Connect with us

    ಈಚಘಟ್ಟದ ಸಿದ್ದವೀರಪ್ಪ ಅವರ ಪತ್ನಿ ಇಂದ್ರಮ್ಮ ನಿಧನ

    DEATH

    ನಿಧನವಾರ್ತೆ

    ಈಚಘಟ್ಟದ ಸಿದ್ದವೀರಪ್ಪ ಅವರ ಪತ್ನಿ ಇಂದ್ರಮ್ಮ ನಿಧನ

    CHITRADURGA NEWS | 17 JUNE 2024
    ಚಿತ್ರದುರ್ಗ:‌ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಅವರ ಪತ್ನಿ ಇಂದ್ರಮ್ಮ (63) ಭಾನುವಾರ ರಾತ್ರಿ ನಿಧನರಾಗಿದ್ದಾರೆ.

    ಈಚಘಟ್ಟದ ತೋಟದ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.

    ಜಿಲ್ಲಾ ಮಹಿಳಾ ರೈತಸಂಘದ ಮಹಿಳಾ ಖಜಾಂಚಿಯಾಗಿದ್ದ ಇಂದ್ರಮ್ಮ , 21 ಡಿಸೆಂಬರ್ 2000ನೇ ಇಸವಿಯಲ್ಲಿ ರಾಜ್ಯದಲ್ಲಿ ಮೊಟ್ಟ ಮೊದಲನೇ ಬಾರಿಗೆ ಚಿತ್ರದುರ್ಗದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆದ ರೈತ ಸಮಾವೇಶವನ್ನ ಪ್ರೊಫೆಸರ್ ಎಂಡಿ ನಂಜುಂಡಸ್ವಾಮಿ ಮತ್ತು ರಾಜ್ಯದ ಘಟಾನುಘಟಿ ರೈತ ಹೋರಾಟಗಾರರ ನಡುವೆ ಹಸಿರು ಸೇನೆಯನ್ನು ಹಸಿರು ಬಾವುಟ ಹಾರಿಸುವ ಮೂಲಕ ಉದ್ಘಾಟಿಸಿದ್ದರು. ರಾಜ್ಯಾದ್ಯಂತ ಹಸಿರು ಸೇನೆಯ ಅಭ್ಯುದಯಕ್ಕೆ ಕಾರಣೀಭೂತರಾಗಿದ್ದರು.

    ಕ್ಲಿಕ್ ಮಾಡಿ ಓದಿ: ರೇಣುಕಾಸ್ವಾಮಿ ನಿವಾಸಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭೇಟಿ

    ಮಾರ್ಗ: ಚಿತ್ರದುರ್ಗ ಮತ್ತು ಹೊಳಲ್ಕೆರೆ ಮಾರ್ಗ ಮದ್ಯದಲ್ಲಿರುವ ಚಿತ್ರಹಳ್ಳಿ ಗೇಟ್‌ನಿಂದ ಎಚ್‌.ಡಿ.ಪುರ ಮಾರ್ಗದಲ್ಲಿ ಸುಮಾರು 1 ಕಿಮಿ ದೂರದಲ್ಲಿ ಅವರ ತೋಟವಿರುತ್ತದೆ.

    Click to comment

    Leave a Reply

    Your email address will not be published. Required fields are marked *

    More in ನಿಧನವಾರ್ತೆ

    To Top