Connect with us

    Award: ಕನ್ನಡ ರಾಜ್ಯೋತ್ಸವ | 28 ಜನರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

    ಮುಖ್ಯ ಸುದ್ದಿ

    Award: ಕನ್ನಡ ರಾಜ್ಯೋತ್ಸವ | 28 ಜನರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

    CHITRADURGA NEWS | 31 OCTOBER 2024

    ಚಿತ್ರದುರ್ಗ: ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ (Award) ಕಲೆ, ಸಾಹಿತ್ಯ, ಸಂಸ್ಕøತಿ, ಜಾನಪದ, ಸಮಾಜ ಸೇವೆ, ಪತ್ರಿಕೋದ್ಯಮ, ಕ್ರೀಡೆ, ಸಂಗೀತ ಸೇರಿದಂತೆ ಹಲವು ಕ್ಷೇತ್ರಗಳಿಂದ 28 ಜನರನ್ನು ಆಯ್ಕೆ ಮಾಡಲಾಗಿದೆ.

    ಇದನ್ನೂ ಓದಿ: ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣಕ್ಕೆ ಮೂಲಭೂತ ಸೌಕರ್ಯ ಒದಗಿಸಿ, ಶುಲ್ಕ ನಿಗದಿಪಡಿಸಿ | ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಸೂಚನೆ 

    ಜಿಲ್ಲಾಧಿಕಾರಿ ಕಚೇರಿಯಿಂದ ಅಧಿಕೃತ ಪಟ್ಟಿ ಬಿಡುಗಡೆಯಾಗಿದ್ದು, ನವೆಂಬರ್ 1 ರಂದು ನಡೆಯುವ ಕನ್ನಡ ರಾಜ್ಯೋತ್ಸವದಲ್ಲಿ ಪ್ರಶಸ್ತಿಗೆ ಆಯ್ಕೆಯಾದವರನ್ನು ಸನ್ಮಾನಿಸಲಾಗುತ್ತದೆ.

    ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ:

    ಜಾನಪದ ಕ್ಷೇತ್ರ: ಹಿರಿಯೂರು ತಾಲೂಕು ಕೆ.ಎನ್.ಕೊಟ್ಟಿಗೆ ಗುರುಮೂರ್ತಿ ಹಾಗೂ ಚಿತ್ರದುರ್ಗ ತಾಲೂಕು ಹುಲ್ಲೇಹಾಳ್ ಗ್ರಾಮದ ಡಿ.ನಾಗರಾಜ್.
    ರಂಗಭೂಮಿ ಕ್ಷೇತ್ರದಲ್ಲಿ ಮುದ್ದಾಪುರದ ಎನ್.ವೆಂಕಟೇಶ್, ಚಳ್ಳಕೆರೆ ತಾಲೂಕು ನನ್ನಿವಾಳದ ಹನುಮಂತಪ್ಪ.

    ಇದನ್ನೂ ಓದಿ: ಅತ್ತೆ ಮಾವನ ಕೊಲೆ ಮಾಡಿದ್ದ ಅಳಿಯನ ಬಂಧನ | ತೆಲಂಗಾಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯ ತಲಾಶ್..!

    ಶಿಕ್ಷಣ ಕ್ಷೇತ್ರ: ವೆಂಕಟೇಶ್ವರ ಬಿ.ಇಡಿ ಕಾಲೇಜು ಪ್ರಾಚಾರ್ಯ ಡಾ.ಬಿ.ಸಿ.ಅನಂತರಾಮು, ಹಿರಿಯೂರಿನ ಪ್ರೊ.ಎಂ.ಜಿ.ರಂಗಸ್ವಾಮಿ.

    ವೈದ್ಯಕೀಯ ಕ್ಷೇತ್ರ: ಡಾ.ನವೀನ್ ಬಸವರಾಜ್ ಸಜ್ಜನ್,

    ಸಾಹಿತ್ಯ ಕ್ಷೇತ್ರ: ಹಿರಿಯೂರಿನ ನಿವೃತ್ತ ಪ್ರಾಚಾರ್ಯ ಡಿ.ಸಿ.ಪಾಣಿ, ಚಿತ್ರದುರ್ಗದ ಸಂತಫಿಲೋಮಿನಾ ವಿದ್ಯಾಸಂಸ್ಥೆಯ ಎಸ್.ಫ್ಲೋಮಿನ್ ದಾಸ್, ಹೊಳಲ್ಕೆರೆ ಪಟ್ಟಣದ ಸಿದ್ದವ್ವನಹಳ್ಳಿ ವೀರೇಶ್.

