ಮುಖ್ಯ ಸುದ್ದಿ
ಜಿಲ್ಲಾ ಮಟ್ಟದ ಕವಿಗೋಷ್ಠಿಗೆ ಆಹ್ವಾನ

Published on
CHITRADURGA NEWS | 20 JUNE 2024
ಚಿತ್ರದುರ್ಗ: ಜೂನ್ 2 ರಂದು ನಡೆಯಲಿರುವ ವಚನ ಪಿತಾಮಹ ಫ.ಗು.ಹಳಕಟ್ಟಿಯವರ ಜನ್ಮದಿನಾಚರಣೆಯನ್ನು ಜಿಲ್ಲಾಡಳಿತ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಉಪನ್ಯಾಸ ಮತ್ತು ಜಿಲ್ಲಾ ಮಟ್ಟದ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಫ.ಗು.ಹಳಕಟ್ಟಿಯವರ ಬದುಕು, ಬರಹ ಮತ್ತು ವಚನ ಸಾಹಿತ್ಯ ವಿಷಯಕ್ಕೆ ಸಂಬಂಧಿಸಿದಂತೆ ಕವನಗಳನ್ನು ವಾಚಿಸಲು ಅವಕಾಶವಿದೆ.
ಇದನ್ನೂ ಓದಿ: ದರ್ಶನ್ ಕೇಸ್ | ಸುದೀಪ್, ಉಪೇಂದ್ರ, ರಚಿತಾ ಏನೇನು ಹೇಳಿದ್ರು..!
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಬಹುಮಾನ ಮತ್ತು ಪ್ರಶಂಸಾ ಪತ್ರ ನೀಡಲಾಗುವುದು ಎಂದು ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ತಿಳಿಸಿದ್ದಾರೆ.
ಕಾರ್ಯಕ್ರಮ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಲಿದೆ. ಆಸಕ್ತ ಕವಿಗಳು ಜೂನ್ 25 ರ ಒಳಗೆ ತಮ್ಮ ಕವನವನ್ನು 9449510078, 9538418943 ವಾಟ್ಸಪ್ ಕಳಿಸಲು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆಯಲ್ಲಿ ಕೋರಿದೆ.
Continue Reading
You may also like...
Related Topics:Chitradurga, Fa. Gu. Halakatti, Kannada News, Kannada Sahitya Parishad, poets' meeting, Vachana, ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಸುದ್ದಿ, ಕವಿಗೋಷ್ಠಿ, ಚಿತ್ರದುರ್ಗ, ಫ.ಗು.ಹಳಕಟ್ಟಿ, ವಚನ

Click to comment