By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: Jog Falls: ಪ್ರವಾಸಿಗರ ಗಮನಕ್ಕೆ; ದುಬಾರಿಯಾಗಿದೆ ಜೋಗ ಜಲಪಾತ ವೀಕ್ಷಣೆ | ಗಂಟೆ ಲೆಕ್ಕದಲ್ಲಿ ಶುಲ್ಕ ನಿಗದಿ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » Jog Falls: ಪ್ರವಾಸಿಗರ ಗಮನಕ್ಕೆ; ದುಬಾರಿಯಾಗಿದೆ ಜೋಗ ಜಲಪಾತ ವೀಕ್ಷಣೆ | ಗಂಟೆ ಲೆಕ್ಕದಲ್ಲಿ ಶುಲ್ಕ ನಿಗದಿ

ಮುಖ್ಯ ಸುದ್ದಿ

Jog Falls: ಪ್ರವಾಸಿಗರ ಗಮನಕ್ಕೆ; ದುಬಾರಿಯಾಗಿದೆ ಜೋಗ ಜಲಪಾತ ವೀಕ್ಷಣೆ | ಗಂಟೆ ಲೆಕ್ಕದಲ್ಲಿ ಶುಲ್ಕ ನಿಗದಿ

News Desk Chitradurga News
Last updated: 23 August 2024 11:47
News Desk Chitradurga News
10 months ago
Share
Jog Falls
ಜೋಗ ಜಲಪಾತ
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 23 AUGUST 2024
ಚಿತ್ರದುರ್ಗ: ಪ್ರವಾಸಿಗರ ನೆಚ್ಚಿನ ತಾಣವಾದ ಮಲೆನಾಡಿನ ಜೋಗದ ಸೌಂದರ್ಯ ಆಸ್ವಾದನೆ ಇದೀಗ ಕೊಂಚ ದುಬಾರಿಯಾಗಿದೆ. ಮಳೆಯಿಂದಾಗಿ ಜೋಗದ ಜಲಪಾತ ಮೈದುಂಬಿದ್ದು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಕ್ಲಿಕ್ ಮಾಡಿ ಓದಿ: ಡೆಂಗ್ಯೂ ಜ್ವರಕ್ಕೆ 7 ವರ್ಷದ ಬಾಲಕ ಬಲಿ

ಪ್ರಕೃತಿದತ್ತ ಸೌಂದರ್ಯದ ಕಣಜ ವಿಶ್ವ ವಿಖ್ಯಾತ ಜೋಗ ಜಲಪಾತದ ವೀಕ್ಷಣೆಗೆ ಜೋಗ ನಿರ್ವಹಣಾ ಪ್ರಾಧಿಕಾರ ನಿಗದಿಪಡಿಸಿದ್ದ ಪ್ರವೇಶ ಶುಲ್ಕ ಇದೀಗ ಹೆಚ್ಚಳ ಮಾಡಲಾಗಿದೆ. ಪರಿಷ್ಕೃತ ದರದಂತೆ ಒಂದು ಬಸ್‌ಗೆ ₹ 200 (ಹಳೆ ದರ ₹ 150), ಮಿನಿ ಬಸ್‌ ₹ 150 (ಹಳೆ ದರ ₹100), ಕಾರು, ಜೀಪ್‌ಗೆ ₹ 80 (ಹಳೆ ದರ ₹50), ಆಟೊಗೆ ₹ 40 (ಹಳೆ ದರ ₹30), ದ್ವಿಚಕ್ರ ವಾಹನ ₹ 30 (ಹಳೆ ದರ ₹20), ವಿದೇಶಿ ಪ್ರವಾಸಿಗರಿಗೆ ₹ 100 (ಹಳೆ ದರ ₹50), ಪ್ರವಾಸಿಗರಿಗೆ ₹ 20 (ಹಳೆ ದರ 10), ಕಾಲೇಜು ವಿದ್ಯಾರ್ಥಿಗಳಿಗೆ ₹ 20, ಶಾಲಾ ವಿದ್ಯಾರ್ಥಿಗಳಿಗೆ ₹ 10 ನಿಗದಿಪಡಿಸಲಾಗಿದೆ.

ಕ್ಲಿಕ್ ಮಾಡಿ ಓದಿ: ಎಚ್‌.ಡಿ.ಪುರದ ಲಕ್ಷ್ಮಿ ನರಸಿಂಹಸ್ವಾಮಿಗೆ ನೂತನ ರಥ | ಎಸ್‌ಎಲ್‌ಎನ್‌ ಟ್ರಸ್ಟ್ ಮನವಿ

