ಕ್ರೈಂ ಸುದ್ದಿ
ವಿವಾಹಿತೆಯ ಪ್ರೀತಿಗೆ ಪೀಡಿಸಿ ಆಕೆಯ ಗಂಡನ ಕೊಂದವರಿಗೆ ಜೀವಾವಧಿ ಶಿಕ್ಷೆ | ಚಿತ್ರದುರ್ಗ ಜಿಲ್ಲಾ ನ್ಯಾಯಾಲಯದಿಂದ ಆದೇಶ
CHITRADURGA NEWS | 01 FEBRUARY 2024
ಚಿತ್ರದುರ್ಗ: ಆಕಸ್ಮಿಕವಾಗಿ ಹೋಗುವ ಮಿಸ್ಡ್ ಕಾಲ್ ಒಂದು ಜೀವವನ್ನೇ ಬಲಿ ಪಡೆದ ಧಾರುಣ ಘಟನೆಗೆ ಜೀವಾವಧಿ ಶಿಕ್ಷೆಯಾಗಿದೆ.
ಮದುವೆಯಾದ ಮಹಿಳೆಯ ಪ್ರೀತಿಗೆ ಪೀಡಿಸಿ, ಆಕೆಯ ಪತಿಯನ್ನೇ ಕೊಲೆ ಮಾಡಿದ್ದ 6 ಜನರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 1 ಲಕ್ಷ ರೂ. ದಂಡ ವಿಧಿಸಲಾಗಿದೆ.
ಇದನ್ನೂ ಓದಿ: ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವವರಿಗೆ ಒಒಡಿ ಸೌಲಭ್ಯ
ಚಿತ್ರದುರ್ಗದ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಬುಧವಾರ ತೀರ್ಪು ನೀಡಿದೆ.
ಒಂದು ಮಿಸ್ಡ್ ಕಾಲ್ ತಂದ ಆಪತ್ತು:
2019 ಮಾರ್ಚ್ 21 ರಂದು ಚಿತ್ರದುರ್ಗ ನಗರದಲ್ಲಿ ಕಟಿಂಗ್ ಶಾಪ್‍ನಲ್ಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿ ನವೀನ್ ಎಂಬುವವರ ಧಾರುಣ ಕೊಲೆಯಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಕೊಲೆಯಲ್ಲಿ ಭಾಗಿಯಾದ 6 ಜನ ಆರೋಪಿಗಳಿಗೆ ತಲಾ 1 ಲಕ್ಷ ರೂ. ದಂಡ ಹಾಗೂ ಜೀವಾವಧಿ ಶಿಕ್ಷೆ ವಿಧಿಸಿದೆ.
ಇದನ್ನೂ ಓದಿ: ರೈತರಿಗೆ ಖುಷಿ ಸುದ್ದಿ | ಇನ್ನುಮುಂದೆ 2 ಹೆಕ್ಟೇರ್ ವರೆಗೂ ಸ್ಪ್ರಿಂಕ್ಲರ್ ಸೆಟ್ ಸೌಲಭ್ಯ
ಬೆಂಗಳೂರಿನ ಅಕ್ಷಯ್, ಸಂತೋಷ, ಎಂ.ಎಸ್.ಕಿರಣ್, ಮದು, ವಿ.ಕೃಷ್ಣ, ಮುಬಾರಕ್ ಜೀವಾವಧಿ ಶಿಕ್ಷೆಗೊಳಗಾದವರು. ಇದರಲ್ಲಿ ಪ್ರಮುಖ ಆರೋಪಿ ಅಕ್ಷಯ್ ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೊಟ್ಟೆಪ್ಪನಹಳ್ಳಿ ವಾಸಿಯಾಗಿದ್ದು, ಬೆಂಗಳೂರಿನಲ್ಲಿ ಚಾಲಕನಾಗಿ ಕೆಲಸ ಮಾಕೊಂಡಿದ್ದವನು.
ಚಳ್ಳಕೆರೆ ಗೇಟ್‍ನಲ್ಲಿ ಕ್ಷೌರದ ಅಂಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ನವೀನ್ ಪತ್ನಿ ಸುಮಾ ಅದೊಂದು ದಿನ ಪೋನ್ ಡಯಲ್ ಮಾಡುವಾಗ ಅದು ಆಕಸ್ಮಿಕವಾಗಿ ಬೆಂಗಳೂರಿನ ಅಕ್ಷಯ್ ಎಂಬುವವರಿಗೆ ಹೋಗುತ್ತದೆ. ಇದು ರಾಂಗ್ ನಂಬರ್ ಎಂದು ತಿಳಿದು ತಕ್ಷಣ ಕಟ್ ಮಾಡುತ್ತಾರೆ. ಆದರೆ, ಮೊಬೈಲ್‍ನಲ್ಲಿ ಕೇಳಿದ್ದು ಹೆಣ್ಣಿನ ಧ್ವನಿಯಾಗಿದ್ದರಿಂದ ಮತ್ತೆ ಆ ಕಡೆಯಿಂದ ಪೋನ್ ಬರುತ್ತದೆ. ಪದೇ ಪದೇ ಪೋನ್ ಮಾಡಿ ಕಿರಿಕಿರಿ ಶುರುವಾಗುತ್ತದೆ.
ಇದನ್ನೂ ಓದಿ: ಮುರುಘಾ ಶರಣರಿಗೆ ಜಾಮೀನು | ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಒಡನಾಡಿ ಸಂಸ್ಥೆ
ಇದು ಸ್ನೇಹವಾಗಿ ಪರಿವರ್ತನೆಯಾಗುತ್ತದೆ. ಸುಮಾ ಮೂಲಕ ಆಕೆಯ ಪತಿ ನವೀನ್ ಅವರನ್ನು ಅಕ್ಷಯ್ ಪೋನಿನಲ್ಲಿ ಪರಿಚಯ ಮಾಡಿಕೊಳ್ಳುತ್ತಾನೆ.