    ಇದನ್ನೂ ಓದಿ:ಅಡಿಕೆ ಧಾರಣೆ | ರಾಶಿ ಬೆಲೆಯಲ್ಲಿ ಭರ್ಜರಿ ಏರಿಕೆ

    ಕ್ರೀಡಾ ಕ್ಷೇತ್ರ: ಎಂ.ಜೆ.ವೇದಾಂತ್, ಗೋಪಾಲಪುರ ರಸ್ತೆಯ ಫೈಲ್ವಾನ್ ಅಫೀಜ್.

    ಚಿತ್ರಕಲೆ ಕ್ಷೇತ್ರ:  ಚಳ್ಳಕೆರೆಯ ಆರ್.ವೆಂಕಟೇಶ್ ರೆಡ್ಡಿ, ಚಿತ್ರದುರ್ಗದ ಡಿ.ನಾಗರಾಜ್(ನಾಗು ಆಟ್ರ್ಸ್).

    ಸಮಾಜ ಸೇವೆ: ಚಿತ್ರದುರ್ಗದ ವೈ.ವಿ.ಮಹೇಂದ್ರನಾಥ್, ಜೋಗಿಮಟ್ಟಿ ರಸ್ತೆಯ ಈ.ಅಶೋಕ್ ಕುಮಾರ್.

    ಇದನ್ನೂ ಓದಿ: 127 ಅಡಿ ದಾಟಿದ ವಿವಿ ಸಾಗರ ನೀರಿನ ಮಟ್ಟ | ಕೋಡಿಗೆ 3 ಅಡಿ ಬಾಕಿ

    ಮುದ್ರಣ ಕ್ಷೇತ್ರ: ಹೊಳಲ್ಕೆರೆ ತಾಲೂಕು ತೇಕಲವಟ್ಟಿಯ ಎಂ.ಕೃಷ್ಣಮೂರ್ತಿ.

    ಸಂಕೀರ್ಣ ಕ್ಷೇತ್ರ: ರೈತ ಮುಖಂಡ ಇ.ಎನ್.ಲಕ್ಷ್ಮೀಕಾಂತ್, ಕೊಟೆ ಪ್ರವಾಸಿ ಮಾರ್ಗದರ್ಶಿ ಬಿ.ಮೋಹಿದ್ದೀನ್ ಖಾನ್ ಹಾಗೂ ನೀರಾವರಿ ಹೋರಾಟ ಸಮಿತಿಯ ಕೆ.ಆರ್.ದಯಾನಂದ್.
    ಕೃಷಿ ಕ್ಷೇತ್ರ: ಚಳ್ಳಕೆರೆ ತಾಲೂಕು ಗುಡಿಹಳ್ಳಿಯ ಬಡಗಿ ರಂಗಪ್ಪ.

    ಇದನ್ನೂ ಓದಿ:ನಾಯಕ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ

    ಪತ್ರಿಕೋದ್ಯಮ ಕ್ಷೇತ್ರ:  ಚಂದ್ರವಳ್ಳಿ ಪತ್ರಿಕೆ ಸಂಪಾದಕ ಹರಿಯಬ್ಬೆ ಹೆಂಜಾರಪ್ಪ, ಉದಯವಾಣಿ ಜಿಲ್ಲಾ ವರದಿಗಾರ ತಿಪ್ಪೇಸ್ವಾಮಿ ನಾಕೀಕೆರೆ, ಸುವರ್ಣ ನ್ಯೂಸ್ ವರದಿಗಾರ ಕಿರಣ್ ತೊಡರನಾಳು, ಬಿ.ಟಿವಿ ವರದಿಗಾರ ಸಿ.ರಾಜಶೇಖರ್ ಅವರಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top