Jog Falls board
ಪರಿಷ್ಕೃತ ದರದ ಫಲಕ

ಇನ್ನೂ ಜಲಪಾತ ಪ್ರದೇಶದಲ್ಲಿ ಕ್ಯಾಮೆರಾ ಬಳಸಲು ₹ 100, ಡ್ರೋಣ್‌ ಕ್ಯಾಮೆರಾಗೆ ₹ 500 ನಿಗದಿ ಮಾಡಲಾಗಿದೆ. ವಾಹನ ಮತ್ತು ಪ್ರವಾಸಿಗರ ಶುಲ್ಕ ಪ್ರತ್ಯೇಕವಾಗಿರುತ್ತದೆ. ಟಿಕೆಟ್‌ ಪಡೆದ ನಂತರದ 2 ಗಂಟೆವರೆಗೆ ಮಾತ್ರ ವಾಹನ ನಿಲುಗಡೆ ಮಾಡಬೇಕು. ಇನ್ನೂ ಹೆಚ್ಚಿನ ಹೊತ್ತು ನಿಲುಗಡೆ ಮಾಡಿದ್ದಲ್ಲಿ ಅದಕ್ಕೆ ಪ್ರತ್ಯೇಕ ಶುಲ್ಕ ಪಾವತಿಸಬೇಕಾಗುತ್ತದೆ. ಚಲನಚಿತ್ರದ ಚಿತ್ರೀಕರಣ, ಡ್ರೋಣ್ ಬಳಕೆ, ಧಾರಾವಾಹಿ ಚಿತ್ರೀಕರಣ, ಪ್ರೀ ವೆಡ್ಡಿಂಗ್‌ ಶೂಟ್‌, ರಿಯಾಲಿಟಿ ಶೋ ಕಾರ್ಯಕ್ರಮಗಳಿಗೆ ಮುಂಚಿತವಾಗಿಯೇ ಜೋಗ ನಿರ್ವಹಣಾ ಪ್ರಾಧಿಕಾರದ ಅನುಮತಿ ಪಡೆಯಬೇಕು ಎಂದು ಪ್ರವಾಸೋದ್ಯಮ ಇಲಾಖೆ ಜಂಟಿ ಕಾರ್ಯದರ್ಶಿ ಧರ್ಮಪ್ಪ ಸ್ಪಷ್ಟಪಡಿಸಿದ್ದಾರೆ.

ಕ್ಲಿಕ್ ಮಾಡಿ ಓದಿ: ವಿವಿ ಸಾಗರ ಜಲಾಶಯದ ಒಳಹರಿವು ಹೆಚ್ಚಳ

ಅಂಗವಿಕಲರು, ಸ್ವಾತಂತ್ರ್ಯ ಹೋರಾಟಗಾರರು, ಮಾಜಿ ಸೈನಿಕರು, ಪತ್ರಿಕಾ ವರದಿಗಾರರು ಮತ್ತು ಟಿ.ವಿ ಮಾಧ್ಯಮದವರಿಗೆ ಮಾತ್ರ ಪ್ರವೇಶ ಉಚಿತವಾಗಿರುತ್ತದೆ. ಶಾಲೆ, ಕಾಲೇಜು ವಿದ್ಯಾರ್ಥಿಗಳ ಪ್ರವಾಸ ಕಾರ್ಯಕ್ರಮವಾಗಿದ್ದಲ್ಲಿ ಮುಂಚಿತವಾಗಿ ನಿರ್ವಹಣಾ ಪ್ರಾಧಿಕಾರದ ಅನುಮತಿ ಪಡೆದಿದ್ದರೆ ಶುಲ್ಕದಲ್ಲಿ ಶೇ 50ರಷ್ಟು ವಿನಾಯಿತಿ ನೀಡಲಾಗುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:attentionexpensivefeejoggingScheduletouristViewWaterfallಗಮನಜಲಪಾತಜೋಗದುಬಾರಿನಿಗದಿಪ್ರವಾಸಿಗರುವೀಕ್ಷಣೆಶುಲ್ಕ
Share This Article
Facebook Email Print
Previous Article Decision to build a new chariot for Lakshminasarasimhaswamy of HDpura HD Pura Temple: ಎಚ್‌.ಡಿ.ಪುರದ ಲಕ್ಷ್ಮಿ ನರಸಿಂಹಸ್ವಾಮಿಗೆ ನೂತನ ರಥ | ಎಸ್‌ಎಲ್‌ಎನ್‌ ಟ್ರಸ್ಟ್ ಮನವಿ
Next Article All India Veerashaiva Mahasabha 1 Election: 25ಕ್ಕೆ ವೀರಶೈವ ಮಹಾಸಭಾ ಚುನಾವಣೆ | 27 ಸ್ಥಾನಕ್ಕೆ 57 ಮಂದಿ ಸ್ಪರ್ಧೆ
Leave a Comment

Leave a Reply Cancel reply

Your email address will not be published. Required fields are marked *

APMC: ಮಾರುಕಟ್ಟೆ ಧಾರಣೆ | ಇಂದಿನ ಹತ್ತಿ ರೇಟ್ ಎಷ್ಟಿದೆ?
ಮಾರುಕಟ್ಟೆ ಧಾರಣೆ
today bhavishya
Astrology: ದಿನ ಭವಿಷ್ಯ | ಜೂನ್ 21 | ವೃತ್ತಿಪರ ಉದ್ಯೋಗಗಳಲ್ಲಿ ಕಿರಿಕಿರಿ, ಆರ್ಥಿಕ ಲಾಭ ದೊರೆಯುತ್ತದೆ, ಪ್ರಯಾಣವನ್ನು ಮುಂದೂಡುವುದು ಉತ್ತಮ
Dina Bhavishya
arecanut price list
ಅಡಿಕೆ ಧಾರಣೆ | ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್‌
ಅಡಕೆ ಧಾರಣೆ
ಮೆಟ್ರಿಕ್ ಪೂರ್ವ ಮತ್ತು ನಂತರದ ವಿದ್ಯಾರ್ಥಿ ವೇತನಕ್ಕೆ ಅರ್ಜಿ
ಮುಖ್ಯ ಸುದ್ದಿ
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up