ಮುಖ್ಯ ಸುದ್ದಿ
CHILDREN’S; ಕೆ.ಡಿ.ಪಿ ಪೌಂಡೆಶನ್ ಸಂಸ್ಥೆ | ಮಕ್ಕಳಿಗೆ ಉಚಿತ ಪಠ್ಯ ಸಾಮಗ್ರಿ ವಿತರಣೆ
CHITRADURGA NEWS | 09 JULY 2024
ಚಿತ್ರದುರ್ಗ: ಭೀಮಸಮುದ್ರದ ಸರ್ಕಾರಿ ಶಾಲೆಯಲ್ಲಿ ಕೆ.ಡಿ.ಪಿ ಪೌಂಡೆಶನ್ ಸಂಸ್ಥೆ ವತಿಯಿಂದ ಮಕ್ಕಳಿಗೆ ಪಠ್ಯ ಸಾಮಗ್ರಿಗಳನ್ನು ವಿತರಿಸಲಾಯಿತು.
ಇದನ್ನೂ ಓದಿ: FACILITY; ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಗೊಲ್ಲಹಳ್ಳಿ ಗ್ರಾಮಸ್ಥರ ಮನವಿ
ಈ ವೇಳೆ ಕೆ.ಡಿ.ಪಿ ಪೌಂಡೆಶನ್ ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ಟಿ.ಎಸ್. ತಿಪ್ಪೇಶ್ ಮಾತನಾಡಿ, ಚಿತ್ರದುರ್ಗ ಜಿಲ್ಲೆ ಯಲ್ಲಿ ಸುಮಾರು 45 ಸರ್ಕಾರಿ ಪ್ರೌಢ ಹಾಗೂ ಪ್ರಾಥಮಿಕ ಶಾಲೆಗಳಿಗೆ ಸುಮಾರು 5000 ವಿದ್ಯಾರ್ಥಿಗಳಿಗೆ ಪಠ್ಯ ಸಾಮಗ್ರಿಗಳನ್ನು ವಿತರಣೆ ಮಾಡಿದ್ದೆವೆ. ಮುಂದಿನ ವರ್ಷಕ್ಕೆ ಮಕ್ಕಳಿಗೆ ಬೇಕಾದ ಬ್ಯಾಗ್ ಗಳನ್ನು ವಿತರಣೆ ಮಾಡುವ ಗುರಿ ಹೊಂದಿದೆವೆ ಎಂದರು.
ಭೀಮಸಮುದ್ರ ಕ್ಲಸ್ಟರ್ ಸಿ.ಆರ್.ಪಿ ಪರುಶುರಾಮ್ ಮಾತನಾಡಿ, ಪೋಷಕರುಗಳು ಖಾಸಗಿ ಶಾಲೆಗಳನ್ನು ಬಿಟ್ಟು ಸರ್ಕಾರಿ ಶಾಲೇಗಳತ್ತ ಮುಖಮಾಡಲಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಯಾವುದೇ ಕೋರತೆ ಇಲ್ಲ ಆದರೆ ಪೋಷಕರು ಇಂಗ್ಲಿಷ್ ವ್ಯಾಮೋಹದ ಹಿಂದೆ ಬಿದ್ದಿದ್ದಾರೆ ಎಂದರು.
ಕೆ.ಡಿ.ಪಿ ಪೌಂಡೆಶನ್ ಸಂಸ್ಥೆಯಿಂದ ಭೀಮಸಮುದ್ರ ಸುತ್ತಮುತ್ತಲಿನ ಶಾಲೆಗಳಾದ ವಡ್ಡರಪಾಳ್ಯ, ನೆಲ್ಲಿಕಟ್ಟೆ, ಮಳಲಿ, ಬೋಮ್ಮೆನಹಳ್ಳಿ, ಮೇಗಳಹಳ್ಳಿ ಶಾಲೆಗಳಿಗೆ ಸುಮಾರು 300 ಮಕ್ಕಳಿಗೆ ಪಠ್ಯ ಸಾಮಗ್ರಿಗಳನ್ನು ವಿತರಣೆ ಮಾಡಿದ್ದಾರೆ.
ಇದನ್ನೂ ಓದಿ: PRIYANKA KHARGE ; ಜುಲೈ 10 ರಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರವಾಸ
ಈ ಪೌಂಡೆಶನ್ ಪರವಾಗಿ ಕರ್ನಾಟಕ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಿಗೆ ಇನ್ನು ಹೆಚ್ಚಿನದಾಗಿ ಅನುಕೂಲವಾಗಲಿ. ನಮ್ಮ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕೂಡ ಇದೆ ಆದ್ದರಿಂದ ಪೋಷಕರು ಮುಂದಿನ ದಿನಗಳಲ್ಲಿ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕಾಗಿ ವಿನಂತಿಸಿಕೋಳ್ಳುತ್ತೇನೆ.
ಈ ಸಂದರ್ಭದಲ್ಲಿ ಮಖ್ಯಶಿಕ್ಷಕಿ ಸುಮಾ ರೆಡ್ಡಿ,ಶಾಲಾ ಶಿಕ್ಷಕರಾದ ಟಿ.ಮಂಜಮ್ಮ, ಎಸ್. ಸುಂದರಮ್ಮ, ರಾಜುನಾಯ್ಕ್ ಸೇರಿದಂತೆ ಪೋಷಕರು, ಮಕ್ಕಳು ಇದ್ದರು.