ಮುಖ್ಯ ಸುದ್ದಿ
VV Sagara: ವಿವಿ ಸಾಗರಕ್ಕೆ ಒಳ ಹರಿವು ಬಂದ್ | ಈವರೆಗೆ ಹರಿದು ಬಂದ ನೀರಿನ ಪ್ರಮಾಣ ಎಷ್ಟು ?
CHITRADURGA NEWS | 30 NOVEMBER 2024
ಚಿತ್ರದುರ್ಗ: ಕಳೆದ ಕೆಲ ತಿಂಗಳಿಂದ ವಾಣಿವಿಲಾಸ ಸಾಗರಕ್ಕೆ ಭದ್ರಾ ಜಲಾಶಯದಿಂದ ನೀರು ಹರಿಯುತ್ತಿತ್ತು. ಇದರೊಟ್ಟಿಗೆ ಮಳೆಯೂ ಸೇರಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬಂದಿದೆ.
ಆದರೆ, ಈಗ ಏಕಾಏಕಿ ಜಲಾಶಯದ ಒಳಹರಿವು ಬಂದ್ (Inflow nill) ಆಗಿದೆ. ಭದ್ರಾದಿಂದ ಹರಿದು ಬರುತ್ತಿದ್ದ ನೀರು ನಿಂತು ಹೋಗಿದೆ. ಇದರಿಂದಾಗಿ ಇಂದು ಒಳಹರಿವು ನಿಲ್ ಆಗಿದೆ.
ಇದನ್ನೂ ಓದಿ: ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ ಮಾಲತೇಶ್ ಮುದ್ದಜ್ಜಿ ಅವಿರೋಧ | ರಾಜ್ಯ ಪರಿಷತ್ತಿಗೆ ಮೂಡದ ಒಮ್ಮತ
ಮೂರು ದಿನಗಳ ಹಿಂದಷ್ಟೇ ರಾಜ್ಯ ಸರ್ಕಾರದ ಜಲಸಂಪನ್ಮೂಲ ಇಲಾಖೆಯಿಂದ 2025 ಜನವರಿ ತಿಂಗಳವರೆಗೆ ಪ್ರತಿ ದಿನ 700 ಕ್ಯೂಸೆಕ್ ನೀರು ಹರಿಸಲು ಆದೇಶ ಮಾಡಲಾಗಿತ್ತು. ಆದರೆ, ಈಗ ಒಳಹರಿವು ಬಂದ್ ಆಗಿದೆ.
ಸದ್ಯದ ಜಲಾಶಯ ಮಟ್ಟ ಎಷ್ಟಿದೆ ?
135 ಅಡಿ ಎತ್ತರದ ವಾಣಿವಿಲಾಸ ಸಾಗರ ಜಲಾಶಯಕ್ಕೆ 130 ಅಡಿಗೆ ನೀರು ಬಂದರೆ ಕೋಡಿ ಬೀಳಲಿದೆ.
ಇದನ್ನೂ ಓದಿ: ದಿನ ಭವಿಷ್ಯ | 30 ನವೆಂಬರ್ 2024 | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ ದಿನ?
ಸದ್ಯ ಜಲಾಶಯ ಮಟ್ಟ 128.65 ಅಡಿವರೆಗೆ ನೀರು ಬಂದಿದೆ. ಭರ್ತಿಯಾಗಿ ಕೋಡಿ ಬೀಳಲು ಕೇವಲ ಇನ್ನು 1.35 ಅಡಿ ಮಾತ್ರ ನೀರು ಬರಬೇಕಿದೆ.
30 ಟಿಎಂಸಿ ಸಾಮಥ್ರ್ಯ ವಿವಿ ಸಾಗರ ಜಲಾಶಯದಲ್ಲಿ ಸದ್ಯ 29.31 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. 30 ಟಿಎಂಸಿ ಭರ್ತಿಗೆ ಇನ್ನು ಕೇವಲ 0.69 ಅಡಿ ನೀರು ಬರಬೇಕಿದೆ.
ಇದನ್ನೂ ಓದಿ: 20 ಕೋಳಿಮರಿ ವಿತರಣೆ | ರೈತ ಮಹಿಳೆಯರಿಂದ ಅರ್ಜಿ ಆಹ್ವಾನ
ಭದ್ರಾದಿಂದ ಮತ್ತೆ ನೀರು ಹರಿದರೆ ಡಿಸೆಂಬರ್ ತಿಂಗಳಲ್ಲೇ ಜಲಾಶಯ ಭರ್ತಿಯಾಗಿ ಹೊಸ ವರ್ಷ ಜನವರಿ ವೇಳೆಗೆ ಕೋಡಿ ಬೀಳುವುದು ಪಕ್ಕಾ.