Connect with us

ಸಂವಿಧಾನದಿಂದ ಬದುಕು ನೆಮ್ಮದಿ | ಹರಿಹರಪುರದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ

ಮುಖ್ಯ ಸುದ್ದಿ

ಸಂವಿಧಾನದಿಂದ ಬದುಕು ನೆಮ್ಮದಿ | ಹರಿಹರಪುರದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ

CHITRADURGA NEWS | 17 MARCH 2024
ಚಿತ್ರದುರ್ಗ: ದೇಶದಲ್ಲಿ ಪ್ರತಿಯೊಬ್ಬರು ನೆಮ್ಮದಿಯಿಂದ ಬದುಕುಬೇಕಾದರೇ ಸಂವಿಧಾನದ ಚೌಕಟ್ಟು ಬೇಕು. ಸಂವಿಧಾನಕ್ಕೆ ದೇಶದ ಪ್ರತಿಯೊಬ್ಬರೂ ಗೌರವ ನೀಡಬೇಕಾದ ಅಗತ್ಯತೆ ಇದೆ ಹರಿಹರಪುರದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.

ನಗರದ ಕರುವಿನಕಟ್ಟೆ ವೃತ್ತದ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಆಯೋಜಿಸಿದ್ದ ಷಢಾದಾರ ಪ್ರತಿಷ್ಠಾಪನೆ ಹಾಗೂ ಭೂಮಿ ಪೂಜೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ‘ಪರಸ್ಪರ ಸಹಬಾಳ್ವೆ ನಡೆಸಲು ಸಂವಿಧಾನ ಸಹಕಾರಿಯಾಗಿದೆ. ಮನುಷ್ಯ ಬದುಕಿರುವವರಿಗೂ ಸಂವಿಧಾನ ಅಗತ್ಯ ಇದ್ದೇ ಇರುತ್ತದೆ’ ಎಂದರು.

ಕ್ಲಿಕ್ ಮಾಡಿ ಓದಿ: https://chitradurganews.com/police-security-at-47-check-posts/

‘ಭಕ್ತಿ ನಿಜವಾದ ಸಂಪತ್ತಾಗಬೇಕಾದರೆ ಅಂತರಂಗ ಶುದ್ದವಾಗಿರಬೇಕು. ಲೋಕದ ಹಿತ ಕಲ್ಯಾಣಕ್ಕಾಗಿ ಭಗವಂತ ಭೂಮಿಗೆ ಬಂದ. ಕಾಲ ಕಾಲಕ್ಕೆ ತಕ್ಕಂತೆ ಭಗವಂತ ಅವತಾರ ತಾಳಿ ಸಾಕಾರ ಸ್ವರೂಪನಾಗಿರುತ್ತಾನೆ. ಭಕ್ತಿ ಮಾರ್ಗ, ಯೋಗ ಮಾರ್ಗ, ಜ್ಞಾನ ಮಾರ್ಗದ ಮೂಲಕ ಭಗವಂತನನ್ನು ಕಾಣಬಹುದು. ಎಲ್ಲಾ ಜೀವಿಗಳಲ್ಲಿರುವ ಮೂಲಭೂತ ಅಂಶವೆಂದರೆ ಚೈತನ್ಯ, ಜೀವ ಜಗತ್ತನ್ನು ನಿಯಂತ್ರಿಸುವ ಮಹಾ ಚೇತನವೆಂದರೆ ಭಗವಂತ’ ಎಂದು ತಿಳಿಸಿದರು.

‘ವಿಜ್ಞಾನ ಮುಂದಿಟ್ಟುಕೊಂಡು ತತ್ವಜ್ಞಾನ ಹರಿಸಬೇಕಿದೆ. ಭಕ್ತರ ಮಾತನ್ನು ಸತ್ಯಗೊಳಿಸಲು ಭಗವಂತ ನರಸಿಂಹಾವತಾರವಾಗುತ್ತಾನೆ. ಪ್ರತಿಯೊಬ್ಬ ಮಾನವನ ಕಷ್ಟ-ಸುಖಗಳಿಗೆ ಕರ್ಮವೆ ಕಾರಣ. ಅದಕ್ಕಾಗಿ ದೇವರನ್ನು ದೂಷಿಸಬಾರದು. ಸಂವಿಧಾನದ ಮೇಲೆ ಗೌರವವಿರಬೇಕು. ದೇವರಲ್ಲಿ ಶುದ್ದ ಭಕ್ತಿಯಿಟ್ಟುಕೊಳ್ಳಬೇಕು’ ಎಂದರು.

