ಮುಖ್ಯ ಸುದ್ದಿ
Indira Gandhi: ಮಾಜಿ ಸಚಿವ ಎಚ್.ಆಂಜನೇಯ ಕಚೇರಿಯಲ್ಲಿ ಇಂದಿರಾಗಾಂಧಿ ಜನ್ಮದಿನಾಚರಣೆ
CHITRADURGA NEWS | 19 NOVEMBER 2024
ಚಿತ್ರದುರ್ಗ: ಸೀಬಾರದ ಮಾಜಿ ಸಚಿವ ಎಚ್.ಆಂಜನೇಯ ಕಚೇರಿಯಲ್ಲಿ ಮಂಗಳವಾರ ಇಂದಿರಾಗಾಂಧಿ(Indira Gandhi) ಜನ್ಮದಿನಾಚರಣೆ ಆಚರಿಸಲಾಯಿತು.
ಕ್ಲಿಕ್ ಮಾಡಿ ಓದಿ: ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಅವರಿಗೆ ಸುವರ್ಣ ಮಹೋತ್ಸವ ಪುರಸ್ಕಾರ
ಇಂದಿರಾಗಾಂಧಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಮಾಜಿ ಸಚಿವ ಹೆಚ್.ಆಂಜನೇಯ, ದೇಶದ ಪ್ರಥಮ ಮಹಿಳಾ ಪ್ರಧಾನಿ, ವಿಶ್ವದ ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಆಡಳಿತ ನಡೆಸಿದ 70-80ರ ದಶಕದ ಕಾಲ ಬಡಜನರ ಪಾಲಿಗೆ ಬಹುದೊಡ್ಡ ವರವಾಗಿದ್ದರು.
ಹಣಕಾಸು ಸಂಸ್ಥೆ, ಬ್ಯಾಂಕ್, ಶ್ರೀಮಂತರಿಗೆ ಮಾತ್ರ ಸೀಮಿತವಾಗಿದ್ದ ಕಾಲಘಟ್ಟದಲ್ಲಿ ಬಂಡಾವಾಳಶಾಹಿಗಳನ್ನು ಎದುರು ಹಾಕಿಕೊಂಡು, ಸಾಮಾನ್ಯ ಜನರು ಬ್ಯಾಂಕ್‌ಗಳಿಗೆ ಪ್ರವೇಶಿಸಿ ಆರ್ಥಿಕ ವಹಿವಾಟು ನಡೆಸುವ ಹಾಗೂ ಹಣಕಾಸಿನ ಸೌಲಭ್ಯ ಪಡೆಯುವ ಹಕ್ಕು ನೀಡಿದ ದಿಟ್ಟ ಮಹಿಳೆ ಎಂದರು.
ಇಂದಿರಾ ಗಾಂಧಿ ಚಿಂತನೆಯಂತೆ ಬಡತನ ವಿಮೋಚನೆಗಾಗಿ ಕಾಂಗ್ರೆಸ್ ಪಕ್ಷ ನಿರಂತರವಾಗಿ ಶ್ರಮಿಸುತ್ತಿದ್ದು, ಅವರ ಆಶಯದಂತೆ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಹಸಿವುಮುಕ್ತ ರಾಜ್ಯವನ್ನಾಗಿಸಲು ಸಿದ್ದರಾಮಯ್ಯ ಶ್ರಮಿಸುತ್ತಿದ್ದು, ಈಗ ಸೋಮಾರಿ ಮಾತ್ರ ಬಡವ ಆಗಿರಲು ಸಾಧ್ಯ ಎಂದರು.
ಕ್ಲಿಕ್ ಮಾಡಿ ಓದಿ: ತಾಯಿ ಮಗಳು ಆತ್ಮಹತ್ಯೆ | ಚಿಕ್ಕಂದವಾಡಿಯಲ್ಲಿ ಧಾರುಣ ಘಟನೆ
ಈ ವೇಳೆ ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್, ತಾಪಂ ಮಾಜಿ ಸದಸ್ಯ ಸಮರ್ಥರಾಯ್, ಮುಖಂಡರಾದ ಕೆಂಗುಂಟೆ ಜಯಪ್ಪ, ಚೇತನ್ ಬೋರೆನಹಳ್ಳಿ, ರಮೇಶ್, ಕಾಂಗ್ರೆಸ್ ಎಸ್ಸಿ ಘಟಕದ ತಾಲೂಕು ಅಧ್ಯಕ್ಷ ಅನಿಲ್ ಕೋಟಿ ಉಪಸ್ಥಿತರಿದ್ದರು.