ಮುಖ್ಯ ಸುದ್ದಿ
Rain: ವಿವಿ ಸಾಗರಕ್ಕೆ ಒಳಹರಿವು ಹೆಚ್ಚಳ | ಇಂದಿನ ಜಲಾಶಯದ ನೀರಿನ ಮಟ್ಟ ಎಷ್ಟಿದೆ ?
CHITRADURGA NEWS | 03 OCTOBER 2024
ಚಿತ್ರದುರ್ಗ: ಜಿಲ್ಲೆಯ ಕೆಲ ಭಾಗ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಚ್ಚು (Rain) ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ವಾಣಿವಿಲಾಸ ಸಾಗರ ಜಲಾಶಯದ ಒಳಹರಿವು ಹೆಚ್ಚಾಗಿದೆ.
ಭದ್ರಾ ಜಲಾಶಯದಿಂದ ಪ್ರತಿ ದಿನ 500 ರಿಂದ 650 ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಆದರೆ, ಅಕ್ಟೋಬರ್ 03 ರಂದು ನಡೆಸಿದ ಮಾಪನದ ವೇಳೆ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ.
ಇದನ್ನೂ ಓದಿ: ಕಾರು ಅಪಘಾತ | ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮೃತ
ಅ.3 ರಂದು ಬೆಳಗ್ಗೆ ವೇಳೆಗೆ ವಿವಿ ಸಾಗರ ಜಲಾಶಯಕ್ಕೆ 1040 ಕ್ಯೂಸೆಕ್ ನೀರು ಹರಿದು ಬಂದಿದೆ. ಮಳೆ ಇನ್ನೂ ಇರುವುದರಿಂದ ಈ ಒಳಹರಿವು ಹೆಚ್ಚಾಗುವ ಸಾಧ್ಯತೆಯೂ ಇದೆ.
30 ಟಿಎಂಸಿ ಅಡಿ ಸಾಮಥ್ರ್ಯದ ಜಲಾಶಯದಲಿ ಸದ್ಯ 22.67 ಟಿಎಂಸಿ ಅಡಿ ನೀರು ಬಂದಿದೆ. 135 ಅಡಿ ಎತ್ತರದ ವಿವಿ ಸಾಗರದಲ್ಲಿ ಸದ್ಯ 120.75 ಅಡಿವರೆಗೆ ನೀರು ಬಂದಿದೆ. ಜಲಾಶಯ ಭರ್ತಿಯಾಗಲು ಇನ್ನೂ 9 ಅಡಿ ನೀರು ಬರಬೇಕಿದೆ.
ಇದನ್ನೂ ಓದಿ: ಬೆಸ್ಕಾಂ ಮಹತ್ವದ ಸೂಚನೆ | ಅಕ್ಟೋಬರ್ 4 ರಿಂದ 6 ರವರೆಗೆ ಬಿಲ್ ಪಾವತಿಸುವ ಮುನ್ನಾ ಈ ಸುದ್ದಿ ಓದಿ
ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 122.60 ಅಡಿವರೆಗೆ ನೀರಿತ್ತು. ಜಲಾಶಯದಲ್ಲಿ ಕಳೆದ ವರ್ಷ 24.18 ಟಿಎಂಸಿ ನೀರಿತ್ತು.
ಇದನ್ನೂ ಓದಿ: 2027ಕ್ಕೆ ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗ ಪೂರ್ಣ | ಪ್ರಧಾನಿ ನರೇಂದ್ರ ಮೋದಿಯಿಂದ ಉದ್ಘಾಟನೆ