ಮುಖ್ಯ ಸುದ್ದಿ
ಐಮಂಗಲ ಪೊಲೀಸರಿಂದ ಅಂತಾರಾಜ್ಯ ಕಳ್ಳನ ಬಂಧನ | 351 ಗ್ರಾಂ ಚಿನ್ನಾಭರಣ ವಶಕ್ಕೆ

CHITRADURGA NEWS | 18 February 2025
ಚಿತ್ರದುರ್ಗ: ಐಮಂಗಲ ವೃತ್ತ ಪೊಲೀಸರು ಅಂತಾರಾಜ್ಯ ಕಳ್ಳನನ್ನು ಬಂಧಿಸಿದ್ದು, ಆತನಿಂದ ಸುಮಾರು 26.98 ಲಕ್ಷ ರೂ. ಮೌಲ್ಯದ 351 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
Also Read: ಬೆಳೆ ವಿಮೆ ತಿರಸ್ಕೃತ ಪಟ್ಟಿ ಪ್ರಕಟ | ಆಕ್ಷೇಪಣೆ ಸಲ್ಲಿಸಲು ಮಾರ್ಚ್ 4 ಕೊನೆ ದಿನ

ಬಳ್ಳಾರಿ ನಗರದ ಕೊಳಗಾಲ್ ರಸ್ತೆಯ ಕರುಮಾರಿಯಮ್ಮ ಕಾಲೊನಿ ವಾಸಿ, ಗಾರೆ ಕೆಲಸಗಾರ ಹನುಮಂತ ಬಂಧಿತ ಆರೋಪಿ.
ಮನೆ ಕಳ್ಳತನ ಹೆಚ್ಚುತ್ತಿರುವ ಹಿನ್ನೆಲೆ ರಚಿಸಲಾಗಿದ್ದ ವಿಶೇಷ – ತಂಡವು ಆಯಕಟ್ಟಿನ ಸ್ಥಳಗಳಲ್ಲಿ ಗಸ್ತು ನಿರ್ವಹಿಸುತ್ತಿರುವಾಗ ಕಳೆದ ಫೆ.13ರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಐಮಂಗಲ ಬಸ್ ನಿಲ್ದಾಣದ ಬಳಿ ಅನುಮಾನಾಸ್ಪದವಾಗಿ ಕಂಡು ಬಂದ ಹನುಮಂತನನ್ನು ಹಿಡಿದು ವಿಚಾರಿಸಿದ್ದಾರೆ.
ಆಗ ಅಬ್ಬಿನಹೊಳೆ ಠಾಣೆ, ಹಿರಿಯೂರು ನಗರ ಠಾಣೆ, ಚಿತ್ರದುರ್ಗ ನಗರದ ಬಡಾವಣೆ ಠಾಣೆ, ಕೂಡ್ಲಿಗಿ ಪೊಲೀಸ್ ಠಾಣೆಗಳಲ್ಲಿ ಮನೆಕಳ್ಳತನ ಪ್ರಕರಣಗಳಲ್ಲಿ ಬಾಗಿಯಾಗಿರುವುದು ತಿಳಿದಿದೆ.
Also Read: 34 ಲಕ್ಷ ರೂ. ವಂಚಿಸಿದ್ದ ಮೂವರು ಆರೋಪಿಗಳ ಬಂಧನ | ಸೈಬರ್ ಪೊಲೀಸ್ ಕಾರ್ಯಚರಣೆ
ಚಿತ್ರದುರ್ಗ ಸೇರಿದಂತೆ ಬಳ್ಳಾರಿ, ವಿಜಯನಗರ, ದಾವಣಗೆರೆ ಗದಗ, ಕೊಪ್ಪಳ, ಶಿವಮೊಗ್ಗ ಬೆಂಗಳೂರು ನಗರ, ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಗಳ ಮನೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ತಿಳಿದು ಬಂದಿದ್ದು, ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಪೊಲೀಸ್ ವಶಕ್ಕೆ ಪಡೆಯಲಾಗಿದೆ.
ಸದರಿ ಪ್ರಕರಣದಲ್ಲಿ ಮಾಲು ಮತ್ತು ಅರೋಪಿಯನ್ನು ಪತ್ತೆ ಮಾಡಿದ ಸಿಪಿಐ ಎನ್.ಗುಡ್ಡಪ್ಪ, ಪಿಎಸ್‌ಐ ಮಹೇಶ್ ಗೌಡ, ಎಎಸ್‌ಐ ರಾಮಯ್ಯ ಮತ್ತು ಸಿಬ್ಬಂದಿ ದೇವೇಂದ್ರಪ್ಪ, ನಿಂಗರಾಜ, ಸಂಗಮೇಶ, ಸಿದ್ದಲಿಂಗೇಶ್ವರ, ತಿಪ್ಪೇಸ್ವಾಮಿ, ಎನ್.ಜೆ.ಪ್ರವೀಣ್ ಕುಮಾರ್, ಹರ್ಷ, ಎಂ.ದಿಲೀಪ್‌ಕುಮಾರ್, ಚಿದಾನಂದ, ಪಿ.ಕೆ.ನಾಗರಾಜ್, ವೈ.ಕೆ. ತಿಪ್ಪೇಸ್ವಾಮಿರವರ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿರುತ್ತಾರೆ.
