ಮುಖ್ಯ ಸುದ್ದಿ
ಉಪಹಾರದಲ್ಲಿ ಜಿರಳೆ, ತಡರಾತ್ರಿ ಕವಾಡಿಗರಹಟ್ಟಿ ನಿವಾಸಿಗಳ ಪ್ರತಿಭಟನೆ; ಚಿತ್ರದುರ್ಗ ಜಿಲ್ಲಾಡಳಿತದ ವಿರುದ್ಧ ಆಕ್ರೋಶ
Published on
ಚಿತ್ರದುರ್ಗ: ಕವಾಡಿಗರಹಟ್ಟಿಗೆ ಜಿಲ್ಲಾಡಳಿತದಿಂದ ಮಂಗಳವಾರ ರಾತ್ರಿ ಸರಬರಾಜು ಮಾಡಿದ ಉಪಹಾರದಲ್ಲಿ ಜಿರಳೆ ಕಾಣಿಸಿಕೊಂಡಿದೆ ಆರೋಪಿಸಿ ಎಂದು ಕವಾಡಿಗರಹಟ್ಟಿ ನಿವಾಸಿಗಳು ರಾತ್ರಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಕಲುಷಿತ ನೀರಿನಿಂದ ವಾಂತಿ-ಭೇದಿ ಕಾಣಿಸಿಕೊಂಡು 6 ಜನ ಮೃತಪಟ್ಟು, 250 ಕ್ಕೂ ಹೆಚ್ಚು ಮಂದಿ ತೀವ್ರ ಅಸ್ವಸ್ಥರಾಗಿದ್ದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಿವಾಸಿಗಳಿಗೆ ಊಟ, ಉಪಹಾರ ಪೂರೈಸುತ್ತಿತ್ತು.
ಮಂಗಳವಾರ ರಾತ್ರಿ ಸರಬರಾಜು ಮಾಡಿದ್ದ ರೈಸ್ ಬಾತ್ ನಲ್ಲಿ ಜಿರಳೆ ಕಾಣಿಸಿಕೊಂಡಿದೆ. ಈ ವಿಷಯ ವಾಟ್ಸಪ್ ಮೂಲಕ ಇಲ್ಲಿನ ಕವಾಡಿಗರಹಟ್ಟಿ ನಿವಾಸಿಗಳಿಗೆ ತಿಳಿದು ತಡರಾತ್ರಿವರೆಗೆ ಪ್ರತಿಭಟನೆ ನಡೆದಿದೆ.
ಜಿಲ್ಲಾಡಳಿತ ನಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಿದೆ ಎಂದು ಸ್ಥಳೀಯರು, ಆಹಾರ ಸರಬರಾಜು ಮಾಡಿದ ಹೋಟೆಲ್ ಹಾಗೂ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಸ್ಥಳಕ್ಕೆ ಆಗಮಿಸಿದ ಪೆÇಲೀಸರು ಜನರನ್ನು ಸಮಾಧಾನಪಡಿಸಿದ್ದಾರೆ.
Continue Reading
You may also like...
Related Topics:cholera, Kavadigarhati, polluted water, protest, ಕಲುಷಿತ ನೀರು, ಕವಾಡಿಗರಹಟ್ಟಿ, ಕಾಲರಾ, ಪ್ರತಿಭಟನೆ
Click to comment