ರವೀಂದ್ರಪ್ಪ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹಿರಿಯೂರು ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಈ ವೇಳೆ ಐಟಿ ದಾಳಿ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.
ಜಗದೀಶ್ ಮನೆಯಲ್ಲಿ ಯಾರೂ ಇಲ್ಲ:
ಲೋಕಾಯುಕ್ತರು ದಾಳಿ ನಡೆಸಿದಾಗ ಬಿಬಿಎಂಪಿ ಇಂಜಿನಿಯರ್ ಜಗದೀಶ್ ಅವರ ಮನೆಗೆ ಬೀಗ ಹಾಕಲಾಗಿತ್ತು. ದಾಳಿಗೆ ಬಂದ ಪೊಲೀಸರು ಮನೆಯ ಬಳಿ ಕಾದು ನಿಂತಿದ್ದರು.
ಇದನ್ನೂ ಓದಿ: ಅಡಿಕೆ ಧಾರಣೆ | ಜು.10 ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್
ಲೋಕಾಯುಕ್ತ, ಚಿತ್ರದುರ್ಗ ನ್ಯೂಸ್, ಕರ್ನಾಟಕ ಲೋಕಾಯುಕ್ತ, ಲೋಕಾಯುಕ್ತ ದಾಳಿ, ಎಂ.ರವೀಂದ್ರಪ್ಪ, ಜೆಡಿಎಸ್ ಹಿರಿಯೂರು, ಸೂಗುರು ಫಾರಂ, ಎನ್.ವಾಸುದೇವರಾಂ, ಕರ್ನಾಟಕ ಅಪ್ಡೇಟ್ಸ್, ಕನ್ನಡ ನ್ಯೂಸ್,
