ಮುಖ್ಯ ಸುದ್ದಿ
Chitradurga-Davanagere: ಚಿತ್ರದುರ್ಗ-ದಾವಣಗೆರೆ ಎರಡನೇ ರಾಜಧಾನಿಯಾಗಲಿ | ಬಸವಪ್ರಭು ಸ್ವಾಮೀಜಿ
CHITRADURGA NEWS | 05 NOVEMBER 2024
ಚಿತ್ರದುರ್ಗ: ಕರ್ನಾಟಕದ ಎರಡನೇ ರಾಜಧಾನಿಯಾಗಿ ಚಿತ್ರದುರ್ಗ(Chitradurga-
ಕ್ಲಿಕ್ ಮಾಡಿ ಓದಿ: ಸರ್ಕಾರಿ ನೌಕರರ ಚುನಾವಣೆ | ಗೀತಾ ಭರಮಸಾಗರ ನಾಮಪತ್ರ ಸಲ್ಲಿಕೆ
ಶ್ರೀಮುರುಘರಾಜೇಂದ್ರ ಮಠದಲ್ಲಿಂದು ನಡೆದ 34ನೇ ವರ್ಷದ ಹನ್ನೊಂದನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ನೇತೃತ್ವ ವಹಿಸಿ, ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ತಾಯಿ ಭುವನೇಶ್ವರಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಶ್ರೀಗಳು,
ಇಂದು ಬೆಂಗಳೂರು ಎಲ್ಲ ಕ್ಷೇತ್ರದಲ್ಲಿ ಮುಂದೆ ಬಂದಿದೆ. ಆದರೆ ಕನ್ನಡಿಗರಿಗೆ ಅಲ್ಲಿ ಉದ್ಯೋಗ ಸಿಗುತ್ತಿಲ್ಲ. ಕನ್ನಡಿಗರಿಗೆ ಉದ್ಯೋಗ ಕೊಡಿ ಎಂದು ಒತ್ತಾಯಿಸುವ ಸ್ಥಿತಿ ಬಂದಿದೆ ಎಂದರು.
ಕರ್ನಾಟಕ ಮೊದಲು ಮೈಸೂರು ರಾಜ್ಯವಾಗಿತ್ತು, ನಂತರದಲ್ಲಿ ಕರ್ನಾಟಕ ಎಂದು ನಾಮಕರಣವಾಯಿತು, ಹೆಸರಾಯಿತು ಕರ್ನಾಟಕ ಆದರೆ ಉಸಿರಾಗಲಿಲ್ಲ. ಬದುಕಿಗೆ ಉಸಿರು ಎಷ್ಟು ಮುಖ್ಯವೋ ಹಾಗೆಯೇ ಮನುಷ್ಯನ ಬದುಕಿಗೆ ಕನ್ನಡ ಉಸಿರಾಗಬೇಕು ಎಂದು ಹೇಳಿದರು.
ಕ್ಲಿಕ್ ಮಾಡಿ ಓದಿ: ವಕ್ಫ್ ಕಾಯ್ದೆ ದುರ್ಬಳಕೆ | ಲ್ಯಾಂಡ್ ಜಿಹಾದ್ ಷಡ್ಯಂತ್ರ | ಬಿಜೆಪಿ ಪ್ರತಿಭಟನೆ
ರಾಜ್ಯವನ್ನಾಳುವ ನಾಯಕರು ಕನ್ನಡವನ್ನು ಉಳಿಸುವ ಪ್ರಯತ್ನ ಮಾಡಬೇಕು. ನಮಗೆ ದೂರದೃಷ್ಟಿ ಮುಖ್ಯ. ನಮ್ಮ ಭಾಷೆಯನ್ನು ಪ್ರೀತಿಸಬೇಕು. ಕನ್ನಡ ಉಸಿರಾಗಬೇಕು. ಕನ್ನಡದ ಕವಿಗಳು, ವಚನಕಾರರ ಸಾಹಿತ್ಯವನ್ನು ಓದಿದರೆ ಜ್ಞಾನೋದಯವಾಗುತ್ತದೆ. ಜ್ಞಾನವನ್ನು ಸಂಪಾದಿಸಬೇಕು.
ವಿಶ್ವಕ್ಕೆ ದೊಡ್ಡ ಕೊಡುಗೆ ವಚನ ಸಾಹಿತ್ಯ. ನಾಣ್ಯದ ಎರಡು ಮುಖಗಳಂತೆ ದಂಪತಿಗಳು ಒಂದಾಗಿರಬೇಕು. ಮನಸ್ಸುಗಳು ಒಂದಾಗಬೇಕು. ಅಹಂಕಾರದಿ0ದ ಎಷ್ಟೋ ದಾಂಪತ್ಯ ವಿಚ್ಛೇದನವಾಗುತ್ತಿವೆ. ಪ್ರತಿಷ್ಠೆಗಳನ್ನು ಬದಿಗಿಡಬೇಕು. ಪರಸ್ಪರ ಪ್ರೀತಿ ವಾತ್ಸಲ್ಯದಿಂದ ಜೀವನ ಸಾಗಿಸಬೇಕೆಂದರು.
ಡಾ.ಅಶ್ವಿನಿಕುಮಾರ್ ಪಸಾರದ ಮಾತನಾಡಿ, ಸಮಾಜದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ, ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಚಿಕ್ಕ ಸಮಸ್ಯೆ ಇದ್ದರೂ ಉದಾಸೀನ ಮಾಡಬಾರದು, ಹಾಗೆಯೇ ಮುಂದೆ ಅದು ದೊಡ್ಡ ಸಮಸ್ಯೆಯಾಗಿಯೇ ಉಳಿಯಬಹುದು ಎಂದರು.
ಕ್ಲಿಕ್ ಮಾಡಿ ಓದಿ: ವಿಧಾನಸಭೆ ಉಪಚುನಾವಣೆ | NDA ಅಭ್ಯರ್ಥಿ ನಿಖಿಲ್ ಪರ ಶಾಸಕ ಎಂ.ಚಂದ್ರಪ್ಪ ಪ್ರಚಾರ
ಡಾ.ಮಲ್ಲಪ್ಪ, ಡಿ.ಸಿ. ಪಾಣಿ ಮಾತನಾಡಿದರು.
ಈ ವೇಳೆ 2024ನೇ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಬಸವನಾಗಿದೇವ ಸ್ವಾಮೀಜಿ ಸೇರಿದಂತೆ ಇತರರು ಇದ್ದರು.
ಗಂಜಿಗಟ್ಟಿ ಕೃಷ್ಣಮೂರ್ತಿ ಜಾನಪದ ಗೀತೆ ಹಾಡಿದರು. ಜಮುರಾ ಕಲಾವಿದರು ವಚನ ಪ್ರಾರ್ಥನೆ ಹಾಡಿದರು. ಜ್ಞಾನಮೂರ್ತಿ ಸ್ವಾಗತಿಸಿದರು. ನವೀನ್ ಮಸ್ಕಲ್ ನಿರೂಪಿಸಿದರು.