ಇದ್ದಕ್ಕಿದ್ದಂತೆ ಒಂದು ದಿನ ಸುಮಾ ಅವರನ್ನು ಪ್ರೀತಿಸುವುದಾಗಿ ಆರೋಪಿ ಅಕ್ಷಯ್ ತಿಳಿಸುತ್ತಾನೆ. ಇದರಿಂದ ಸುಮಾ ಹಾಗೂ ಆಕೆಯ ಪತಿ ಬೇಸರಗೊಂಡು ಆತನ ನಂಬರನ್ನು ಬ್ಲಾಕ್ ಮಾಡುತ್ತಾರೆ. ಆನಂತರ ಪತಿ ನವೀನ್‍ಗೆ ಪೋನ್ ಮಾಡಿ ಮತ್ತೆ ಸ್ನೇಹ ಮುಂದುವರೆಸುತ್ತಾನೆ. ಇನ್ನು ಮುಂದೆ ಹೀಗಾಗದು ಎಂದುಕೊಂಡು ಬ್ಲಾಕ್ ಲಿಸ್ಟ್‍ನಲ್ಲಿದ್ದ ಅಕ್ಷಯ್ ನಂಬರನ್ನು ತೆರವು ಮಾಡುತ್ತಾರೆ.
ಮತ್ತೆ ಅದೇ ಕಿರಿಕಿರಿ ಮುಂದುವರೆಸಿ ಪ್ರೀತಿಗೆ ಪೀಡಿಸುತ್ತಾನೆ. ತನ್ನ ಪ್ರೀತಿಗೆ ಆಕೆಯ ಪತಿ ನವೀನ್ ಅಡ್ಡಿಯಾಗುತ್ತಾನೆ ಅಂದುಕೊಂಡು ಕೊನೆಗೆ ಆತನ ಕೊಲೆ ಮಾಡಲು ಸಂಚು ರೂಪಿಸುತ್ತಾನೆ ಅಕ್ಷಯ್.
2019 ಮಾರ್ಚ್ 21ರಂದು ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಬಂದು, ನವೀನ್ ಅವರನ್ನು ಕರೆಯಿಸಿಕೊಂಡು ತನ್ನ ಸ್ನೇಹಿತರಿಗೆ ಮುಖ್ಯವಾದ ಕೆಲಸ ಆಗಬೇಕಿದೆ ಎಂದು ಕಾರು ಹತ್ತಿಸಿಕೊಂಡು ಹಳೇ ಬೆಂಗಳೂರು ರಸ್ತೆಯತ್ತ ಕರೆದೊಯ್ದು ರಸ್ತೆಯಲ್ಲಿ ಏಕಾಏಕಿ ಹಲ್ಲೆ ನಡೆಸುತ್ತಾರೆ, ಮಾರಕಾಸ್ತ್ರಗಳಿಂದ ದಾಳಿ ನಡೆಸುತ್ತಾರೆ.
ಇದನ್ನೂ ಓದಿ: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ 18 ಜೋಡಿಗಳನ್ನು ಒಂದಾಗಿಸಿದ ಲೋಕ ಅದಾಲತ್
ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕಾರಿನಿಂದ ಗುದ್ದಿಸುತ್ತಾರೆ. ಹೀಗೆ ನವೀನ್ ಅಂದು ತಡರಾತ್ರಿ ಧಾರುಣವಾಗಿ ಕೊಲೆಯಾಗುತ್ತಾನೆ.
ಈ ಬಗ್ಗೆ ನಗರದ ಬಡಾವಣೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸಲಾಗಿತ್ತು.
ಇದನ್ನೂ ಓದಿ: ಡಿಸಿ ಕಚೇರಿಯಲ್ಲಿ ಅಹವಾಲು ಸ್ವೀಕರಿಸಲು ಶಾಶ್ವತ ಕೌಂಟರ್
ಪ್ರಕರಣದ ವಿಚಾರಣ ನಡೆದು, ಆರೋಪ ಸಾಬೀತಾದ್ದರಿಂದ ಆರು ಮಂದಿ ಆಪಾಧಿತರಿಗೆ ಜೀವಾವಧಿ ಶಿಕ್ಷೆ, ತಲಾ 1 ಲಕ್ಷ ದಂಡ ವಿಧಿಸಿದೆ. ದಂಡದ ಹಣವನ್ನು ನವೀನ್ ಪತ್ನಿ ಸುಮಾ ಮತ್ತು ಆತನ ತಾಯಿ ಛಾಯಾ ಅವರಿಗೆ ಸಮನಾಗಿ ನೀಡುವಂತೆ ಆದೇಶಿಸಿದ್ದಾರೆ. ಜಿಲ್ಲಾ ಕಾನೂನು ಪ್ರಾಧಿಕಾರದಿಂದ ನೀಡುವ ಅಭಾದಿತರ ಪರಿಹಾರವನ್ನು ಮೃತನ ಪತ್ನಿ ಮತ್ತು ತಾಯಿಗೆ ಸಮಾನವಾಗಿ ವಿತರಿಸಲು ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಂಕರಪ್ಪ ನಿಂಬಣ್ಣ ಕಲ್ಕನಿ ತೀರ್ಪಿನಲ್ಲಿ ತಿಳಿಸಿದ್ದಾರೆ.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ಅಪರ ಸರ್ಕಾರಿ ಅಭಿಯೋಜಕ ಎನ್.ಎಸ್.ಮಲ್ಲಯ್ಯ ವಾದ ಮಂಡಿಸಿದ್ದರು.