Connect with us

    Sri Mailara Lingeswara; ಆ.30 ರಂದು ಬುರುಜನಹಟ್ಟಿ ಶ್ರೀ ಮೈಲಾರ ಲಿಂಗೇಶ್ವರ ದೇವಸ್ಥಾನ ಉದ್ಘಾಟನೆ

    ಪತ್ರಿಕಾಗೋಷ್ಠಿಯಲ್ಲಿ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ ಜೀರ್ಣೋದ್ದಾರ ಅಭಿವೃದ್ದಿ ಸಮಿತಿಯ ಕಾರ್ಯದರ್ಶಿ ಎಂ.ನಿಶಾನಿ ಜಯ್ಯಣ್ಣ

    ಮುಖ್ಯ ಸುದ್ದಿ

    Sri Mailara Lingeswara; ಆ.30 ರಂದು ಬುರುಜನಹಟ್ಟಿ ಶ್ರೀ ಮೈಲಾರ ಲಿಂಗೇಶ್ವರ ದೇವಸ್ಥಾನ ಉದ್ಘಾಟನೆ

    CHITRADURGA NEWS | 27 AUGUST 2024

    ಚಿತ್ರದುರ್ಗ: ನಗರದ ಬುರುಜನಹಟ್ಟಿಯ ಶ್ರೀ ಮೈಲಾರ ಲಿಂಗೇಶ್ವರ ಸ್ವಾಮಿ(Sri Mailara Lingeswara), ಗಂಗಾಮಾಳಮ್ಮ ದೇವಿಯ ದೇವಸ್ಥಾನ ಹಾಗೂ ಸಮುದಾಯ ಭವನದ ಉದ್ಘಾಟನಾ ಕಾರ್ಯಕ್ರಮ ಆಗಸ್ಟ್ 30 ರಿಂದ ಸೆಪ್ಟಂಬರ್ 1 ರವರೆಗೆ ನಡೆಯಲಿದೆ ಎಂದು ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ ಜೀರ್ಣೋದ್ದಾರ ಅಭಿವೃದ್ದಿ ಸಮಿತಿಯ ಕಾರ್ಯದರ್ಶಿ ಎಂ.ನಿಶಾನಿ ಜಯ್ಯಣ್ಣ ತಿಳಿಸಿದ್ದಾರೆ.

    ಕ್ಲಿಕ್ ಮಾಡಿ ಓದಿ: leopard; ಚಿತ್ರದುರ್ಗ ಹೊರವಲಯದ ಹೆದ್ದಾರಿ ಪಕ್ಕದ ಬಂಡೆ ಮೇಲೆ ಚಿರತೆ ಪ್ರತ್ಯಕ್ಷ

    ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು.

    ಮೈಲಾರಲಿಂಗೇಶ್ವರ ದೇವಸ್ಥಾನ ಚಾಲುಕ್ಯರ ಕಾಲದ್ದಾಗಿದ್ದು, ನಮ್ಮ ಮನೆತನ ಇದಕ್ಕೆ ನಡೆದುಕೊಂಡು ಬರುತ್ತಿದೆ. ಶಿಥಿಲಗೊಂಡಿದ್ದ ದೇವಸ್ಥಾನವನ್ನು ಪುನರ್ ನಿರ್ಮಾಣ ಮಾಡಲಾಗಿದೆ.

    ಸುತ್ತಮುತ್ತಲಿನ ವಾರ್ಡ್‍ಗಳ ಜನತೆಯ ಅನುಕೂಲಕ್ಕಾಗಿ ಸುಮಾರು 2 ಕೋಟಿ ರೂ ವೆಚ್ಚದಲ್ಲಿ ಸಮುದಾಯ ಭವನವನ್ನು ನಿರ್ಮಾಣ ಮಾಡಲಾಗಿದ್ದು, ಇದರ ಉದ್ಘಾಟನೆ ಸೆ.1 ರಂದು ನಡೆಯಲಿದೆ ಎಂದರು.

    ಆ.30 ರಂದು ಸಂಜೆ 6 ರಿಂದ ಮಹಾ ಗಣಪತಿ ಪೂಜೆ, ಪ್ರಸಾದ ಶುದ್ದಿ, ಸ್ಥಳ ಶುದ್ದಿ, ರಾಕ್ಷೋಘ್ನ ಹೋಮ, ಸುದರ್ಶನ ಹೋಮ, ವಾಸ್ತು ಶಾಂತಿ ಹೋಮ, ವಾಸ್ತು ಬಲಿ ನಡೆಯಲಿದೆ.