ಕ್ಲಿಕ್ ಮಾಡಿ ಓದಿ: Chitradurganews.com/sslc-exam-from-march-25/

ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ ಮಾತನಾಡಿ, ‘ದೇವಸ್ಥಾನ ಕಟ್ಟುವುದು ಸುಲಭವಲ್ಲ ಪ್ರಯತ್ನ ಮಾಡಿದರೆ ಎಲ್ಲವೂ ಸಾಧ್ಯ. ಒಂದು ಕಾಲದಲ್ಲಿ ಚಹ ಮಾರುತ್ತಿದ್ದ ಹುಡುಗ ಈಗ ದೇಶದ ಪ್ರಧಾನಿಯಾಗಿ ದೇಶ ಕಟ್ಟುವ ಕೆಲಸ ಮಾಡುತ್ತಿಲ್ಲವೇ? ಕಠಿಣ ಪರಿಶ್ರಮ ಮನಸ್ಸಿದ್ದರೆ ಯಾವುದೂ ಅಸಾಧ್ಯವಲ್ಲ’ ಎಂದು ಹೇಳಿದರು.

ದೇವಾಲಯ ಸಂವರ್ಧನಾ ಸಮಿತಿ ರಾಜ್ಯ ಸಂಯೋಜಕ ಮನೋಹರ್ ಮಠದ್ ಮಾತನಾಡಿ, ‘ದೇವರು ಸರ್ವಾಂತರ್‍ಯಾಮಿ. ಪ್ರತಿಯೊಬ್ಬರು ಸನ್ಮಾರ್ಗ ಸತ್ಯದ ದಾರಿಯಲ್ಲಿ ನಡೆಯಬೇಕು. ಅಸತ್ಯದಿಂದ ಸತ್ಯದ ಕಡೆಗೆ, ಕತ್ತೆಲೆಯಿಂದ ಬೆಳಕಿನೆಡೆಗೆ ಹೋಗಲು ದೇವಸ್ಥಾನ ಬೇಕು. ಇಡಿ ಸಮಾಜವನ್ನು ಒಂದು ಮಾಡುವುದಕ್ಕೆ ಓಂಕಾರ್ ದೇವಸ್ಥಾನ ಜೀರ್ಣೋದ್ದಾರಕ್ಕೆ ಮುಂದಾಗಿದ್ದಾರೆ. ಎಲ್ಲರೂ ಅವರಿಗೆ ಕೈಜೋಡಿಸಿ’ ಎಂದು ವಿನಂತಿಸಿದರು.

ನಗರಸಭೆ ಸದಸ್ಯ ಎನ್‌.ಚಂದ್ರಶೇಖರ್, ದೇವಸ್ಥಾನ ಕಾರ್ಯಕಾರಿ ಸಮಿತಿ ಅಧ್ಯಕ್ಷ ಎನ್.ಓಂಕಾರ್, ಉಪಾಧ್ಯಕ್ಷ ಇ.ರವಿಚಂದ್ರಪ್ಪ, ಎ.ಮಂಜುನಾಥ, ಸಂಘಟನಾ ಕಾರ್ಯದರ್ಶಿ ಹನುಮಂತಪ್ಪ, ಜಿ. ಕಾರ್ಯದರ್ಶಿ ಕೆ.ಶಶಿಕಿರಣ, ಸಹಕಾರ್ಯದರ್ಶಿ ವೆಂಕಟೇಶಬಾಬು, ಖಜಾಂಚಿ ಮೋಹನ್ ಕುಮಾರ್ ಎಲ್. ಜಿತೇಂದ್ರ ಹುಲಿಕುಂಟೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version