ಮುಖ್ಯ ಸುದ್ದಿ
POLICE: ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ಪೊಲೀಸ್ ಇಲಾಖೆಯಿಂದ ಮಹತ್ವದ ಸೂಚನೆ
CHITRADURGA NEWS | 24 AUGUST 2024
ಚಿತ್ರದುರ್ಗ: ಕಳೆದ ವರ್ಷ ಅಡಿಕೆ ಮಾರಾಟ, ಖೇಣಿ, ಹಸಿ ಅಡಿಕೆ ಮಾರಾಟ ಮತ್ತಿತರೆ ಸಂದರ್ಭಗಳಲ್ಲಿ ಸಾಕಷ್ಟು ರೈತರು ವಂಚನೆಗೆ ಒಳಗಾಗಿದ್ದು, ಈ ಬಗ್ಗೆ ಜಿಲ್ಲೆಯ ವಿವಿಧ ಪೊಲೀಸ್(POLICE) ಠಾಣೆಗಳಲ್ಲಿ ಸಾಕಷ್ಟು ದೂರುಗಳು ದಾಖಲಾಗಿವೆ.
ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಅಡಿಕೆ ಬೆಳೆಗಾರರಿಗೆ ಮಹತ್ವದ ಸೂಚನೆ ನೀಡಿದ್ದು, ಪೊಲೀಸ್ ಇಲಾಖೆಯಿಂದ ಹೊರಡಿಸಿರುವ ಪ್ರಕಟಣೆ ಈ ಕೆಳಗಿನಂತಿದೆ.
ಇದನ್ನೂ ಓದಿ: ಚನ್ನಗಿರಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ರಾಶಿ ಬೆಲೆ ಎಷ್ಟಿದೆ
ಈ ಮೂಲಕ ಚಿತ್ರದುರ್ಗ ಜಿಲ್ಲೆಯ ಅಡಿಕೆ ಬೆಳೆಗಾರರಲ್ಲಿ ತಿಳಿಯಪಡಿಸುವುದೇನೆಂದರೆ, 2024 ನೇ ಸಾಲಿನ ಅಡಿಕೆ ಫಸಲು ಕೊಯ್ಲಿನ ಕಾಲ ಆರಂಭವಾಗಿದ್ದು, ಅಡಿಕೆ ಬೆಳೆಗಾರರು ತಮ್ಮ ತೋಟಗಳಲ್ಲಿಯೇ ಅಡಿಕೆಯನ್ನು ಮಾರಾಟ ಮಾಡುತ್ತಿರುತ್ತಾರೆ.
ಅಂದರೆ ತೋಟವನ್ನು ಖೇಣಿಗೆ ನೀಡುವುದು, ಹಸಿ ಅಡಿಕೆಯನ್ನೇ ಮಾರುವುದು, ಇಲ್ಲವೇ ಒಣ ಅಡಿಕೆ ತಯಾರಿಸಿ ಮಾರುವುದು ಇತ್ಯಾದಿಯಾಗಿ, ಇದೇ ರೀತಿಯಾಗಿ ಕಳೆದ ವರ್ಷಗಳಲ್ಲಿ ನಡೆದ ವಹಿವಾಟಿನಲ್ಲಿ ರೈತರಿಗೆ ವ್ಯಾಪಾರಸ್ಥರು ಸರಿಯಾಗಿ ಹಣವನ್ನು ಬಟವಾಡೆ ಮಾಡದೇ ಸತಾಯಿಸುತ್ತಿದ್ದು, ಈ ಬಗ್ಗೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿ ತನಿಖೆಯಲ್ಲಿದ್ದು, ಹಲವು ರೈತರು ವಂಚನೆಗೆ ಒಳಗಾಗಿರುತ್ತಾರೆ.
ಇದನ್ನೂ ಓದಿ: ವಾರದೊಳಗೆ ಭೂ ಸ್ವಾಧೀನ ಪೂರ್ಣಗೊಳಿಸಿ | ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಸೂಚನೆ
ಕಳೆದ ಸಾಲಿನಲ್ಲಿ ಕೆಲವು ರೈತರಿಗೆ ಆಗಿರುವ ಕಹಿ ಅನುಭವದ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಅಡಿಕೆ ಬೆಳೆಗಾರರಲ್ಲಿ ಕೋರುವುದೇನೆಂದರೆ ಈ ಮೇಲ್ಕಂಡಂತೆ ಅಡಿಕೆ ಮಾರಾಟದ ಸಮಯದಲ್ಲಿ ಮುಂಗಡವಾಗಿ ಎಲ್ಲಾ ಹಣವನ್ನು ಪಡೆದು ಮಾರಾಟ ಮಾಡುವುದು ಸರ್ವತಾ ಉತ್ತಮ, ರೈತರು ಬರೀ ನಂಬಿಕೆಗಳ ಮೇಲೆ ಇಲ್ಲವೇ ಚೀಟಿಗಳ ಮೇಲೆ ಬರೆದುಕೊಂಡು ವ್ಯವಹಾರ ನಡೆಸುತ್ತಿದ್ದು, ಈ ರೀತಿಯ ವಹಿವಾಟಿನಲ್ಲಿ ವ್ಯಾಪಾರಸ್ಥರು ರೈತರಿಗೆ ಹಣ ನೀಡದಿದ್ದಾಗ, ಕಾನೂನಿನ ಮೂಲಕ ರೈತರು ಹಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ: ವಿವಿ ಸಾಗರಕ್ಕೆ 2195 ಕ್ಯೂಸೆಕ್ ನೀರು
ಆದ್ದರಿಂದ ರೈತರು ತಮ್ಮ ಅಡಿಕೆ ಮಾರುವ ಸಮಯದಲ್ಲಿ ಮುಂಗಡವಾಗಿ ಎಲ್ಲಾ ಹಣವನ್ನು ಪಡೆಯಲು ಸಾಧ್ಯವಾಗದಿದ್ದಲ್ಲಿ ವ್ಯಾಪಾರಸ್ಥರು ಅಥವಾ ಖೇಣಿದಾರರಿಂದ ಕಾನೂನಿನ ಅಡಿಯಲ್ಲಿ ಮಾನ್ಯತೆ ಪಡೆದಿರುವ ಚೆಕ್ ಅಥವಾ ಪ್ರಾಮಿಸರಿ ನೋಟ್ ಅಥವಾ ಬಿಲ್ ಆಫ್ ಎಕ್ಸ್‍ಚೇಂಜ್ ನಂತಹ ಸೂಕ್ತ ಭದ್ರತೆ ಪಡೆದುಕೊಂಡು ವಂಚನೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಿ ತಮ್ಮ ಬೆಳೆಯನ್ನು ಮಾರಾಟ ಮಾಡಲು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ್ ಬಂಡಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.