Connect with us

    Hindi; ಹಿಂದಿ‌ ದಿವಸ್‌ ಆಚರಣೆಗೆ ಕರುನಾಡ ವಿಜಯಸೇನೆ ವಿರೋಧ 

    ಹಿಂದಿ‌ ದಿವಸ್‌ ಆಚರಣೆಗೆ ಕರುನಾಡ ವಿಜಯಸೇನೆ ವಿರೋಧ 

    ಮುಖ್ಯ ಸುದ್ದಿ

    Hindi; ಹಿಂದಿ‌ ದಿವಸ್‌ ಆಚರಣೆಗೆ ಕರುನಾಡ ವಿಜಯಸೇನೆ ವಿರೋಧ 

    CHITRADURGA NEWS | 14 SEPTEMBER 2024

    ಚಿತ್ರದುರ್ಗ: ಅಂತರಾಷ್ಟ್ರೀಯ ಹಿಂದಿ(Hindi)  ದಿವಸ್ ಆಚರಿಸುತ್ತಿರುವ ಕೇಂದ್ರ ಸರ್ಕಾರ(Central Govt)ದ ವಿರುದ್ದ ಶನಿವಾರ ನಗರದ ಪ್ರಧಾನ ಅಂಚೆ ಕಚೇರಿ ಮುಂಭಾಗ ಕರುನಾಡ ವಿಜಯಸೇನೆಯಿಂದ ಹಿಂದಿ ಪೋಸ್ಟರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

    ಕ್ಲಿಕ್ ಮಾಡಿ ಓದಿ: POCSO case: ಪೋಕ್ಸೊ ಪ್ರಕರಣ | ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರ ಅರ್ಜಿ ವಜಾ

    ಕನ್ನಡಕ್ಕೆ 2700 ವರ್ಷಗಳ ಸುದೀರ್ಘ ಇತಿಹಾಸವಿದ್ದರೂ ಕೇಂದ್ರ ಸರ್ಕಾರ ಹಿಂದಿ ಭಾಷೆಯನ್ನು ಹೇರಿಕೆ ಮಾಡುತ್ತಿದೆ. ಪ್ರಾದೇಶಿಕ ಭಾಷೆಗಳ ಇತಿಹಾಸದಲ್ಲಿಯೇ ಅತಿ ಹಳೆಯದಾದ ಕನ್ನಡ ಭಾಷೆಗೆ ಅಂತರಾಷ್ಟ್ರೀಯ ಭಾಷೆಯ ಸ್ಥಾನಮಾನ ನೀಡಬೇಕು.

    ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಎಲ್ಲಾ ಪಕ್ಷಗಳು ಕನ್ನಡವನ್ನು ಕಡೆಗಣಿಸುತ್ತ ಬರುತ್ತಿರುವುದನ್ನು ವಿರೋಧಿಸಿ ಅನೇಕ ವರ್ಷಗಳಿಂದಲೂ ಕರುನಾಡ ವಿಜಯಸೇನೆ ಹೋರಾಟ ಮಾಡಿಕೊಂಡು ಬರುತ್ತಿದೆ.

    ಪ್ರತಿ ವರ್ಷ ಸೆ.14 ರಂದು ಹಿಂದಿ ದಿವಸ್ ಆಚರಿಸುತ್ತಿರುವ ಕೇಂದ್ರ ಸರ್ಕಾರ ಕನ್ನಡ ಭಾಷಾ ದಿನವೆಂದು ಆಚರಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

    ಕ್ಲಿಕ್ ಮಾಡಿ ಓದಿ: POCSO: ಅಪ್ರಾಪ್ತ ಬಾಲಕಿ ಅಪಹರಣ ಯತ್ನ | ಇಬ್ಬರ ಬಂಧನ

    ಪ್ರತಿಭಟನೆಯಲ್ಲಿ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣಗೌರಣ್ಣ, ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ಉಪಾಧ್ಯಕ್ಷೆ ರತ್ನಮ್ಮ, ಕಾರ್ಯದರ್ಶಿ ಸಿ.ಜಗದೀಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top