ಮುಖ್ಯ ಸುದ್ದಿ
ಅಹೋಬಲ TVS ನಲ್ಲಿ ಹೊಸ ಜುಪಿಟರ್ 110 ಸ್ಕೂಟಿ ಲಾಂಚ್ | RTO ಭರತ್ ಕಾಳಿಸಂಗೆ ಲೋಕಾರ್ಪಣೆ
CHITRADURGA NEWS | 04 SEPTEMBER 2024
ಚಿತ್ರದುರ್ಗ: ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿನ ಶ್ರೀ ಅಹೋಬಲ ಟಿವಿಎಸ್(TVS) ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್ 110 ಸಿಸಿ(TVS Jupiter 110CC)ಯ ಆಕರ್ಷಕ ಸ್ಕೂಟಿಯನ್ನು ಚಿತ್ರದುರ್ಗ ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ ಎಂ ಕಾಳಿಸಂಗೆ ಇಂದು ಬಿಡುಗಡೆಗೊಳಿಸಿದರು.
ಕ್ಲಿಕ್ ಮಾಡಿ ಓದಿ: Upper Bhadra Project: ಭದ್ರಾ ಮೇಲ್ದಂಡೆ ಯೋಜನೆಗೆ ಪುನಃ ವಿಘ್ನ | ಕಾಲುವೆ ನಿರ್ಮಾಣಕ್ಕೆ ಎದುರಾಯಿತು ತೊಡಕು
ಜುಪಿಟರ್ 110 ಸಿಸಿ ಯ ಸ್ಕೂಟಿ ಹೊಚ್ಚ ಹೊಸ ಟಿವಿಎಸ್ ಜುಪಿಟರ್ 110 (TVS Jupiter 110) ಸ್ಕೂಟರ್ ಅತ್ಯಾಕರ್ಷಕ ವಿನ್ಯಾಸವನ್ನು ಪಡೆದಿದೆ.
ಮುಂಭಾಗ (ಫ್ರಂಟ್) ವಿನೂತನವಾಗಿರುವ ಎಲ್ಇಡಿ ಹೆಡ್‌ಲ್ಯಾಂಪ್, ಟರ್ನ್ ಇಂಡಿಕೇಟರ್‌ನೊಂದಿಗೆ ವಿಶಾಲವಾಗಿರುವ (ವೈಡ್) ಎಲ್ಇಡಿ ಡಿಆರ್‌ಎಲ್‌ನ್ನು ಪಡೆದಿದೆ.
ಹಿಂಭಾಗದ (ರೇರ್) ವಿನ್ಯಾಸವು ಉತ್ತಮವಾಗಿದ್ದು, ಎಮರ್ಜೆನ್ಸಿ ಬ್ರೇಕ್ ವಾರ್ನಿಂಗ್ ಲೈಟ್ ಒಳಗೊಂಡಿರುವ ಎಲ್ಇಡಿ ಲೈಟ್ ಬಾರ್‌ನ್ನು ಹೊಂದಿದೆ.
ಈ ಜುಪಿಟರ್ 110 ಸ್ಕೂಟರ್ ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ನವೀನವಾಗಿರುವ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಇಂಟಲಿಜೆಂಟ್ ಸ್ಟಾರ್ಟ್/ ಸ್ಟಾಪ್, ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್, ಯುಎಸ್‌ಬಿ ಚಾರ್ಜರ್, 2 ಲೀಟರ್ ಗ್ಲೋವ್ ಬಾಕ್ಸ್, 33 ಲೀಟರ್ ಸಾಮರ್ಥ್ಯದ ಅಂಡರ್ ಸೀಟ್ ಸೋರೇಜ್ ಅನ್ನು ಹೊಂದಿದೆ.
ನೂತನ ಟಿವಿಎಸ್ ಜುಪಿಟರ್ 110 ಸ್ಕೂಟರ್ ಸುರಕ್ಷತೆಯ ದೃಷ್ಟಿಯಿಂದ ಮುಂಭಾಗ (ಫ್ರಂಟ್) 220 ಎಂಎಂ ಪೆಟಲ್ ಡಿಸ್ಕ್ ಮತ್ತು ಹಿಂಭಾಗ (ರೇರ್) 130 ಎಂಎಂ ಡ್ರಮ್ ಬ್ರೇಕ್‌ನ್ನು ಪಡೆದಿದೆ. ಹಾಗೆಯೇ, ಮುಂದೆ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂದೆ ಗ್ಯಾಸ್ ಫೀಲ್ಡ್ ಡ್ಯಾಂಪರ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. 12-ಇಂಚಿನ ಅಲಾಯ್ ವೀಲ್‌ಗಳನ್ನು ಒಳಗೊಂಡಿದ್ದು, ಟೈರ್‌ಗಳು ಕೂಡ ಉತ್ತಮವಾಗಿವೆ.
ಕ್ಲಿಕ್ ಮಾಡಿ ಓದಿ: DCC ಬ್ಯಾಂಕ್ ಚುನಾವಣೆ | ಕೋರ್ಟ್ ಮೆಟ್ಟಿಲೇರಿದ ಶಾಸಕ ರಘುಮೂರ್ತಿ | 200 ಸೊಸೈಟಿ ಅನರ್ಹ
ವೈಶಿಷ್ಟ್ಯ ಹಾಗೂ ಬಣ್ಣಗಳು: ಹೊಚ್ಚ ಹೊಸ ಟಿವಿಎಸ್ ಜುಪಿಟರ್ 110 ಸ್ಕೂಟರ್ ಹಲವು ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇಂಟಲಿಜೆಂಟ್ ಸ್ಟಾರ್ಟ್-ಸ್ಟಾಪ್, ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್, ನೂತನವಾಗಿರುವ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನ್ನು ಪಡೆದಿದೆ. ಇದು ಕಾಲ್, ಟೆಕ್ಸ್ಟ್ ನೋಟಿಫಿಕೇಶನ್, ಫ್ಯುಯೆಲ್ ಎಕಾನಮಿ, ನ್ಯಾವಿಗೇಷನ್ ಸೇರಿದಂತೆ ಇನ್ನಿತರೇ ಮಾಹಿತಿಯನ್ನು ಸವಾರರಿಗೆ ಒದಗಿಸುತ್ತದೆ.
ಜುಪಿಟರ್ 110 ಸಿಸಿ ಮೂರು ಮಾಡೇಲ್ ಸ್ಕೂಟಿ ಬೆಲೆ: ಎಕ್ಸ್ ಶೋ ರೂಂ ಬೆಲೆ- 77400, 86150, 90150 ಮೂರು ಬೆಲೆಯಲ್ಲಿ ಮಾರುಟ್ಟೆಗೆ ಲಗ್ಗೆ ಇಟ್ಟಿದೆ.
ಈ ಸಂದರ್ಭದಲ್ಲಿ ಟಿವಿಎಸ್ ಕಂಪನಿಯ ಟೆರೇಟೋರಿ ಮ್ಯಾನೇಜರ್ ಉಮಾ ಮತ್ತು ಅಭಿಷೇಕ್, ಶ್ರೀ ಅಹೋಬಲ ಟಿವಿಎಸ್ ಮಾಲೀಕ ಪಿ.ವಿ.ಅರುಣ್ ಕುಮಾರ್ ಗ್ರಾಂಡ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.