ಮುಖ್ಯ ಸುದ್ದಿ
ಇಂಡಿಯನ್ ಇಂಟರ್ನ್ಯಾಷನಲ್ ಶಾಲೆ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ | ಶಾಸಕ ಚಂದ್ರಪ್ಪ ಅಭಿನಂದನೆ
CHITRADURGA NEWS | 21 DECEMBER 2024
ಚಿತ್ರದುರ್ಗ: ನಗರದ ಇಂಡಿಯನ್ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ಡಿಸೆಂಬರ್ 14 ಮತ್ತು 15 ರಂದು ನಡೆದ ರಾಜ್ಯಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ, ದ್ವಿತೀಯ ಸ್ಥಾನ ಪಡೆಯುವುದರ ಮೂಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕ್ಲಿಕ್ ಮಾಡಿ ಓದಿ: ಟೈಯರ್ ಬ್ಲಾಸ್ಟ್ | ಧಗಧಗನೆ ಹೊತ್ತಿ ಉರಿದ ಖಾಸಗಿ ಬಸ್ | ಪ್ರಯಾಣಿಕರು ಬಚಾವ್
10 ನೇ ತರಗತಿಯ ವಿದ್ಯಾರ್ಥಿ ವಿ.ಶಿವಪ್ರಸಾದ್ ಮತ್ತು 5ನೇ ತರಗತಿಯ ವಿದ್ಯಾರ್ಥಿ ಚಿರಾಗ್ ಹೆಗಡೆ ರಾಷ್ಟ್ರಮಟ್ಟದ ಸ್ಕೇಟಿಂಗ್ ಸ್ಪರ್ಧೆಗೆ ಆಯ್ಕೆಗೊಂಡಿರುತ್ತಾರೆ.
ರಾಷ್ಟ್ರಮಟ್ಟದ ಸ್ಕೇಟಿಂಗ್ ಸ್ಪರ್ಧೆ ಡಿ.31 ರಿಂದ ಪೆಬ್ರವರಿ 3 ರವರೆಗೆ ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ನಡೆಯಲಿದೆ.
ಚಿತ್ರದುರ್ಗದ ಇತಿಹಾಸದಲ್ಲಿ ಮೊದಲ ಬಾರಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಹೆಗ್ಗಳಿಕೆಯನ್ನು ಇಂಡಿಯನ್ ಇಂಟರ್ನ್ಯಾಷನಲ್ ಶಾಲೆಗೆ ತಂದಿದ್ದಾರೆ.
ಕ್ಲಿಕ್ ಮಾಡಿ ಓದಿ: ಸಿ.ಟಿ.ರವಿ ವಿರುದ್ಧ ಚಿತ್ರದುರ್ಗದ ಲಕ್ಷ್ಮೀ ಹೆಬ್ಬಾಳ್ಕರ್ ಅಭಿಮಾನಿಗಳ ಪ್ರತಿಭಟನೆ | ಪಂಚಮಸಾಲಿ ಸಮಾಜದ ಅಧ್ಯಕ್ಷ ಹೆಚ್.ಎಂ.ಮಂಜುನಾಥ್ ವಾಗ್ದಾಳಿ
ಶಾಸಕರಾದ ಎಂ.ಚಂದ್ರಪ್ಪ, ಸಂಸ್ಥೆಯ ಸಿಇಓ ರಘುಚಂದನ್, ಸ್ಕೇಟಿಂಗ್ ಕೋಚ್ ರವಿಕುಮಾರ್, ಕ್ರೀಡಾ ಸಂಯೋಜಕರು ರಾಘವೇಂದ್ರ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಭಿನಂದನೆ ತಿಳಿಸಿದ್ದಾರೆ.