    ಆ.31 ರಂದು ಬೆಳಿಗ್ಗೆ 8 ರಿಂದ ಮಹಾಗಣ ಪ್ರತಿಷ್ಠೆ, ಪುಣ್ಯಾಹ್ನ ವಾಚನ, ಮಾತೃಕಾ ಪೂಜೆ, ಪಂಚಗವ್ಯ ಮೇಳನ, ಸಂಜೆ 6.30 ರಿಂದ ಕಳಶಾರಾಧನೆ.

    ಕ್ಲಿಕ್ ಮಾಡಿ ಓದಿ: Mine affected area; ಸಿಎಸ್ಆರ್ ನಿಧಿ ಗಣಿ ಬಾಧಿತ ಪ್ರದೇಶಗಳಲ್ಲಿ ಬಳಸಿ | ಗೋವಿಂದ ಕಾರಜೋಳ

    ಸೆ.1 ರಂದು ಬೆಳಿಗ್ಗೆ 6 ರಿಂದ ಕಳಾನ್ಯಾಸ, ಪ್ರಾಣಪ್ರತಿಷ್ಠಾಪನೆ, ನೇತ್ರೋನ್ಮಿಲನ, ರುದ್ರಹೋಮ, ಕಲಶಾಭಿಷೇಕ, ಗಂಗಮಾಳಮ್ಮ ಸಹಿತ ಮೈಲಾರಲಿಂಗೇಶ್ವರಸ್ವಾಮಿ ಪ್ರತಿಷ್ಠಾಪನೆ ನೆರವೇರಲಿದೆ.

    ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದಪುರಿ ಮಹಾಸ್ವಾಮಿಗಳು, ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಕಬೀರಾನಂದಾಶ್ರಮದ ಶಿವಲಿಂಗಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ.

    ಸೆ.1 ರಂದು ಬೆಳಿಗ್ಗೆ 11 ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮೈಲಾರಲಿಂಗೇಶ್ವರ ಸಮುದಾಯ ಭವನ ಉದ್ಘಾಟಿಸುವರು.

    ಸಂಸದ ಗೋವಿಂದ ಕಾರಜೋಳ ದೇವಸ್ಥಾನದ ಸಂಸ್ಥಾಪಕರಾದ ದಿವಂಗತ ನಿಶಾನಿ ಲಕ್ಷ್ಮಮ್ಮ, ದಿವಂಗತ ನಿಶಾನಿ ಮಲ್ಲಪ್ಪ ಇವರುಗಳ ಭಾವಚಿತ್ರ ಅನಾವರಣಗೊಳಿಸುವರು.

    ಕ್ಲಿಕ್ ಮಾಡಿ ಓದಿ: alcohol; ಚಳ್ಳಕೆರೆ ಗೌರಸಮುದ್ರ ಮಾರಮ್ಮ ಜಾತ್ರೆ | ಪ್ರಾಣಿ ಬಲಿ, ಮದ್ಯ ಮಾರಾಟ ನಿಷೇಧ | ಎಸ್ಪಿ ರಂಜಿತ್ ಕುಮಾರ್ ಬಂಡಾರು

    ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕರುಗಳಾದ ಬಿ.ಜಿ.ಗೋವಿಂದಪ್ಪ, ಟಿ.ರಘುಮೂರ್ತಿ, ಅಬಕಾರಿ ಗುತ್ತಿಗೆದಾರ ಹೆಚ್.ಮಹದೇವ್, ಕರ್ನಾಟಕ ರಾಜ್ಯ ಆದಿಜಾಂಬವ ಅಭಿವೃದ್ದಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಕೆ.ಡಿ.ಪಿ.ಸದಸ್ಯ ಕೆ.ಸಿ.ನಾಗರಾಜ್, ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್.ಮಂಜುನಾಥ್, ಕರ್ನಾಟಕ ಗುತ್ತಿಗೆದಾರರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಆರ್.ಮಂಜುನಾಥ್, ನಗರಸಭಾ ಸದಸ್ಯರುಗಳಾದ ಪಿ.ಕೆ.ಮೀನಾಕ್ಷಿ, ಜೆ.ಶಶಿಧರ್, ನಗರಸಭೆ ಪೌರಾಯುಕ್ತೆ ಶ್ರೀಮತಿ ರೇಣುಕಾ ಇನ್ನು ಮುಂತಾದವರು ಆಗಮಿಸಲಿದ್ದಾರೆಂದು ಹೇಳಿದರು.

    ಪತ್ರಿಕಾಗೋಷ್ಠಿಯಲ್ಲಿ ಜಿ.ಸಿ.ಸುರೇಶ್‍ಬಾಬು, ಎಸ್.ಕೃಷ್ಣಮೂರ್ತಿ, ನಿಶಾನಿ ಮಾಲತೇಶ್, ಶಿವಕುಮಾರ ಪಿ.ಎಲ್. ಚಂದ್ರಪ್ಪ ಇವರುಗಳು ಉಪಸ್ಥಿತರಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top