ಹೊಸದುರ್ಗ
GAS LEAKAGE: ಹೊಸದುರ್ಗ ಘಟನೆ: ಬಳಕೆಯಾಗದ ವಾಟರ್ FILTER ಕ್ಲೋರಿನ್ ಅನಿಲ ಸೋರಿಕೆಯಾಗಿದ್ದೇಗೆ ?

CHITRADURGA NEWS | 10 SEPTEMBER 2024
ಹೊಸದುರ್ಗ: ಪಟ್ಟಣದ ಎಪಿಎಂಸಿ ಎದುರಿನಲ್ಲಿರುವ ಮಿಡಲ್ ಪಂಪ್‍ಹೌಸ್‍ನಲ್ಲಿ ನೀರು ಶುದ್ಧೀಕರಣ ಕ್ಲೋರಿನ್ ಲೀಕೇಜ್ (GAS LEAKAGE) ಆಗಿರುವ ಪರಿಣಾಮ ಸುಮಾರು 40ಕ್ಕೂ ಹೆಚ್ಚು ಜನ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆ ಸೇರಿದ್ದ ಘಟನೆ ಸೆ.9 ಸೋಮವಾರ ಸಂಜೆ ನಡೆದಿತ್ತು.
ಸಂಜೆ 6 ಗಂಟೆ ಸುಮಾರಿಗೆ ಕ್ಲೋರಿನ್ ಲೋಕೇಜ್ ಆಗಿದ್ದರಿಂದ ಸುತ್ತಮುತ್ತಲಿನ ನಿವಾಸಿಗಳು, ರಸ್ತೆಯಲ್ಲಿ ಓಡಾಡುತ್ತಿದ್ದವರು ಈ ಗಾಳಿ ಸೇವಿಸಿ ಸುಸ್ತಾಗಿದ್ದರು. ನಾಲ್ಕೈದು ಜನ ತೀವ್ರವಾಗಿ ಅಸ್ವಸ್ಥಗೊಂಡು ವಾಂತಿ ಮಾಡಿಕೊಂಡಿದ್ದರು. ತಕ್ಷಣ ತಾಲೂಕು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಇದನ್ನೂ ಓದಿ: ಹೊಸದುರ್ಗದಲ್ಲಿ ವಾಟರ್ ಫಿಲ್ಟರ್ ಗ್ಯಾಸ್ ಸೋರಿಕೆ
ಘಟನೆ ನಡೆದ ತಕ್ಷಣ ತಜ್ಞರ ತಂಡ ಸ್ಥಳಕ್ಕೆ ಧಾವಿಸಿ ಕ್ಲೋರಿನ್ ಅನ್ನು ನೀರಿನಲ್ಲಿ ವಿಲೀನಗೊಳಿಸಿ ಗ್ಯಾಸ್ ಗಾಳಿಯಲ್ಲಿ ಬೆರೆಯುವುದನ್ನು ತಪ್ಪಿಸಿದೆ ಎಂದು ಪುರಸಭೆ ಅಧಿಕಾರಿಗಳು ತಿಳಿಸಿದ್ದಾರೆ.
ಶುದ್ಧೀಕರಣ ಘಟಕದ ಸುತ್ತಮುತ್ತಾ ಇರುವ ಕಲ್ಲೇಶ್ವರ ಬಡಾವಣೆ, ಅಯ್ಯಪ್ಪಸ್ವಾಮಿ ಬಡಾವಣೆ, ಗೊರವಿನಕಲ್ಲು, ಪುರದ ನಿವಾಸಿಗಳು ಉಸಿರಾಟದ ಸಮಸ್ಯೆಗೆ ಸಿಲುಕಿ ತಲೆಸುತ್ತು, ಕೆಮ್ಮಿನಂತಹ ಸಮಸ್ಯೆ ಎದುರಿಸಿದರು.
ಇದನ್ನೂ ಓದಿ: ದಿನ ಭವಿಷ್ಯ | ಇಂದು ನಿಮಗೆ ತುಂಬಾ ಸವಾಲಿನ ದಿನ, ನಿಮ್ಮನ್ನು ರಕ್ಷಿಸಿಕೊಳ್ಳಿ
ಈ ನೀರು ಶುದ್ಧೀಕರಣ ಘಟಕ 20 ವರ್ಷದಷ್ಟು ಹಳೆಯದಾಗಿದ್ದು, ಹಿರಿಯೂರು ಪಟ್ಟಣದ ನೀರು ಸರಬರಾಜು ಇಲಾಖೆಗೆ ಸೇರಿದ್ದು ಎನ್ನಲಾಗಿದೆ. ಆರಂಭದಲ್ಲಿ ಇಲ್ಲಿಂದ ನೀರು ಪಡೆಯಲಾಗುತ್ತಿತ್ತು. ಕೆಲ್ಲೋಡು ಬಳಿ ಪಂಪ್‍ಹೌಸ್ ನಿರ್ಮಾಣವಾದ ನಂತರ ಇದ ಬಳಕೆ ನಿಂತು ಹೋಗಿತ್ತು.
ಕಳೆದ ಏಳೆಂಟು ವರ್ಷಗಳಿಂದ ಬಳಕೆಯಾಗದೆ ನಿಂತಿದ್ದ ಈ ಘಟಕದಿಂದ ಕ್ಲೋರಿನ್ ಸೋರಿಕೆಯಾಗಿ ಭಾರೀ ಅಪಾಯ ತಪ್ಪಿದಂತಾಗಿದೆ. ಯಾವ ಕಾರಣಕ್ಕೆ ಸೋರಿಕೆ ಆಗಿದೆ ಎನ್ನುವುದನ್ನು ತನಿಖೆ ಮೂಲಕ ತಿಳಿಯಬೇಕಿದೆ.
ಇದನ್ನೂ ಓದಿ: ಕುರಿಗಾರರಿಗೆ ಗುರುತಿನ ಚೀಟಿ | ಯಾರೆಲ್ಲಾ ಅರ್ಜಿ ಹಾಕಬಹುದು ಗೊತ್ತಾ
