ಮುಖ್ಯ ಸುದ್ದಿ
Election: ಮೆದೇಹಳ್ಳಿ ಗ್ರಾ.ಪಂ ಚುನಾವಣೆ | ಅಧ್ಯಕ್ಷರಾಗಿ ಕಾವ್ಯ ವಿಜಯಕುಮಾರ್ ಆಯ್ಕೆ
CHITRADURGA NEWS | 11 DECEMBER 2024
ಚಿತ್ರದುರ್ಗ: ಚಿತ್ರದುರ್ಗ ನಗರಕ್ಕೆ ಹೊಂದಿಕೊಂಡಿರುವ, ಚಿತ್ರದುರ್ಗದ ಭಾಗವೇ ಆಗಿರುವ ಮೆದೇಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಕಾವ್ಯ ವಿಜಯಕುಮಾರ್ ಆಯ್ಕೆಯಾಗಿದ್ದಾರೆ.
ಮೆದೇಹಳ್ಳಿಯ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮುಂದಿನ 13 ತಿಂಗಳ ಅವಧಿಗೆ ಇಂದು ನಡೆದ ಅಧ್ಯಕ್ಷ ಸ್ಥಾನದ (Election) ಚುನಾವಣೆಗೆ ಕಾವ್ಯ ವಿಜಯಕುಮಾರ್ ಹಾಗೂ ನಿರಂಜನಮೂರ್ತಿ ನಾಮಪತ್ರ ಸಲ್ಲಿಸಿದ್ದರು.
ಇದನ್ನೂ ಓದಿ: ನಿರುದ್ಯೋಗಿಗಳಿಗೆ ಶುಭ ಸುದ್ದಿ | ಕಂಪ್ಯೂಟರ್ ರಿಪೇರಿ, ಕುರಿ ಸಾಕಾಣಿಕೆ, ಮಶ್ರೂಮ್ ಕೃಷಿ, ಇನ್ನಿತರೆ ತರಬೇತಿಗೆ ಅರ್ಜಿ ಆಹ್ವಾನ
ಆನಂತರ ನಿರಂಜನಮೂರ್ತಿ ನಾಮಪತ್ರ ವಾಪಸ್ ಪಡೆದ ಹಿನ್ನೆಲೆಯಲ್ಲಿ ಅಂತಿಮವಾಗಿ ಕಾವ್ಯ ವಿಜಯಕುಮಾರ್ ಹೆಸರನ್ನು ಚುನಾವಣಾಕಾರಿ, ತಹಶೀಲ್ದಾರ್ ಡಾ.ನಾಗವೇಣಿ ಘೋಷಣೆ ಮಾಡಿದರು.
ಮೆದೇಹಳ್ಳಿ ಗ್ರಾಮ ಪಂಚಾಯಿತಿಯ ಒಟ್ಟು 21 ಸದಸ್ಯ ಬಲದಲ್ಲಿ 15 ಸದಸ್ಯರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿಜಯಕುಮಾರ್ ಅವರ ಪತ್ನಿ ಕಾವ್ಯ ಅವರಿಗೆ ಬೆಂಬಲ ಸೂಚಿಸಿದರು.
ಇದನ್ನೂ ಓದಿ: ಡಿ.25ಕ್ಕೆ ಹೊಳಲ್ಕೆರೆಗೆ ವೀರೇಂದ್ರ ಹೆಗ್ಗಡೆ ಭೇಟಿ | ನೂತನ ಕಟ್ಟಡ ವಿಕಾಸ ಸೌಧ ಉದ್ಘಾಟನೆ
ಉಪಾಧ್ಯಕ್ಷೆ ಲೀಲಾವತಿ, ಸದಸ್ಯರಾದ ದುಗ್ಗಪ್ಪ, ಮಮತ, ಶೃತಿ ವಿಜಯಕುಮಾರ್, ಭಾಗ್ಯಮ್ಮ, ನಿಂಗಪ್ಪ, ಧನ್ಯಕುಮಾರ್, ಪ್ರಿಯದರ್ಶಿನಿ, ಸುಶೀಲಮ್ಮ, ಕಮಲಮ್ಮ ಶ್ರೀನಿವಾಸ್, ಲಕ್ಷ್ಮಿದೇವಿ, ಗೌರಮ್ಮ, ಶ್ರೀನಿವಾಸ್ ಉಪಸ್ಥಿತರಿದ್ದು ಕಾವ್ಯ ವಿಜಯಕುಮಾರ್ ಅಧ್ಯಕ್ಷ ಸ್ಥಾನಕ್ಕೆ ಬೆಂಬಲಿಸಿದರು.
ಅಧ್ಯಕ್ಷರಾಗಿ ಆಯ್ಕೆಯಾದ ಕಾವ್ಯ ವಿಜಯಕುಮಾರ್ ರವರನ್ನು ಚುನಾವಣಾಕಾರಿ ಡಾ.ನಾಗವೇಣಿ, ಪಿಡಿಓ ಆರ್.ಪಾತಣ್ಣ ಸೇರಿದಂತೆ ಸದಸ್ಯರು ಹಾಗೂ ಮುಖಂಡರು ಅಭಿನಂದಿಸಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ ರೇಟ್
ಈ ಸಂದರ್ಭದಲ್ಲಿ ಜಿಪಂ ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್, ಮೆದೇಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಆರ್.ವಿಜಯಕುಮಾರ್, ವೀರಶೈವ ಲಿಂಗಾಯತ ಯುವ ವೇದಿಕೆ ಅಧ್ಯಕ್ಷ ಎಚ್.ಎಂ.ಮಂಜುನಾಥ್, ಮುಖಂಡರಾದ ದ್ಯಾಮಣ್ಣ, ರಮೇಶ್, ಮಾರೇಶ್, ತಿಪ್ಪೇಸ್ವಾಮಿ, ನಾಗರಾಜ್, ಶಾಂತಕುಮಾರ್, ಆರ್.ನರಸಿಂಹರಾಜು, ಮಾಜಿ ಸದಸ್ಯ ಮಂಜುನಾಥ್, ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಸದಸ್ಯ ವಿ.ದಿನೇಶ್, ಅನೀಸ್, ಸೈಯದ್ ಖುದ್ದೂಸ್, ಪ್ರಕಾಶ್ ರಾಮಾನಾಯ್ಕ ಇತರರಿದ್ದರು.