ಮುಖ್ಯ ಸುದ್ದಿ
ಕೋಟೆ ಬಂಡೆ ಮೇಲೆ ಚಿರತೆ ಪ್ರತ್ಯಕ್ಷ | ಪ್ರವಾಸಿಗರಲ್ಲಿ ಆತಂಕ

Published on
CHITRADURGA NEWS | 03 APRIL 2025
ಚಿತ್ರದುರ್ಗ: ನಗರದ ಪ್ರವಾಸಿತಾಣವಾದ ಕೋಟೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಪ್ರವಾಸಿಗರಲ್ಲಿ ಆತಂಕ ಮೂಡಿಸಿದೆ.
Also Read: ವಿದ್ಯುತ್ ಶಾಕ್ | ತಾಯಿ, ಮಗು ಸಾವು
ಇಂದು ಸಂಜೆ 5.45ಕ್ಕೆ ಕೋಟೆ ಮಾರ್ಗದರ್ಶಿ ಮೊಹಿದ್ದೀನ್ ಖಾನ್ ಬಸವರಾಜ್, ಪರಶುರಾಮ್ ಮತ್ತು ಪ್ರವಾಸಿಗರಿಗೆ ಚಿರತೆ ಕಂಡಿದೆ.
ಸಂಜೆ 5.50 ಕ್ಕೆ ಗಂಗಾವತಿಯ ಪ್ರವಾಸಿಗರು ಟಿಕೆಟ್ ಪಡೆದು ಸುಮಾರು 50 ಜನರ ತಂಡ ಕೋಟೆ ನೋಡಲು ಮೇಲೆ ಹತ್ತುತ್ತಿರುವಾಗ, ಕೋಟೆಯ 6 ನೇ ಸುತ್ತಿನ ಬಾಗಿಲು ಮೇಲೆ ಹೊಸದಾಗಿ ನಿರ್ಮಾಣ ವಾಗಿರುವ ಟಾಯಿಲೆಟ್ ಮೇಲಿನ ಹೆಬ್ಬoಡೆ ಮೇಲೆ ಕೂತು ಜನರನ್ನು ದಿಟ್ಟಿಸುತ್ತಿತ್ತು.
Also Read: ರಾಷ್ಟ್ರೀಯ ಹೆದ್ದಾರಿ ಯೋಜನೆ | ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಿ | ಸಂಸದ ಗೋವಿಂದ ಕಾರಜೋಳ
ಅದನ್ನು ಕಂಡ ಪ್ರವಾಸಿಗರು ಮೇಲಿಂದ ಓಡಿ ಬಂದು ಚಿರತೆ ತೋರಿಸಿದರು. ಸುಮಾರು 1 ರಿಂದ 2 ಗಂಟೆಗಳ ಕಾಲ ಅಲ್ಲೇ ಕೂತು ಓಡಿ ಹೋಯಿತು ಎಂದು ಹಿರಿಯ ಪ್ರವಾಸಿ ಮಾರ್ಗದರ್ಶಿ ಬಿ.ಮೊಹಿದ್ದೀನ್ ಖಾನ್ ತಿಳಿಸಿದ್ದಾರೆ.
Continue Reading
You may also like...
Related Topics:Chitradurga, Chitradurga news, Chitradurga Updates, Fort, Kannada Latest News, Kannada News, leopard, tourists, ಕನ್ನಡ ನ್ಯೂಸ್, ಕನ್ನಡ ಲೇಟೆಸ್ಟ್ ನ್ಯೂಸ್, ಕನ್ನಡ ಸುದ್ದಿ, ಕೋಟೆ, ಚಿತ್ರದುರ್ಗ, ಚಿತ್ರದುರ್ಗ ನ್ಯೂಸ್, ಚಿರತೆ, ಪ್ರವಾಸಿಗರು

Click to comment